ವೈರಲ್ ನ್ಯೂಸ್ಸುದ್ದಿ

ತುಂಬಿದ ರೈಲಿನಲ್ಲಿ ನೇತಾಡುತ್ತಾ ಪ್ರಯಾಣ; ಎದೆ ನಡುಕ ಹುಟ್ಟಿಸುವ ವಿಡಿಯೋ ಇಲ್ಲಿದೆ ನೋಡಿ

ರೈಲ್ವೇ ನಿಲ್ದಾಣದಿಂದ ಹೊರಡುತ್ತಿರುವ ರೈಲಿನಲ್ಲಿ ಬಾಗಿಲಿನ ಹೊರಗೂ ಜನರು ನೇತಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಒಂದು ಕ್ಷಣ ಎದೆಯಲ್ಲಿ ನಡುಕ ಹುಟ್ಟಿಸುವ ವಿಡಿಯೋ ಕಂಡು ನೆಟ್ಟಿಗರು ‘ದಯವಿಟ್ಟು ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿ’ ಎಂದು ನೆಟ್ಟಿಗರು ಕಾಮೆಂಟ್​ ಮಾಡಿದ್ದಾರೆ.

ವೈರಲ್​​ ವಿಡಿಯೋದಲ್ಲಿ ಪುರುಷ ಮತ್ತು ಮಹಿಳೆಯರು ಕಿಕ್ಕಿರಿದು ತುಂಬಿದ ಚಲಿಸುವ ರೈಲನ್ನು ಹತ್ತಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ವ್ಯಕ್ತಿಯೊಬ್ಬ ಮೊದಲು ಮಹಿಳೆಗೆ ರೈಲು ಹತ್ತಲು ಸಹಾಯ ಮಾಡುತ್ತಾನೆ, ಮತ್ತು ಆಕೆಯನ್ನು ರೈಲಿನ ಒಳಗೆ ತಳ್ಳುತ್ತಾನೆ. ನಂತರ, ಭಾರವಾದ ಲ್ಯಾಗೇಜ್​ ಬ್ಯಾಗ್​​ ಜೊತೆಗೆ ಆತ ರೈಲಿನ ಕೊನೆಯ ಮೆಟ್ಟಿಲಿನಲ್ಲಿ ನೇತಾಡುತ್ತಾ ಪ್ರಯಾಣಿಸುತ್ತಿರುವುದನ್ನು ಕಾಣಬಹುದು.

 

@IndianTechGuide ಎಂಬ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಮೇ 20ರಂದು ವಿಡಿಯೋ ಹಂಚಿಕೊಳ್ಳಲಾಗಿದೆ. ಇಲ್ಲಿಯವರೆಗೆ ವಿಡಿಯೋ 2.5 ಮಿಲಿಯನ್​​ ಅಂದರೆ 20 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಸದ್ಯ ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದ್ದಂತೆ ‘ದಯವಿಟ್ಟು ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿ’ ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್​ ಮಾಡಿದ್ದಾರೆ.

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

Comments (0)

Your email address will not be published. Required fields are marked *

Back to top button