ಮಹಾಶಿವರಾತ್ರಿಗೆ ಬಹಳ ವಿಶೇಷವಾದ ಮಹತ್ವವಿದೆ. ಈ ದಿನ ಶಿವನ ಆರಾಧನೆ ಮಾಡುವುದರಿಂದ ನಮ್ಮ ಕಷ್ಟಗಳಿಂದ ಮುಕ್ತಿ ಸಿಗುತ್ತದೆ. ಈ ದಿನ ಶಿವಲಿಂಗಕ್ಕೆ ವಿಶೇಷ ಪೂಜೆಗಳನ್ನ ಮಾಡಲಾಗುತ್ತದೆ. ಹಾಗಾದ್ರೆ ಮಹಾಶಿವರಾತ್ರಿಗೂ ಶಿವಲಿಂಗಕ್ಕೂ ಏನು ಸಂಬಂಧ .? ಈ ದಿನ ಲಿಂಗದ ಪೂಜೆ ಮಾಡುವುದು ಏಕೆ ಹೆಚ್ಚು ಮುಖ್ಯ.?
ಹಿಂದೂ ಧರ್ಮದಲ್ಲಿ ಮಹಾಶಿವರಾತ್ರಿಗೆ ವಿಶೇಷ ಮಹತ್ವವಿದೆ. ಪ್ರತಿ ವರ್ಷ ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಮಹಾಶಿವರಾತ್ರಿಯನ್ನ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ದಿನ ಶಿವ ಭಕ್ತರಿಗೆ ಬಹಳ ವಿಶೇಷ ಎನ್ನಲಾಗುತ್ತದೆ. ಈ ದಿನ ಉಪವಾಸ ಮಾಡುವುದು ಹಾಗೂ ಶಿವಲಿಂಗದ ಪೂಜೆ ಮಾಡುವುದು ಬಹಳ ಪ್ರಯೋಜನಗಳನ್ನ ನೀಡುತ್ತದೆ. ಈ ವರ್ಷ ಮಹಾಶಿವರಾತ್ರಿ ಮಾರ್ಚ್ 8 ರಂದು ಬಂದಿದ್ದು, ಈ ದಿನ ಶಿವ ಹಾಗೂ ಪಾರ್ವತಿಯ ಮದುವೆ ಆಗಿದ್ದು ಎನ್ನಲಾಗುತ್ತದೆ.
ಮಹಾಶಿವರಾತ್ರಿ ದಿನ ಎಷ್ಟು ವಿಶೇಷವೋ ಅದೇ ರೀತಿ ಶಿವಲಿಂಗಕ್ಕೂ ಸಹ ಮಹತ್ವವಿದೆ. ಈ ದಿನ ತಪ್ಪದೇ ಶಿವಲಿಂಗಕ್ಕೆ ಪೂಜೆ ಹಾಗೂ ಅಭಿಷೇಕ ಮಾಡಬೇಕಾಗುತ್ತದೆ. ಇದನ್ನ ಮಾಡುವುದರಿಂದ ನಮ್ಮ ಕಷ್ಟಗಳಿಗೆ ಪರಿಹಾರ ಸಿಗುತ್ತದೆ. ಹಾಗಾದ್ರೆ ಮಹಾಶಿವರಾತ್ರಿಗೂ ಶಿವಲಿಂಗಕ್ಕೂ ಸಂಬಂಧವೇನು.? ಶಿವಲಿಂಗಕ್ಕೆ ಈ ದಿನ ಏಕೆ ಪೂಜೆ ಮಾಡಬೇಕು.?
ಶಿವಲಿಂಗವು ಶಿವನ ನಿರಾಕಾರ ಮತ್ತು ಅನಂತ ರೂಪ ಎನ್ನಲಾಗುತ್ತದೆ. ಅಂದರೆ ಆರಂಬ ಮತ್ತು ಅಂತ್ಯವಿಲ್ಲದ ಅಭಿವ್ಯಕ್ತಿ ಇದು ಎನ್ನುವ ನಂಬಿಕೆ ಸಹ ಇದೆ. ಶಿವನು ನಿರ್ಗುಣ , ನಿರಾಕರ್ ಮತ್ತು ಸಾಕಾರ ಮೂರ್ತಿ. ಸಂಸ್ಕೃತದಲ್ಲಿ ಲಿಂಗ ಎಂಬ ಪದವನ್ನು ಚಿಹ್ನೆ ಅಥವಾ ಸಂಕೇತಕ್ಕಾಗಿ ಬಳಸಲಾಗುತ್ತದೆ. ಹೀಗಾಗಿ ಶಿವಲಿಂಗ ಎಂದರೆ ಶಿವನ ಸಂಕೇತ. ನಂಬಿಕೆಗಳ ಪ್ರಕಾರ ಶಿವಲಿಂಗ ಜನಿಸಿದ್ದು ಮಹಾಶಿವರಾತ್ರಿ ದಿನ.
ಶಿವ ಮತ್ತು ಶಕ್ತಿಯ ಒಕ್ಕೂಟವು ಆತ್ಮ ಮತಯ್ತು ಮನಸ್ಸಿನ ಮಿಲನವನ್ನ ಸಂಕೇತಿಸುತ್ತದೆ. ಶಿವಲಿಂಗದ ಮಹಿಮೆಯನ್ನ ವೇದಗಳು ಮತ್ತು ಹಲವಾರು ಪುರಾಣಗಳಾದ ಶಿವಪುರಾಣ , ಲಿಂಗ ಪುರಾಣ , ಸ್ಕಂದ ಪುರಾಣ, ಕೂರ್ಮ ಪುರಾಣ, ವಾಯು ಪುರಾಣ, ಮತ್ತು ಇನ್ನೂ ಅನೇಕ ಪುರಾತಣ ಗ್ರಂಥಗಳಲ್ಲಿ ವಿವರಿಸಲಾಗಿದೆ. ಶಿವಲಿಂಗವು ಸೃಷ್ಟಿ, ಸಂರಕ್ಷಣೆ ಮತ್ತು ವಿನಾಶದ ಎಲ್ಲಾ ಮೂರು ಪ್ರಾಥಮಿಕ ಶಕ್ತಿಗಳನ್ನು ಒಳಗೊಂಡಿದೆ.
ಇನ್ನೂ ನಂಬಿಕೆಗಳ ಪ್ರಕಾರ ಮಹಾಶಿವರಾತ್ರಿಯ ದಿನ ಭಗವಾನ್ ವಿಷ್ಣು ಮತ್ತು ಬ್ರಹ್ಮ ಮೊದಲು ಶಿವಲಿಂಗದ ಪೂಜೆ ಮಾಡಿದ್ದರು . ಇದನ್ನ ಈಶಾನ್ ಸಂಹಿತೆಯಲ್ಲಿಯೂ ಉಲ್ಲೇಖಿಸಲಾಗಿದೆ. ಆದ್ದರಿಂದ ಈ ಮಹಾಶಿವರಾತ್ರಿಯಂದು ಶಿವಲಿಂಗದ ಪೂಜೆ ಮತ್ತು ಅಭಿಷೇಕಕ್ಕೆ ವಿಶೇಷ ಮಹತ್ವವಿದೆ.
ಇನ್ನು ಈ ಬಾರಯ ಶಿವರಾತ್ರಿ ಹಬ್ಬ ಬಹಳ ಮುಖ್ಯವಾಗಿದೆ. ಈ ದಿನ ಅನೇಕ ವಿಶೇಷ ಯೋಗಗಳು ರೂಪಗೊಳ್ಳುತ್ತದೆ. ಮಹಾಶಿವರಾತ್ರಿಯ ದಿನ ಶಿವಯೋಗ , ಸಿದ್ಧಯೋಗಗಳ ಸಂಯೋಗ ಸಹ ಆಗುತ್ತದೆ. ಇದರೀಮದ ಅಣೇಕ ರಾಶಿಯವರಿಗೆ ಅದೃಷ್ಟ ಒಲಿಯುತ್ತದೆ. ಮಹಾಶಿವರಾತ್ರಿಯಂದು ಪೂಜೆ ಮಾಡುವ ಭಕ್ತರಿಗೆ ವಿಶೇಷ ಫಲಗಳು ಹಾಗೂ ಯೋಗದಿಂದ ಪ್ರಯೋಜನಗಳು ಸಹ ಸಿಗುತ್ತದೆ.
https://youtu.be/wyja56tV_wQ?si=AM9x2uYF5rEDyzm9