Monday, June 23, 2025
26.6 C
Bengaluru
Google search engine
LIVE
ಮನೆSports10 ವರ್ಷಗಳ ಬಳಿಕ ಬಾಲ್ಯದ ಸ್ನೇಹಿತನನ್ನು ಭೇಟಿಯಾದ ಕೊಹ್ಲಿ

10 ವರ್ಷಗಳ ಬಳಿಕ ಬಾಲ್ಯದ ಸ್ನೇಹಿತನನ್ನು ಭೇಟಿಯಾದ ಕೊಹ್ಲಿ

ಬಾಲ್ಯದಲ್ಲಿ ಜೊತೆಯಾಗಿ ಆಡಿ ಬೆಳೆದವರು… ಜೊತೆ ಜೊತೆಯಾಗಿ ಕೀಟಲೆ ಮಾಡಿದವರು… ಜೊತೆಯಾಗಿಯೇ ದೊಡ್ಡ ಕನಸು ಕಂಡವರು… ಆದರೆ ಬೆಳೀತಾ ಬೆಳೀತಾ ದೂರವಾದರು. ಹೀಗೆ ದೂರವಾದವರು ಮಂಗಳವಾರ ಭೇಟಿಯಾಗಿದ್ದಾರೆ. ಅದು ಸಹ ಬರೋಬ್ಬರಿ 10 ವರ್ಷಗಳ ಬಳಿಕ. ವಿರಾಟ್ ಕೊಹ್ಲಿ ತಮ್ಮ ಬಾಲ್ಯದ ಗೆಳೆಯ ಶಾವೇಝ್ ಖಾನ್ ಅವರನ್ನು ಹತ್ತು ವರ್ಷಗಳ ಬಳಿಕ ಭೇಟಿಯಾಗಿದ್ದಾರೆ.

ವಿರಾಟ್ ಕೊಹ್ಲಿ ದೆಹಲಿಯ ಡಿಡಿಸಿ ಕ್ರಿಕೆಟ್ ಮೈದಾನದಲ್ಲಿ ರಣಜಿ ಟೂರ್ನಿ ಪಂದ್ಯದ ಅಭ್ಯಾಸಕ್ಕಾಗಿ ಆಗಮಿಸಿದ್ದರು. ಇದೇ ವೇಳೆ ಕೊಹ್ಲಿಯ ಚೈಲ್ಡ್​ವುಡ್ ಫ್ರೆಂಡ್ ಶಾವೇಝ್ ಖಾನ್ ತಮ್ಮ ಮಗನೊಂದಿಗೆ ಮೈದಾನಕ್ಕೆ ಆಗಮಿಸಿದ್ದಾರೆ. ಅಲ್ಲದೆ ನೇರವಾಗಿ ವಿರಾಟ್ ಕೊಹ್ಲಿ ಬಳಿ ತೆರಳಿ ಸಪ್ರೈಸ್ ನೀಡಿದ್ದಾರೆ.

ಇಬ್ಬರು ಸಂತೋಷದಿಂದ ಆಲಿಂಗನ ಮಾಡುತ್ತಿರುವ ಫೋಟೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ ಶಾವೇಝ್ ತನ್ನ ಮಗನನ್ನು ಕೊಹ್ಲಿಗೆ ಪರಿಚಯಿಸಿದ್ದಾರೆ. ಇನ್ನು ವಿಶೇಷ ಎಂದರೆ 9 ವರ್ಷದ ಮಗನಿಗೂ ತಂದೆಯ ಫ್ರೆಂಡ್ ಅಂದರೆ ಪಂಚಪ್ರಾಣ.

ಅದರಲ್ಲೂ ಶಾವೇಝ್ ಖಾನ್ ಅವರ ಪುತ್ರ ಕೂಡ ಕೊಹ್ಲಿಯಂತೆ ಕ್ರಿಕೆಟಿಗನಾಗಬೇಕೆಂದು ಕನಸು ಕಟ್ಟಿಕೊಂಡಿದ್ದಾರೆ. ಅಲ್ಲದೆ ಟೀಮ್ ಇಂಡಿಯಾ ಪರ ಆಡಬೇಕೆಂಬ ಮನದಾಸೆಯನ್ನು ಸಹ ಕೊಹ್ಲಿಗೆ ತಿಳಿಸಿದ್ದಾರೆ. ಇದಕ್ಕಾಗಿ ನಾನೇನು ಮಾಡಬೇಕೆಂದು ಪುಟ್ಟ ಬಾಲಕ ಕೊಹ್ಲಿ ಜೊತೆ ಕೇಳಿದ್ದರು.

ಈ ಪ್ರಶ್ನೆಗೆ ವಿರಾಟ್ ಕೊಹ್ಲಿ ನೀಡಿದ ಉತ್ತರ… ಪರಿಶ್ರಮ ಮತ್ತು ಕಠಿಣ ಪರಿಶ್ರಮ. ನೀನೀಗ ಒಂದು ಗಂಟೆ ಪ್ರಾಕ್ಟೀಸ್ ಮಾಡುತ್ತಿದ್ದರೆ, ಇನ್ಮುಂದೆ 2 ಗಂಟೆಗಳ ಕಾಲ ಪ್ರಾಕ್ಟೀಸ್ ಮಾಡು. ಸಕ್ಸಸ್ ಆಗಲು ಇದೊಂದೇ ದಾರಿ. ಈಗ ನೀ 50 ರನ್​ಗಳಿಸುತ್ತಿದ್ದರೆ, 100 ರನ್​ಗಳಿಸಲು ಪ್ರಯತ್ನಿಸು. ಈಗೇನು ಮಾಡುತ್ತಿದ್ದೀಯಾ ಅದನ್ನು ದ್ವಿಗುಣಗೊಳಿಸು. ಹೀಗೆ ಕಠಿಣ ಪರಿಶ್ರಮ ಪಡುತ್ತಾ ಆಟವನ್ನು ಆಸ್ವಾದಿಸು. ಹೀಗೆ ಮಾಡಿದರೆ ಮುಂದೊಂದು ದಿನ ಯಶಸ್ಸು ಸಿಗುತ್ತದೆ ಎಂದು ಶಾವೇಝ್ ಖಾನ್ ಪುತ್ರನಿಗೆ ವಿರಾಟ್ ಕೊಹ್ಲಿ ಕಿವಿಮಾತು ಹೇಳಿದ್ದಾರೆ.

ಇದೀಗ ಗೆಳೆಯನ ಜೊತೆಗಿನ ವಿರಾಟ್ ಕೊಹ್ಲಿಯ ಫೋಟೋ ಮತ್ತು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕಿಂಗ್ ಕೊಹ್ಲಿಯ ಸರಳತೆ ಅಭಿಮಾನಿಗಳು ಮೆಚ್ಚುಗೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments