ಕರ್ಮ ಬಡ್ಡಿ ಸಮೇತ ವಾಪಸ್ ಬರುತ್ತೆ: ಧನುಷ್ಗೆ ನಯನತಾರಾ ಕೌಂಟರ್..!?

ಲೇಡಿ ಸೂಪರ್ ಸ್ಟಾರ್ ನಯನತಾರಾ ಹಾಗೂ ಕಾಲಿವುಡ್ ನಟ ಧನುಷ್ ನಡುವೆ ನಡೆಯುತ್ತಿರುವ ಮುಸುಕಿನ ಗುದ್ದಾಟ ದಿನ ಕಳೆದಂತೆ ತಾರಕಕ್ಕೇರುತ್ತಲೇ ಇದೆ. ಬಹುಭಾಷಾ ನಟಿ ನಯನತಾರಾ ತಮ್ಮ ಇನ್ಸ್ಟಾಗ್ರಾಮ್ ಸ್ಟೇಟಸ್ನಲ್ಲಿ ಹಾಕಿಕೊಂಡಿರುವ ಕರ್ಮದ ಸಾಲುಗಳು ಸದ್ಯ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಇನ್ಸ್ಟಾಗ್ರಾಮ್ ಸ್ಟೇಟಸ್ನಲ್ಲಿ ಪೋಸ್ಟ್ ಮಾಡಿರುವ ನಟಿ ನಯನತಾರಾ, ‘ಕರ್ಮ ಹೇಳುತ್ತದೆ: ಸುಳ್ಳುಗಳಿಂದ ನೀವು ಯಾರದ್ದಾದರೂ ಜೀವನವನ್ನು ಹಾಳು ಮಾಡಿದರೆ ಅದನ್ನು ಸಾಲದ ರೀತಿ ಸ್ವೀಕರಿಸಿ. ನಂತರ ಅದು ನಿಮಗೆ ಬಡ್ಡಿ ಸಮೇತ ವಾಪಸ್ ಬರುತ್ತದೆ’ ಎಂದು ಪೋಸ್ಟ್ ಮಾಡಿದ್ದಾರೆ.

ನಟ ಧನುಷ್ ಹಾಗೂ ಐಶ್ವರ್ಯಾ ರಜನಿಕಾಂತ್ ವಿಚ್ಛೇದನಕ್ಕೆ ಇತ್ತೀಚೆಗಷ್ಟೇ ಕೋರ್ಟ್ ಅಧಿಕೃತವಾಗಿ ಒಪ್ಪಿಗೆ ನೀಡಿದೆ. ಇದೇ ವಿಚಾರವನ್ನು ಇಟ್ಟುಕೊಂಡು ನಟಿ ನಯನತಾರಾ ಈ ರೀತಿಯ ‘ಕರ್ಮ’ದ ಪೋಸ್ಟ್ ಮಾಡಿದ್ದಾರೆ ಎನ್ನುವ ಕುತೂಹಲ ಹಲವರಲ್ಲಿ ಮೂಡಿದೆ.
ಏನಿದು ನಯನತಾರಾ-ಧನುಷ್ ವಿವಾದ..?
ನಯನತಾರಾ ಅವರು ವಿಘ್ನೇಶ್ ಶಿವನ್ ಅವರ ಮದುವೆಯನ್ನು ಡ್ಯಾಕ್ಯುಮೆಂಟರಿ ರೀತಿ ಮಾಡಿ ನೆಟ್ಫ್ಲಿಕ್ಸ್ಗೆ ಕೊಡಲಾಗಿದೆ. ಈ ಡಾಕ್ಯುಮೆಂಟರಿಯಲ್ಲಿ ಸೇರಿಸಲು ತಾವು ಹಾಗೂ ವಿಘ್ನೇಶ್ ಒಟ್ಟಾಗಿ ಕೆಲಸ ಮಾಡಿದ ಮೊದಲ ಸಿನಿಮಾ ‘ನಾನುಂ ರೌಡಿ ದಾನ್’ ಸಿನಿಮಾದ ಕೆಲ ದೃಶ್ಯಗಳನ್ನು ನಯನತಾರಾ ಅವರು ಧನುಷ್ ಬಳಿ ಕೇಳಿದ್ದರು. ಆದರೆ ನಟ ಧನುಷ್ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದಕ್ಕೆ ಒಪ್ಪದ ನಯನತಾರಾ ಡಾಕ್ಯುಮೆಂಟರಿಯಲ್ಲಿ ಸಿನಿಮಾದ ದೃಶ್ಯಗಳನ್ನು ಹಾಗೆಯೇ ಬಳಸಿಕೊಂಡಿದ್ದರು. ಇದರಿಂದ ಸಿಟ್ಟಿಗೆದ್ದ ನಟ ಧನುಷ್ ಕಾನೂನು ಹೋರಾಟಕ್ಕೆ ಮುಂದಾದರು. ಹೀಗಾಗಿ ಧನುಷ್-ಐಶ್ವರ್ಯಾ ರಜನಿಕಾಂತ್ ವಿಚ್ಛೇಧನಕ್ಕೆ ಕೌಂಟರ್ ಕೊಡುವ ಸಲುವಾಗಿಯೇ ನಯನತಾರಾ ಹೀಗೆ ಉದ್ದನೆಯ ಸಾಲುಗಳನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೇಟಸ್ನಲ್ಲಿ ಬರೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.




