ವಿರಾಟ್ ಕೊಹ್ಲಿ.. ಕಳೆದ ಕೆಲ ದಿನಗಳಿಂದ ಕ್ರಿಕೆಟ್ ಲೋಕದಲ್ಲಿ ಹಾಟ್ ಟಾಪಿಕ್ ಹೆಸರು.. ವಿರಾಟ್ಗೆ ಏನಾಯ್ತು? ಎಲ್ಲಿ ಹೋದರು ಎಂಬ ಪ್ರಶ್ನೆಗಳೇ ಹೆಚ್ಚಾಗಿ ಕೇಳಿಬರುತ್ತಿವೆ.ಆದರೆ, ಕೊಹ್ಲಿ ಇನ್ಸ್ಟಾ ಪೋಸ್ಟ್ ಮೂಲಕ ಇದಕ್ಕೆ ಮೊನ್ನೆಯಷ್ಟೇ ತೆರೆ ಬಿದ್ದಿತ್ತು. ಕೊಹ್ಲಿ ಎರಡನೇ ಬಾರಿಗೆ ತಂದೆ ಆಗಿದ್ದಾರೆ.
ವಿರಾಟ್ ಕೊಹ್ಲಿ (Virat Kohli )ಪತ್ನಿ ಅನುಷ್ಕಾ ಶರ್ಮಾ (Anushka Sharma) ಫೆಬ್ರವರಿ 15ರಂದು ಮುದ್ದಾದ ಗಂಡು ಮಗುವಿಗೆ ತಂದೆಯಾಗಿದ್ದಾರೆ ತಮ್ಮ ಮುದ್ದಿನ ಮಗನಿಗೆ ಅಕಾಯ್ (Akaay) ಎಂದು ಹೆಸರಿಟ್ಟಿದ್ದಾರೆ.. ಈ ವಿಷಯವನ್ನು ವಿರುಷ್ಕಾ ದಂಪತಿ ತಡವಾಗಿ ಸೋಷಿಯಲ್ ಮೀಡಿಯಾ ಮೂಲಕ ಪ್ರಕಟಿಸಿದ್ದಾರೆ. ಅಭಿಮಾನಿಗಳು ಒಂದು ಕಡೆ ವಿಶ್ ಮಾಡುತ್ತಲೇ ಮತ್ತೊಂದು ಕಡೆ ಕೊಹ್ಲಿ ರೀ ಎಂಟ್ರಿ ಬಗ್ಗೆ ಚರ್ಚೆ ಶುರು ಮಾಡಿದ್ದರು.
ಕೊಹ್ಲಿ ರೀಎಂಟ್ರಿ ಡೌಟ್
ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಅನಾರೋಗ್ಯ ಸಮಸ್ಯೆ ನಡ್ವೆ ಎರಡನೇ ಮಗುವಿಗೆ ಜನ್ಮ ನೀಡಿದರು ಎಂಬ ಸುದ್ದಿ ಹರಿದಾಡುತ್ತಿದೆ. ಅನುಷ್ಕಾ ಪ್ರಗ್ನೆನ್ಸಿ ಸಮಸ್ಯೆಯಿಂದ ಬಳಲ್ತಿದ್ದಾರೆ.. ಅದಕ್ಕೆ ಲಂಡನ್ಗೆ (London) ಆಕೆಯನ್ನು ವಿರಾಟ್ ಕರೆದೊಯ್ದಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಪತ್ನಿ ಜೊತೆ ಇರುವ ಸಲುವಾಗಿಯೇ ವಿರಾಟ್ ಕೊಹ್ಲಿ ಇಂಗ್ಲೆಂಡ್ (England) ವಿರುದ್ಧದ ಸರಣಿಯಿಂದ ದೂರ ಆದರು ಎನ್ನಲಾಗುತ್ತಿದೆ.
ವಿರಾಟ್ ಕೊಹ್ಲಿ ಪ್ರಮುಖ ನಿರ್ಣಯವನ್ನು ತೆಗೆದುಕೊಂಡಿದ್ದಾರೆ ಎಂಬುದು ಲೇಟೆಸ್ಟ್ ಸುದ್ದಿ. ಅದೇನಪ್ಪ ಅಂದ್ರೆ ಇನ್ನಷ್ಟು ದಿನ ವಿರಾಟ್ ಕೊಹ್ಲಿ ಫ್ಯಾಮಿಲಿ ಜೊತೆಗೆ ಲಂಡನ್ನಲ್ಲಿ ಇರಲಿದ್ದಾರೆ ಎಂಬುದು.. ಈ ಬೆಳವಣಿಗೆ ನೋಡಿದ್ರೆ ಐಪಿಎಲ್-2024 (IPL-2024)ಸೀಸನ್ ಫಸ್ಟ್ ಹಾಫ್ಗೆ ವಿರಾಟ್ ಕೊಹ್ಲಿ ದೂರ ಆಗಬಹುದು ಎಂಬ ಸುದ್ದಿ ಹಬ್ಬಿದೆ.
ಅಂದಹಾಗೆ, ಈ ಬಗ್ಗೆ ಆರ್ಸಿಬಿ (RCB)ಫ್ರಾಂಚೈಜಿ ಆಗಲಿ.. ಅಥ್ವಾ ವಿರಾಟ್ ಕೊಹ್ಲಿಯಿಂದ ಆಗಲಿ ಯಾವುದೇ ಅಧಿಕೃತ ಪ್ರಕಟಣೆ ಮಾಡಿಲ್ಲ. ಏನೇ ಆದರೂ, ಆರ್ಸಿಬಿ ಫ್ಯಾನ್ಸ್ಗೆ ಇದು ಅರಗಿಸಿಕೊಳ್ಳಲಾಗದ ಸುದ್ದಿ ಎಂಬುದು ಮಾತ್ರ ಸತ್ಯ.