Tuesday, April 29, 2025
30.4 C
Bengaluru
LIVE
ಮನೆರಾಜಕೀಯದಲಿತ ಎಂಬ ಕಾರಣಕ್ಕೆ ಖರ್ಗೆಯವರನ್ನು ಸೋಫಾದ ಮೇಲೆ ಕೂರಿಸಿಲ್ವಾ? ಅಸಲಿ ಸತ್ಯವೇನು?

ದಲಿತ ಎಂಬ ಕಾರಣಕ್ಕೆ ಖರ್ಗೆಯವರನ್ನು ಸೋಫಾದ ಮೇಲೆ ಕೂರಿಸಿಲ್ವಾ? ಅಸಲಿ ಸತ್ಯವೇನು?

ಗುಜರಾತ್: ಅಹ್ಮದಾಬಾದ್​ನಲ್ಲಿ AICC ಕಾರ್ಯಕಾರಣಿ ಸಭೆ ನಡೆಯುತ್ತಿದೆ. ಈ ಪ್ರಯುಕ್ತ ಕಾಂಗ್ರೆಸ್​ ಘಟಾನುಘಟಿ ನಾಯಕರೆಲ್ಲಾ ಅಹ್ಮದಾಬಾದ್​ನಲ್ಲಿ ಸೇರಿದ್ದಾರೆ. ಹೇಗೋ ಅಹ್ಮದಾಬಾದ್​ಗೆ ಬಂದಿದ್ದೀವಿ ಅಂತ ನಾಯಕರೆಲ್ಲಾ ಗಾಂಧೀಜಿಯ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ್ರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್​ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಅವಮಾನು ಮಾಡಿದ್ರು ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಆದ್ರೆ, ಅಸಲಿ ಸತ್ಯ ಏನಂದ್ರೇ, ಸಬರಮತಿ ಆಶ್ರಮದಲ್ಲಿ ಮಹಾತ್ಮ ಗಾಂಧೀಜಿ ಅವರಿಗೆ ಕಾಂಗ್ರೆಸ್​ ನಾಯಕರೆಲ್ಲಾ ನಮಿಸಿದ್ರು, ಇದೇ ವೇಳೇ ಗಾಂಧೀಜಿಗೆ ಇಷ್ಟವಾದ ವೈಷ್ಣವ ಜನತೋ ಹಾಡನ್ನು ಹಾಕಿದ್ರು.. ಇದೇ ಸಂದರ್ಭದಲ್ಲಿ ಎಲ್ಲರೂ ಒಂದೆಡೆ ಕೂತು ಪ್ರಾರ್ಥನೆ ಮಾಡ್ತಿದ್ರು. ಈ ಪ್ರಾರ್ಥನೆ ಶುರುವಾಗೋ ಮುಂಚಿನವೊಂದು ದೃಶ್ಯವನ್ನು ವೈರಲ್ ಮಾಡಲಾಗ್ತಿದೆ. ದೃಶ್ಯದಲ್ಲಿ ಮೆತ್ತನೆಯ ಸೋಫಾ ಸೆಟ್​ ಇದೆ, ಮತ್ತೊಂದೆಡೆ ಕುರ್ಚಿ ಇದೆ. ಸೋಫಾದ ಮೇಲೆ ಸೊನೀಯಾ ಗಾಂಧಿ, ರಾಹುಲ್​ ಗಾಂಧಿ, ಕೆ.ಸಿ.ವೇಣುಗೋಪಾಲ್​ ಅವರವರ ಜಾಗದಲ್ಲಿ ಕುಳಿತು ಕೊಳ್ತಾರೆ, ಇದೇ ವೇಳೆ ಅಂಬಿಕಾ ಸೋನಿ ಬರ್ತಾರೆ, ಅವರನ್ನು ಖುದ್ದು ಖರ್ಗೆಯವರೇ ಸೋಫಾದಲ್ಲಿ ಕೂರಿಸುತ್ತಾರೆ. ನಂತರ ಪ್ರತ್ಯೇಕವಾಗಿ ಹಾಕಲಗಿದ್ದ ಕುರ್ಚಿಯಲ್ಲಿ ಖರ್ಗೆಯವರು ಕುಳಿತು ಕೊಳ್ತಾರೆ. ಇದೇ ದೃಶ್ಯ ಇದೀಗ ವಿಔಆದದ ಸ್ವರೂಪ ಪಡೆದಿದೆ. ಹಾಗಿದ್ರೆ, ನಿಜಕ್ಕೂ ಖರ್ಗೆಯವರು ದಲಿತ ಎಂಬ ಕಾರಣಕ್ಕೆ ಸೋಫಾದಲ್ಲಿ ಕೂರಿಸಿಲ್ವಾ? ಅನ್ನೋದು ಜನಸಾಮಾನ್ಯರಲ್ಲಿ ಪ್ರಶ್ನೆ ಮೂಡಿದೆ. ನಿಜವಾಗಲೂ ಇದರ ಅಸಲಿಯತ್ತೇನು ಅನ್ನೋದು ಫ್ರೀಡಂ ಟಿವಿ ಬಯಲು ಮಾಡಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಈಗ 82 ವರ್ಷ, ಮೊದಲೇ ಆಜಾನುಬಾಹು, ಎತ್ತರ, ಗಾತ್ರದಲ್ಲಿ ಬಲ ಭೀಮನನ್ನು ನೆನಪಿಸುತ್ತಾರೆ. ಈ ವಯಸ್ಸಿನಲ್ಲೂ ಅವರು ಅಷ್ಟು ಆ್ಯಕ್ಟಿವ್ ಆಗಿರೋದು ಗ್ರೇಟ್​. ಅಂದಹಾಗೇ, ಖರ್ಗೆಯವರು ಸೋಫಾದಲ್ಲಿ ಕೂರದಿರಲು ಅಸಲಿ ಕಾರಣವೆಂದ್ರೆ,

ಸೋಫಾ ಮೆತ್ತಗಿದೆ.. ಕೂತರೆ ಸುಲಭವಾಗಿ ಮೇಲೆ ಏಳುವುದು ಕಷ್ಟ, ಹಾಗೂ ಸೋಫಾಗೆ ಹಿಂಬದಿಯಲ್ಲಿ ಕೂತರೆ ಮೇಲೆ ಏಳುವುದು ಕಷ್ಟ. ಸೋಫಾಗೆ ಹಿಂಬದಿಯಲ್ಲಿ ಯಾವುದೇ ಸಪೋರ್ಟ್​ ಇಲ್ಲ, ಹೀಗಾಗಿ ಯಾವುದೇ ಆಸರೆ ಇಲ್ಲದೇ ಖರ್ಗೆಯವರು ಮೇಲೆ ಏಳುವುದು ಕಷ್ಟ. ಇದನ್ನು ಅರಿತೇ ಸಬರಮತಿ ಆಶ್ರಮದ ಸಿಬ್ಬಂದಿ ಖರ್ಗೆ ಅವರಿಗೆ ಕುರ್ಚಿ ಹಾಕಿರಬಹುದು. ಕುರ್ಚಿ ಆದ್ರೆ ಖರ್ಗೆಯವರಿಗೆ ಅನೂಕೂಲ, ಖರ್ಗೆಯವರಿಗೆ ಕುರ್ಚಿ ಅನುಕೂಲ ಆಗುತ್ತೆ, ಕುರ್ಚಿ ಹಿಂಭಾಗ ಆಸರೆಯೂ ಆಗುತ್ತೆ. ಇಂತಹ ಕುರ್ಚಿಯಲ್ಲಿ ಕುಳಿತ ಎಂಥವರಿಗೂ ಮೇಲೆ ಏಳಲು ಸುಲಭ ಸಾಧ್ಯ. ಈ ಕಾರಣದಿಂದಾಗಿ ಖರ್ಗೆಯವರಿಗೆ ಪ್ರತ್ಯೇಕ ಕುರ್ಚಿ ಹಾಕಿರಬಹುದು ಹೊರತು ಖರ್ಗೆಯವರ ಜಾತಿ, ಅಸ್ಪೃಶ್ಯತೆ ಕಾರಣದಿಂದ ಅಲ್ಲ ಅನ್ನೋದು ಸುಲಭವಾಗಿ ಕಾಣಬಹುದು.

ಮಲ್ಲಿಕಾರ್ಜುನ್ ಖರ್ಗೆ ಅವರು ದಲಿತ ಎಂಬ ಕಾರಣಕ್ಕೆ ಖಂಡಿತವಾಗಿಯೂ ಅವರನ್ನು ಅಪಮಾನಿಸಲಾಗಿಲ್ಲ. ಇದಕ್ಕೆ ಮತ್ತೊಂದು ಸಾಕ್ಷ್ಯವಿದೆ. AICC ಕಾರ್ಯಕಾರಣಿ ಸಭೆಯಲ್ಲಿ CWC ಸಭೆಯಲ್ಲಿ ಸೋನಿಯಾ ಗಾಂಧಿ ಪಕ್ಕದಲ್ಲೇ ಖರ್ಗೆಯವರು ಕುಳಿತಿದ್ದಾರೆ. ಈ ಸಭೆಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಖರ್ಗೆಯವರಿಗೆ ಒಂದೇ ತರಹದ ಕುರ್ಚಿಯನ್ನು ಇಡಲಾಗಿದೆ.

ಸೋನಿಯಾ ಗಾಂಧಿ ಆಗಲಿ, ರಾಹುಲ್ ಗಾಂಧಿ ಆಗಲಿ, ಖರ್ಗೆಯವರ ಜಾತಿ ಕಂಡಿಲ್ಲ. ಮಲ್ಲಿಕಾರ್ಜುನ್ ಖರ್ಗೆಯವರನ್ನು ಗಾಂಧಿ ಕುಟುಂಬ ಅತ್ಯಂತ ಗೌರವದಿಂದ ಕಾಣುತ್ತೆ. ಹೀಗಂತ ದೆಹಲಿ ರಾಜಕಾರಣದ ಅಂತರಂಗ ಗೊತ್ತಿದ್ದವರು ಹೇಳುತ್ತಾರೆ. ಎಷ್ಟೋ ಬಾರಿ ಖರ್ಗೆಯವರು ಕುರ್ಚಿಯಿಂದ ಕೂರಲು, ಕುರ್ಚಿಯಿಂದ ಏಳಲು ರಾಹುಲ್ ಗಾಂಧಿ ಅವರು ಸಹಾಯ ಮಾಡಿದ್ದಾರೆ. ಇದಕ್ಕೆ ಸಾಕ್ಷ್ಯ ಎಂಬಂತೆ ಹಲವು ವಿಡಿಯೋಗಳು ಲಭ್ಯವಿದೆ.

ಈಗ ನಿಮ್ಮ ವಿವೇಚನಗೆ ಬಿಟ್ಟಿದ್ದು, ಖರ್ಗೆಯವರನ್ನು ಗಾಂಧಿ ಕುಟುಂಬ ಅತ್ಯಂತ ಗೌರವಯುತವಾಗಿ ಕಾಣುತ್ತೆ. ಒಂದು ವೇಳೆ ಏನಾದ್ರು, ಖರ್ಗೆಯವರು ದಲಿತ ಎಂಬ ಕಾರಣಕ್ಕೆ ಪ್ರತ್ಯೇಕ ಕುರ್ಚಿಯಲ್ಲಿ ಕುಳಿಸಿದ್ದರೇ ಅದು ಇಡೀಯ ನಾಗರಿಕ ಸಮಾಜ ತಲೆತಗ್ಗಿಸುವ ವಿಷಯ ಅನ್ನಬಹುದು, ಹಾಗಾಗದಿರಲಿ ಅನ್ನೋದೆ ನಮ್ಮ ಆಶಯ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments