Wednesday, April 30, 2025
29.2 C
Bengaluru
LIVE
ಮನೆ#Exclusive Newsಬೆಳ್ಳಿ ಗದೆ ನಾವು ಮನೆಗೆ ತರಲ್ಲ, ಅಲ್ಲೆ ಬೆಳ್ಳಿ ಗದೆಯನ್ನ ಕೊಟ್ಟು ಬಂದಿದ್ದೇನೆ ; ಡಿಕೆ...

ಬೆಳ್ಳಿ ಗದೆ ನಾವು ಮನೆಗೆ ತರಲ್ಲ, ಅಲ್ಲೆ ಬೆಳ್ಳಿ ಗದೆಯನ್ನ ಕೊಟ್ಟು ಬಂದಿದ್ದೇನೆ ; ಡಿಕೆ ಸುರೇಶ್ 

ಬೆಂಗಳೂರು: ಡಿಕೆ ಸುರೇಶ್  ತಂಗಿ ಎಂದು ಹೇಳಿ ಐಶರ್ಯಾ ಗೌಡ ವಂಚನೆ ಪ್ರಕರಣ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಲು ಮಾಜಿ ಸಂಸದ ಡಿಕೆ ಸುರೇಶ್ ನಿರ್ಧರಿಸಿದ್ದಾರೆ.ಈ ಕುರಿತು ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ನನ್ನ ಹೆಸರು ದುರ್ಬಳಕೆ ಆಗಿದೆ. ನಮಗೆ ಇರೋದು ಒಬ್ಬಳೇ ತಂಗಿ. ನಮ್ಮ ಅಣ್ಣಾನೆ ಬೇಜಾರು ಮಾಡಿಕೊಂಡಿದ್ದಾನಂತೆ. ನನಗೆ ಗೊತ್ತಿಲ್ಲದೆ ಇವನಿಗೆ ಇನ್ನೊಬ್ಬಳು ತಂಗಿ ಯಾರು ಅಂತ ಎಂದು ಡಿಕೆ ಸುರೇಶ್‌ ಮುಗುಳುನಕ್ಕರು.ನನ್ನ ಹೆಸರು ಬಳಕೆ ಮಾಡಿದ್ರೆ ಕ್ರಮ ತಗೊಳ್ಳಿ ಅಂತ ಪೊಲೀಸರಿಗೆ ಹೇಳ್ತೀನಿ, ಪೊಲೀಸರಿಗೆ ದೂರು ಕೊಡ್ತೀನಿ ಅಂತಾ ತಿಳಿಸಿದ್ರು. ಒಂದು ಕಾರ್ಯಕ್ರಮಕ್ಕೆ ಕರೆದಿದ್ದರು. ಆ ಕಾರ್ಯಕ್ರಮಕ್ಕೆ ಹೋಗಿದ್ದೆ, ಇನ್ನೊಂದು ಕಾರ್ಯಕ್ರಮಕ್ಕೆ ಕರೆದಿದ್ದರು ಆದ್ರೆ ನಾನು ಹೋಗಿಲ್ಲ ಅಂದ್ರು.

ಪೊಲೀಸ್ ಕಮಿಷನರ್‌ಗೆ ಎರಡು ಮೂರು ದಿನದಲ್ಲಿ ಪತ್ರ ಬರೆಯಲಿದ್ದೇನೆ. ಬೆಳ್ಳಿ ಗದೆ ನಾವು ಮನೆಗೆ ತರಲ್ಲ, ಅಲ್ಲೆ ಬೆಳ್ಳಿ ಗದೆಯನ್ನ ಕೊಟ್ಟು ಬಂದಿದ್ದೇನೆ. ನಾನು ನಮ್ಮ ಅಣ್ಣಾ ಯಾವುದನ್ನೂ ಮನೆಗೆ ತರಲ್ಲ. ಪೊಲೀಸ್ ಕಮೀಷನರ್‌ಗೆ ದೂರು ಕೊಡೋಕೆ ಡ್ರಾಫ್ಟ್ ಸಿದ್ದಪಡಿಸಿದ್ದೇನೆ. ಪೊಲೀಸ್ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ 3-4 ದಿನದಲ್ಲಿ ದೂರು ನೀಡುತ್ತೇನೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments