Friday, August 22, 2025
24.2 C
Bengaluru
Google search engine
LIVE
ಮನೆವೈರಲ್ ನ್ಯೂಸ್ಪಳಗಿದೇ ಎಂದು ಸಿಂಹ ಮುಟ್ಟಿದ ವ್ಯಕ್ತಿ ಕಿರುಚುತ್ತಲೇ ಕಾಲ್ಕಿತ್ತಿದ್ದಾನೆ: ಅದೃಷ್ಟವಂತ ಎಂದ ನೆಟ್ಟಿಗರು

ಪಳಗಿದೇ ಎಂದು ಸಿಂಹ ಮುಟ್ಟಿದ ವ್ಯಕ್ತಿ ಕಿರುಚುತ್ತಲೇ ಕಾಲ್ಕಿತ್ತಿದ್ದಾನೆ: ಅದೃಷ್ಟವಂತ ಎಂದ ನೆಟ್ಟಿಗರು

ಕಾಡು ಪ್ರಾಣಿಗಳನ್ನು ನೀವು ಎಷ್ಟೇ ಪಳಗಿಸಿದರೂ ಕೆಲ ಸಮಯ ಸಂದರ್ಭದಲ್ಲಿ ಅವು ಕ್ರೌರ್ಯವಾಗಿ ವರ್ತಿಸುತ್ತವೆ. ಅದನ್ನು ಸಾಕಿದವರು, ಇಲ್ಲವೇ ಪಳಸಿಗುವವರು ಅಥವಾ ವೀಕ್ಷಣೆಗೆ ಬಂದವರು ಎಚ್ಚರಿಕೆಯಿಂದ ಇದ್ದಷ್ಟು ಉತ್ತಮ. ಆದರೆ ಇಲ್ಲೊಬ್ಬ ಮಹಾಶಯ ಸಿಂಹ ಸುಮ್ಮನಿದೆ ಎಂದು ಮುಟ್ಟಿ ಆವಾಂತರ ಮೈಮೇಲೆ ಎಳೆದುಕೊಂಡಿದ್ದಾನೆ. ಅದರ ವಿಡಿಯೋ ವೈರಲ್ ಆಗಿದೆ.

ನಾವೆಷ್ಟೇ ಎಚ್ಚರಿಕೆ ವಹಿಸಿದರು, ಕಾಡು ಪ್ರಾಣಿಗಳು ಪಂಜರದಲ್ಲಿದ್ದರು ಅವರು ಕಾಡು ಪ್ರಾಣಿಗಳೇ. ಒಮ್ಮೊಮ್ಮೆ ಅವುಗಳಿಂದ ಜೀವಕ್ಕೆ ಅಪಾಯ ಎದುರಾಗುವ ಸಂಭವವಿರುತ್ತದೆ. ಸುಮ್ಮನಿವೆ ಎಂದು ಅವುಗಳನ್ನು ಮಟ್ಟಲು, ಆಹಾರ ನೀಡಲು ಇನ್ನಿತರ ರೀತಿಯಲ್ಲಿ ತೊಂದರೆ ನೀಡಲು ಹೋದರೆ ತೊಂದರೆಗೆ ಸಿಲುಕಬೇಕಾಗುತ್ತದೆ.

ಚೈನಿಂದ ಕಟ್ಟಿದ ಸಿಂಹ ಮುಟ್ಟಿ ಕಾಲ್ಕಿತ್ತ

ಈ ಪ್ರಕರಣದಲ್ಲಿ ಆಗಿದ್ದು ಅದೇ. ಪಂಜರದಲ್ಲಿ ಸಿಂಹವನ್ನು ಚೈನಿನ ಮೂಲಕ ಕಟ್ಟಲಾಗಿದೆ. ಅದು ಸಾಕಿದವನ ಮುಂದೆ ಮೈ ಉಜ್ಜಿಕೊಳ್ಳುತ್ತಾರೆ ಸಜಜವಾಗಿ ಕೂತಿದೆ. ಇದೇ ವೇಳೆ ಅದೇ ಪಂಜರದಲ್ಲಿ ಮಾಲೀಕನ ಜೊತೆಗಿದ್ದ ವ್ಯಕ್ತಿ ಸಿಂಹವನ್ನು ನಾಯಿಯನ್ನು ಮುಟ್ಟಿ ತಲೆ ಮೇಲೆ ಕೈಯಾಡಿಸುವ ರೀತಿಯಲ್ಲಿ ಸಿಂಹದ ಮೇಲೆ ಕೈಯಾಡಿಸಿದ್ದಾನೆ.

ಸಿಂಹಕ್ಕೆ ಅದೇನೆನಿಸಿತೋ ಏಕಾಎಕಿ ಆತನ ಮೇಲೆ ಎರಗಿದೆ. ಪಂಜರದೊಳಗೆ ಒಂದು ಮೂಲೆಯಿಂದ ಮತ್ತೊಂದು ಮೂಲೆವರೆಗೂ ಅಟ್ಟಿಸಿಕೊಂಡು ಹೋಗಿದೆ. ಸಿಂಹ ಸಾಕಿದ ಮಾಲೀಕ ಕೈಯಲ್ಲಿದ್ದ ಚೈನ್ ಹಿಡಿದು ಎಳೆದು ಮುಂದಾಗುವ ಅಪಾಯ ತಡೆಯಲು ಪ್ರಯತ್ನಿಸಿದ ವಿಡಿಯೋ ವೈರಲ್ ಆಗಿದೆ.

ಕಿರುಚುತ್ತಲೇ ಪಂಜದೊಳಗೆ ಓಡಾಡಿದ ವ್ಯಕ್ತಿ ಚೈನ್ ಹಿಡಿದು ಎಳೆದ ಮರುಕ್ಷಣವೇ ಚೈನ್ ತುಂಡಾಗಿದೆ. ನಿಯಂತ್ರಣ ಮುಕ್ತ ಸಿಂಹ ಮನಬಂದಂತೆ ಆ ವ್ಯಕ್ತಿ ಮೇಲೆ ಎರಗಲು ಶುರು ಮಾಡಿದೆ. ಕೂಡಲೇ ಎಚ್ಚೆತ್ತ ಮಾಲೀಕ ಮಧ್ಯ ಪ್ರವೇಶಿಸಿ ವ್ಯಕ್ತಿಯನ್ನು ರಕ್ಷಣೆ ಮಾಡಿದ ಘಟನೆಯನ್ನು ನೀವು ವಿಡಿಯೋದಲ್ಲಿ ನೋಡಬಹುದಾಗಿದೆ.

ಸಿಂಹ ಮೈಮೇಲೆ ಜಿಗಿಯುತ್ತಿದ್ದಂತೆ ಗಾಬರಿ ಒಳಗಾದ ವ್ಯಕ್ತಿ ಕಿರುಚುತ್ತಲೇ ಪಂಜರದಿಂದ ತುಂಬೆಲ್ಲ ಓಡಾಡಿದ ವ್ಯಕ್ತಿ, ಸಿಂಹದಿಂದ ಕಾಪಾಡುತ್ತಿದ್ದಂತೆ ಪಂಜರದಿಂದ ಹೊರಕ್ಕೆ ಓಡಿದ್ದಾನೆ. ಬದುಕಿತು ಬಡಜೀವ ಎಂದುಕೊಂಡು ನಿಟ್ಟುಸಿರು ಬಿಟ್ಟಿದ್ದಾನೆ.

ಈ ಘಟನೆಯ ವಿಡಿಯೋ ವೈರಲ್ ಆಗಿದೆ.

ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕಾಡು ಪ್ರಾಣಿ, ಮನುಷ್ಯ ಸಂಬಂಧ ಕಾಡು ಪ್ರಾಣಿಗಳ ಕ್ರೌರ್ಯ ಬಗ್ಗೆ ನಾನಾ ಕಾಮೆಂಟುಗಳು ಬಂದಿವೆ. ಕಾಡು ಪ್ರಾಣಿ ಎಂಬ ಜ್ಞಾನ ಇಲ್ಲದೇ ಅದರ ಬಳಿ ಹೋಗಿರುವುದು ದುರದೃಷ್ಟಕರ ಎಂದು ನೆಟ್ಟಿಗರು ಹೇಳಿದ್ದಾರೆ.

ಇತ್ತೀಚೆಗೆ ನಡೆದ ಘಟನೆ ಇದಾಗಿದೆ. ಇಂತಹ ಪ್ರಾಣಿಯನ್ನು ನೀವೆಷ್ಟೆ ಪಳಗಿಸಿದರೂ ಅದು ಪರಭಕ್ಷಕ ವರ್ತನೆ ಎಂದಿಗೂ ಬಿಡುವುದಿಲ್ಲ. ಅನಿರೀಕ್ಷಿತ ಸ್ವಭಾವ, ಗುಣ ಪ್ರದರ್ಶಿಸದೇ ಬಿಡುವುದಿಲ್ಲ ಎಂದಿದ್ದಾರೆ. ಸಿಂಹ ಬಳಿ ಹೋಗಿ ಹೊರ ಬಂದ ನೀವು ಅದೃಷ್ಟಶಾಲಿ. ಕಾಡು ಬೆಕ್ಕಿನಿಂದ ತಪ್ಪಿಸಿಕೊಂಡಿದ್ದೀರಿ ಎಂದು ತಿಳಿಸಿದ್ದಾರೆ. ಈ ವ್ಯಕ್ತಿಗೆ ಗಂಭೀರವಾದ ಗಾಯಗಳೇನು ಆಗಿಲ್ಲ ಎಂದು ತಿಳಿದು ಬಂದಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments