Wednesday, April 30, 2025
29.2 C
Bengaluru
LIVE
ಮನೆ#Exclusive NewsTop Newsಈ ಆಸ್ತಿ ಜಮೀರ್ ಅಹ್ಮದ್ ಅಪ್ಪಂದಾ? ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ

ಈ ಆಸ್ತಿ ಜಮೀರ್ ಅಹ್ಮದ್ ಅಪ್ಪಂದಾ? ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ

ಹುಬ್ಬಳ್ಳಿ: ವಕ್ಫ್ ಬೋರ್ಡ್ ಆಸ್ತಿ ಜಮೀರ್ ಅಹ್ಮದ್ ಬಂದಾಗ 11 ಸಾವಿರ ಎಕರೆ ಇತ್ತು. ಈಗ ಜಿಲ್ಲಾಧಿಕಾರಿ ನನಗೆ ಮಾಹಿತಿ ಕೊಟ್ಟಂತೆ 16 ಸಾವಿರ ಎಕರೆ ಕರ್ನಾಟಕದಲ್ಲೇ ಇದೆ ಎಂದು ಗೊತ್ತಾಗಿದೆ. 6.5 ಲಕ್ಷ ಎಕರೆ ಜಾಗ ಕ್ಲೇಮ್ ಮಾಡುತ್ತಿದ್ದಾರೆ. ಈ ಆಸ್ತಿ ಜಮೀರ್ ಅಹ್ಮದ್ ಅಪ್ಪಂದಾ? ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.

ರಾಜ್ಯದಲ್ಲೇ ಹೀಗಾದ್ರೆ ದೇಶದಲ್ಲಿ ಎರಡು ಪಾಕಿಸ್ತಾನ ಆಗುತ್ತದೆ ಎಂದರು. 1,500 ವರ್ಷಗಳ ಹಿಂದೆ ಮುಸಲ್ಮಾನರು ಎಲ್ಲಿದ್ರೂ? ಹಿಂದೂಗಳನ್ನು ಟಿಪ್ಪು ಸುಲ್ತಾನ್‍ಗೆ ಹೆದರಿ ಹಲವರು ಮತಾಂತರ ಆಗಿದ್ದಾರೆ. ಇವರಿಗೆ ಈ ದೇಶದ ಮೇಲೆ ಯಾವುದೇ ಹಕ್ಕಿಲ್ಲ. ಜಮೀರ್ ಅಹ್ಮದ್ ಖಾನ್ ಅವರ ತಾತನವರು ಮೊಘಲ್ ದಾಳಿಗೆ ಹೆದರಿ ಮತಾಂತರ ಆದವರು. ನಮ್ಮ ತಾತನವರು ಗಟ್ಟಿ, ಮೊಘಲರ ವಿರುದ್ಧ ಹೋರಾಡಿದವರು. ಮಹಾತ್ಮಾ ಎನ್ನಬಾರದು, ಗಾಂಧಿ ಮತ್ತು ನೆಹರು ಈ ದೇಶ ಹಾಳು ಮಾಡಿದರು ಎಂದು ಅವರು ಹೇಳಿದ್ದಾರೆ.

ಹಳೇ ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಪಡೆದಿರುವುದು ದುರಂತ. ದೇಶದ್ರೋಹಿಗಳು ಪೊಲೀಸ್ ಠಾಣೆ ಸುಡಲು ಮುಂದಾಗಿದ್ದರು. ದೇಶದಲ್ಲಿ ಯಾವುದೇ ಪಕ್ಷ ಇದ್ದರೂ ಇಂತಹದ್ದನ್ನು ಒಪ್ಪಿಕೊಳ್ಳಬಾರದು. ಈ ರೀತಿ ಮಾಡಿದ್ರೆ ಪೊಲೀಸರ ನೈತಿಕ ಬಲ ಅಡಗಿ ಹೋಗುತ್ತದೆ. ಈ ಪ್ರಕರಣ ಕೆಜೆ ಹಳ್ಳಿ ಡಿಜೆ ಹಳ್ಳಿ ನಂತರ ಬಹಳ ಗಂಭೀರವಾದದ್ದು. ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ವಾಪಸ್ ತೆಗೆದುಕೊಳ್ಳಬಾರದು. ಹಾಗೇನಾದ್ರೂ ಮಾಡಿದರೆ ಹೈಕೋರ್ಟ್ ಮೆಟ್ಟಿಲು ಹತ್ತುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಪವಿತ್ರ ಹಾಲುಮತದಲ್ಲಿ ಹುಟ್ಟಿಯೂ ಮುಸ್ಲಿಂನಾಗಿ ಹುಟ್ಟುಬೇಕು ಎನ್ನುತ್ತಾರೆ. ಮುಸ್ಲಿಂಮರಿಗೆ 10 ಸಾವಿರ ಕೋಟಿ ರೂ. ಕೊಡುತ್ತೇನೆ ಎಂದು ಹೇಳಿದ್ದರು. ಅವರಿಗೆ ಅಭಿಮಾನ ಇದ್ದರೆ ಹಾಲುಮತ ಸಮಾಜಕ್ಕೆ ನೀಡಲಿ. ಗೋರಿಗೆ ಕೋಟಿ ರೂ. ಕೊಡ್ತಿನಿ ಎನ್ನುತ್ತಾರೆ ಎಂದು ಕಿಡಿಕಾರಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments