400 ಭಾರತೀಯ ಯೋಧರಿಗೆ ಪೈಲೆಟ್ ತರಬೇತಿ ಕೊಟ್ಟಿರುವ ಕ್ಯಾಪ್ಟನ್ ಅರವಿಂದ್ ಶರ್ಮಾ ಅವರ ಸಂದರ್ಶನವನ್ನು ಫ್ರೀಡಂ ಟಿವಿಯ ಆಂಕರ್ ಸಾಹೀಲ್ ಮಾಡಿದ್ದಾರೆ.
ಯುದ್ಧ ಮೆತ್ತನೆಯ ಹಾಸಿಗೆ ಅಲ್ಲ.. ಅದು ವಿಶಾಲವಾದ ಸ್ಮಶಾನದಂತೆ.. ಎಂದು ಅವರು ತಮ್ಮ ಅನುಭವದ ಮಾತನ್ನು ಹೇಳುತ್ತಾರೆ.
ಯುದ್ಧಕ್ಕೆ ಹಾತೊರೆಯೋದು.. ಯುದ್ಧದ ಉನ್ಮಾದ ಸೃಷ್ಟಿಸುವುದು ನಮ್ಮ ಹಿನ್ನೆಡೆಗೆ ಅವಕಾಶ ಮಾಡಿಕೊಟ್ಟ೦ತೆ ಎಂದು ಕ್ಯಾಪ್ಟನ್ ಅರವಿಂದ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.
ಯುದ್ಧದ ದುಷ್ಪರಿಣಾಮಗಳಿಗೆ ಜೀವಂತ ಸಾಕ್ಷಿ ಹಿರೋಷಿಮಾ,ನಾಗಸಾಕಿ.. ಎರಡನೇ ಮಹಾಯುದ್ಧದಿಂದ ಈ ಎರಡು ನಗರಗಳು ಈಗಲೂ ನೇರವಾಗಿ, ಪರೋಕ್ಷವಾಗಿ ನಲುಗುತ್ತಿವೆ.
ಯುದ್ಧ ಎನ್ನುವುದು ವಿಶಾಲವಾದ ಸ್ಮಶಾನದಂತೆ.. ಯುದ್ಧದಿಂದ ಕಳೆದುಕೊಂಡಿದ್ದನ್ನ ಮರಳಿ ಪಡೆಯಲು ಮತ್ತಿಪ್ಪತ್ತು ವರ್ಷಗಳು ಬೇಕಾದೀತು.
ಹೀಗಾಗಿ ನಾವು ಯುದ್ಧಕ್ಕಿಂತಲೂ ಬುದ್ದಿವಂತಿಕೆಯಿಂದ ಪಾಕಿಸ್ಥಾನವನ್ನ ಬಗ್ಗುಬಡಿಯಬಹುದು..ಈ ನಿಟ್ಟಿನಲ್ಲಿ ಆಲೋಚಿಸುವುದು ಒಳಿತು ಎಂದು ಪೈಲೆಟ್ ಅರವಿಂದ್ ಶರ್ಮಾ ಅವರು ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.