Top Newsರಾಜಕೀಯರಾಜ್ಯವಾಣಿಜ್ಯಸುದ್ದಿ

ಸಿಎಂ ಸಿದ್ದರಾಮಯ್ಯ ಬಜೆಟ್ ಪ್ರಮುಖ ಘೋಷಣೆಗಳ್ಯಾವವು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಸಿಎಂ ಸಿದ್ದರಾಮಯ್ಯ ಅವರು ತಮ್ಮ ದಾಖಲೆಯ 16ನೇ ಬಜೆಟ್ ಮಂಡಿಸಿದ್ದಾರೆ. ಇನ್ನು ಸಿಎಂ ಸಿದ್ದರಾಮಯ್ಯ ರಾಜ್ಯದ ಹಲವಾರು ಇಲಾಖೆಗಳಿಗೆ ಭರಪೂರ ಕೊಡುಗೆ ನೀಡಿದ್ದಾರೆ. ಬಜೆಟ್ ಏನೆಲ್ಲಾ ಪ್ರಮುಖ ಘೋಷಣೆಗಳಿದ್ದವು ಅನ್ನೋದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ಮಲ್ಟಿಪ್ಲೆಕ್ಸ್ ಸೇರಿ ಎಲ್ಲಾ ಚಿತ್ರಮಂದಿರಗಳಲ್ಲಿ ಪ್ರತಿ ಪ್ರದರ್ಶನಕ್ಕೆ ₹200

ಬೆಂಗಳೂರಿನ ನಂದಿನಿ ಲೇಔಟ್​ನಲ್ಲಿ ಮಲ್ಟಿ ಸ್ಕ್ರೀನ್ ಸಮುಚ್ಛಯ

ಬೆಂಗಳೂರು ಮೂಲ ಸೌಕರ್ಯ ಅಭಿವೃದ್ಧಿ ₹7,000 ಕೋಟಿ ಅನುದಾನ

ಬೆಂಗಳೂರಲ್ಲಿ ಉತ್ತರ-ದಕ್ಷಿಣ, ಪೂರ್ವ-ಪಶ್ಚಿಮ ಟನಲ್ ಕಾರಿಡಾರ್

ಬೆಂಗಳೂರಲ್ಲಿ ಟನಲ್ ಕಾರಿಡಾರ್‌ಗೆ ₹19,000 ಕೋಟಿ ಅನುದಾನ

ಅಬಕಾರಿ ಇಲಾಖೆಗೆ ಪ್ರಸಕ್ತ ಸಾಲಿನಲ್ಲಿ ₹40,000 ತೆರಿಗೆ ಸಂಗ್ರಹ ಗುರಿ

ಶಾಲಾ ಮಕ್ಕಳಿಗೆ 6 ದಿನ ಮೊಟ್ಟೆ, ಬಾಳೆ ಹಣ್ಣು ವಿತರಣೆಗೆ ₹1,500 ಕೋಟಿ

ಆಶಾ ಕಾರ್ಯಕರ್ತೆಯರ ಸಹಾಯಧನ 1000 ರೂಪಾಯಿ ಏರಿಕೆ

ಅಂಗನವಾಡಿ ಸಹಾಯಕಿಯರಿಗೆ ₹750 ಸಹಾಯಧನ ಹೆಚ್ಚಳ

ಕೊಡಗಿನ ವಿರಾಜಪೇಟೆಯಲ್ಲಿ 400 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ

ಪುತ್ತೂರಿನಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆಯ ಉದ್ದೇಶ

ಚಿಂತಾಮಣಿ ತಾಲೂಕಿನಲ್ಲಿ 150 ಕೋಟಿ ವೆಚ್ಚದಲ್ಲಿ VTU ಘಟಕ ಕಾಲೇಜು

ಬಾಣಂತಿ ಮರಣ ಪ್ರಮಾಣ ಶೂನ್ಯಕ್ಕಿಳಿಸಲು 320 ಕೋಟಿ ಅನುದಾನ

ನೋಂದಾಯಿತ ಕಾರ್ಮಿಕರ ಮರಣ ಪರಿಹಾರ ₹75,000ದಿಂದ ₹1.5 ಲಕ್ಷಕ್ಕೇರಿಕೆ

ಕೆಲಸದ ಸ್ಥಳದಲ್ಲೇ ಮೃತಪಟ್ಟರೆ ಕುಟುಂಬಸ್ಥರಿಗೆ ಪರಿಹಾರ ₹5 ರಿಂದ ₹8 ಲಕ್ಷಕ್ಕೇರಿಕೆ

ಸ್ವ ಸಹಾಯ ಗುಂಪು ಮಹಿಳೆಯರಿಗೆ ಅಕ್ಕ ಕೋ-ಆಪರೇಟಿವ್ ಸೊಸೈಟಿ ಸ್ಥಾಪನೆ

ಗೃಹ ಲಕ್ಷ್ಮಿ ಯೋಜನೆ ಫಲಾನುಭವಿಗಳ ಸ್ವಸಹಾಯ ಸಂಘಗಳಿಗೆ ಸೊಸೈಟಿ

ಸ್ವ-ಸಹಾಯ ಸಂಘದ ಮಹಿಳೆಯರಿಗೆ ಇಂದಿರಾ ಕ್ಯಾಂಟೀನ್ ನಿರ್ವಹಣೆ

10 ನಗರ ಪ್ರದೇಶಗಳಲ್ಲಿ ಪ್ರಯೋಗಿಕವಾಗಿ ನಿರ್ವಹಣೆಗೆ ನೀಡಲಾಗುವುದು

ಪತ್ರಕರ್ತರಿಗೆ ಮಾಸಾಶನ 12,000 ದಿಂದ 15,000ಕ್ಕೆ ಏರಿಕೆ.

Comments (0)

Your email address will not be published. Required fields are marked *

Back to top button