ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಅಸಮಾಧಾನ ಹೊರಹಾಕಿದ್ದಾರೆ.
ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೆಲಸ ಕಂಗ್ರಸ್ ಮಾಡ್ತಿದೆ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ದಸರಾ ನಮ್ಮ ನಾಡ ಹಬ್ಬ. ಬಾನು ಮುಷ್ತಾಕ್ ಅತಿಥಿಯಾಗಿದ್ದಾರೆ. ಹಿಂದೂ ಧರ್ಮದ ಮೇಲೆ ನಂಬಿಕೆ ಇಲ್ಲದವರು, ಮೂರ್ತಿ ಪೂಜೆ ಒಪ್ಪದವರು, ದಸರಾಗೆ ಬಂದು ಏನ್ ಮಾಡ್ತಾರೆ.
ಸರ್ಕಾರ ಹಿಂದುಗಳ ಭಾವನೆಗೆ ಧಕ್ಕೆ ತರುತ್ತಿದೆ. ಲೇಖಕಿ ಬಾನು ಮುಷ್ತಾಕ್ ಚಾಮುಂಡಿ ಬೆಟ್ಟ ಹತ್ತಬಾರದು. ಅವರು ದೇವರಿಗೆ ಪುಷ್ಪಾರ್ಚನೆ ಮಾಡಲ್ಲ ಅಂತಾ ಭಾವಿಸುತ್ತೇನೆ. ಅವರು ಕಾರ್ಯಕ್ರಮದಿಂದ ಹೊರಹೋಗಬೇಕೆಂದು ಮನವಿ ಮಾಡುವೆ. ಅವರಿಗೆ ಚಾಮುಂಡೇಶ್ವರಿ ಮೇಲೆ ನಂಬಿಕೆ ಇದೆಯಾ ಹೇಳಲಿ. ಚಾಮುಂಡೇಶ್ವರಿ ಮೇಲೆ ನಂಬಿಕೆ ಇದ್ರೆ ನಮ್ಮ ವಿರೋಧವಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ನಾನು ಕನ್ನಡದಲ್ಲಿ ಎಲ್ಲಿ ನಿಲ್ಲಬೇಕು ಎಂದು ಬಾನು ಮುಸ್ತಾಕ್ ಕೇಳ್ತಾರೆ, ಅರಿಷಿಣ-ಕುಂಕುಮ ಧ್ವಜ ಉಪಯೋಗಿಸ್ತೀರಿ, ಅಲ್ಪಸಂಖ್ಯಾತೆಯಾಗಿ ನಾನೆಲ್ಲಿ ನಿಲ್ಲಬೇಕು ಎಂದು ಕೇಳ್ತಾರೆ. 2023 ರ ಜನಸಮ್ಮೇಳನ್ನದಲ್ಲಿ ಕೇಳ್ತಾರೆ. ಕನ್ನಡ ಧ್ವಜವನ್ನೇ ಒಪ್ಪದವರು ಚಾಮುಂಡೇಶ್ವರಿಯನ್ನ ಹೇಗೆ ಒಪ್ತಾರೆ? ಕಾಂಗ್ರೆಸ್ ಯಾರನ್ನು ಎಷ್ಟು ಅಪಮಾನ ಮಾಡ್ತೀರಿ. ಭುವನೇಶ್ವರಿ, ಚಾಮುಂಡಿಯನ್ನು ಒಪ್ಪದವರನ್ನು ದಸರಾ ಉದ್ಘಾಟನೆಗೆ ಹೇಗೆ ಕರೆದ್ರಿ ಎಂದು ಕಿಡಿಕಾರಿದರು.