SportsTop Newsಫ್ರೀಡಂ ಟಿವಿ ವಿಶೇಷ

ವಿರಾಟ್ ಕೊಹ್ಲಿಯ ಅಂದ್ರೆ ಪಂಚಪ್ರಾಣ, ಅವರ ಬಗ್ಗೆ ವಿಚಿತ್ರ ಆಸೆ ಹಂಚಿಕೊಂಡ ಕ್ರಿಕೆಟ್ ಜಗತ್ತಿನ ಬ್ಯೂಟಿ ಕ್ವೀನ್..!

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಜಗತ್ತಿನಾದ್ಯಂತ ಅಭಿಮಾನಿಗಳಿದ್ದಾರೆ. ಅದಷ್ಟೇ ಅಲ್ಲದೇ ಹಲವು ಕ್ರಿಕೆಟಿಗರು ಕೂಡಾ ಕೊಹ್ಲಿಯನ್ನು ಆರಾಧಿಸುತ್ತಾರೆ. ಇದೀಗ ಕ್ರಿಕೆಟ್ ಜಗತ್ತಿನ ಅಪ್ಪಟ ಚೆಲುವೆಯೊಬ್ಬಳು ತಾವು ವಿರಾಟ್ ಕೊಹ್ಲಿಯ ಹುಚ್ಚು ಅಭಿಮಾನಿ ಎಂದು ಹೇಳಿಕೊಂಡಿದ್ದಾಳೆ. ಯಾರಾಕೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ


ಟೀಂ ಇಂಡಿಯಾ ರನ್ ಮಷೀನ್, ಆಧುನಿಕ ಕ್ರಿಕೆಟ್‌ನ ಸೂಪರ್ ಸ್ಟಾರ್ ಬ್ಯಾಟರ್ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ ತಮ್ಮ ಅದ್ಭುತ ಆಟ ಹಾಗೂ ಆಕ್ರಮಣಕಾರಿ ಮನೋಭಾವದಿಂದಲೇ ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.ಅದೆಷ್ಟೋ ಯುವ ಕ್ರಿಕೆಟಿಗರ ಪಾಲಿಗೆ ವಿರಾಟ್ ಕೊಹ್ಲಿ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ. ಇನ್ನು ಅಭಿಮಾನಿಗಳು ಮಾತ್ರವಲ್ಲ ಯುವ ಕ್ರಿಕೆಟಿಗರು, ವಿದೇಶಿ ಕ್ರಿಕೆಟಿಗರು ಕೂಡಾ ಅವಕಾಶ ಸಿಕ್ಕಾಗಲೆಲ್ಲಾ ವಿರಾಟ್ ಕೊಹ್ಲಿ ಜತೆ ಫೋಟೋ ಕ್ಲಿಕ್ಕಿಸಿಕೊಳ್ಳಲು, ಆಟೋಗ್ರಾಫ್ ಪಡೆದುಕೊಳ್ಳಲು ಹಾತೊರೆಯುತ್ತಿರುತ್ತಾರೆ.


ಇದೀಗ ಮಹಿಳಾ ಕ್ರಿಕೆಟ್ ಜಗತ್ತಿನ ಅಪ್ಪಟ ಸುಂದರಿ ಎಂದೇ ಕರೆಸಿಕೊಳ್ಳುವ ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡದ ಆಫ್‌ಸ್ಪಿನ್ನರ್ ಕ್ಸಾರಾ ಜೇಟ್ಲೆ, ತಾವು ವಿರಾಟ್ ಕೊಹ್ಲಿಯ ಅಪ್ಪಟ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ. ಇದಷ್ಟೇ ಹೇಳಿದ್ದರೇ ಅದು ದೊಡ್ಡ ಸುದ್ದಿಯಾಗುತ್ತಿರಲಿಲ್ಲ, ಇದರ ಜತೆಗೆ ಒಂದು ಆಸೆಯನ್ನು ಹಂಚಿಕೊಂಡಿದ್ದಾರೆ.

Comments (0)

Your email address will not be published. Required fields are marked *

Back to top button