
ಟೆಕ್ನಾಲಿಜಿ ಎಷ್ಟೇ ಮುಂದುವರಿದ್ರು ಕಳ್ಳರ ಕಾಟ ನಿಂತಿಲ್ಲ. ನಿತ್ಯ ಒಂದಲ್ಲ ಒಂದು ಕಳ್ಳತನ ಕೇಸ್ ಗಳು ವರದಿಯಾಗ್ತನೇ ಇರುತ್ತವೆ. ಅಂಗಡಿ, ಸೂಪರ್ ಮಾರ್ಕೆಟ್ ಗಲ್ಲಿ ಕಳ್ಳತನ ಕೇಸ್ ಗಳು ಹೆಚ್ಚಾಗಿದ್ದು, ಇದರ ನಿಯಂತ್ರಣಕ್ಕೆ ಹೊಸ ಪ್ಲಾನ್ ರೂಪಿಸಲಾಗಿದೆ. ಕೆಲ ಕಿರಾತಕರು ಗೊತ್ತಾಗಬಾರದು ಅಂತ ಮಾಸ್ಕ್ ಹಾಕಿಕೊಂಡು ಕಳ್ಳತನ ಮಾಡೋದು ಹೆಚ್ಚಾಗಿದೆ. ಹೀಗಾಗಿ ಕಳ್ಳರಿಗೆ ಬ್ರೇಕ್ ಹಾಕಲು ಇನ್ಮೇಲೆ ಮಾಸ್ಕ್ ಹಾಕಿಕೊಂಡು ಬಂದರೆ ಸೂಪರ್ ಮಾರುಕಟ್ಟೆ ಗಳ ಒಳಗೆ ಬಿಡೋದಿಲ್ಲ ಅಂತ ಮಾಲೀಕರು ಹೇಳ್ತಿದ್ದಾರೆ. ಮಾಸ್ಕ್ ಹಾಕಿಕೊಂಡು ಬಂದರೆ ಕಳ್ಳರ ಮುಖ ಪತ್ತೆ ಮಾಡೋದು ಕಷ್ಟ ಅಂತ ಮಾಸ್ಕ್ ಗೆ ನಿರ್ಬಂಧ ಹಾಕಲಾಗಿದೆ. ಕಳ್ಳರ ಹಾವಳಿ ನಿಯಂತ್ರಿಸಲು ನೋ ಮಾಸ್ಕ್ ಅಸ್ತ್ರವನ್ನ ಸೂಪರ್ ಮಾರುಕಟ್ಟೆ ಮಾಲೀಕರು ಮುಂದಾಗಿದ್ದಾರೆ


