ಉತ್ತರಾಖಂಡ: ಸಿನಿಮಾಗಳಲ್ಲಿ ಹೀರೋ ಬಿಲ್ಡಿಂಗ್, ಕಾಪೌಂಡ್ ಅನ್ನು ಲೆಕ್ಕಿಸದೇ ವಾಹನ ನುಗ್ಗಿಸುವ ದೃಶ್ಯ ನೋಡಿರ್ತೀರಿ. ಅದರಲ್ಲೂ ಹೀರೋ ಒಂದುವೇಳೆ ಪೊಲೀಸ್ ಆಗಿದ್ದರೆ ತನ್ನ ಜೀಪ್‌ನಲ್ಲೇ ಅಪರಾಧಿಗಳನ್ನು ಚೇಸ್ ಮಾಡಿ ಹಿಡಿಯುವ ಹಲವಾರು ದೃಶ್ಯಗಳನ್ನು ನೋಡಿರ್ತೇವೆ. ಅಂತಹದ್ದೇ ಒಂದು ದೃಶ್ಯ ಋಷಿಕೇಶದಲ್ಲಿ ನಡೆದಿದೆ. ಪೊಲೀಸ್ ಅಧಿಕಾರಿಯೊಬ್ಬರು ಲೈಂಗಿಕ ಕಿರುಕುಳ ಆರೋಪಿಯನ್ನು ಅರೆಸ್ಟ್ ಮಾಡಲೆಂದು ನೇರವಾಗಿ ಆಸ್ಪತ್ರೆ ಯ ಐಸಿಯು ಒಳಗೆ ತಮ್ಮ ಜೀಪನ್ನು ನುಗ್ಗಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಈ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋ ಫುಲ್ ವೈರಲ್
ರಿಶಿಕೇಶ್ ಏಮ್ಸ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಆಸ್ಪತ್ರೆಯ ವೈದ್ಯೆಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಯ ಬಂಧನಕ್ಕೆಂದು ಬಂದಿದ್ದ ಪೊಲೀಸರು ಜೀಪು ಸಮೇತ ಆಸ್ಪತ್ರೆಯೊಳಗೆ ನುಗ್ಗಿದ್ದಾರೆ. ನೇರವಾಗಿ ಆಸ್ಪತ್ರೆಯ ನಾಲ್ಕನೇ ಮಹಡಿಗೆ ಬಂದ ಪೊಲೀಸರು ಐಸಿಯು ಒಳಗೆ ಜೀಪು ಚಲಾಯಿಸಿದ್ದಾರೆ. ಈ ದೃಶ್ಯವನ್ನು ಆಸ್ಪತೆಯಲ್ಲಿದ್ದವರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಎಕ್ಸ್‌ನಲ್ಲಿ ಹರಿಬಿಟ್ಟಿದ್ದು, ವಿಡಿಯೋ ವೈರಲಾಗಿದೆ.
ನರ್ಸಿಂಗ್ ಅಧಿಕಾರಿಯಿಂದ ಲೈಂಗಿಕ ಕಿರುಕುಳ
ಏಮ್ಸ್‌ನ ನರ್ಸಿಂಗ್ ಅಧಿಕಾರಿ ಸತೀಶ್ ಕುಮಾರ್ ಎಂಬಾತ ವೈದ್ಯೆಯೊಬ್ಬರಿಗೆ ಎಂಎಂಎಸ್ ಕಳುಹಿಸಿ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ದೂರು ದಾಖಲಾಗಿತ್ತು. ಆರೋಪಿ ಬಂಧನಕ್ಕೆಂದು ಏಮ್ಸ್ ಆಸ್ಪತ್ರೆಗೆ ಪೊಲೀಸರು ಬರುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಸತೀಶ್ ಕುಮಾರ್ ಎಸ್ಕೇಪ್ ಆಗಲು ಯತ್ನಿಸಿದ್ದ. ಇದು ತಿಳಿದ ಡೆಹ್ರಾಡೂನ್ ಪೊಲೀಸರು ಆಸ್ಪತ್ರೆಯ ಒಳಗೆ ಜೀಪ್ ಚಲಾಯಿಸಿದಾರೆ. ನೇರವಾಗಿ ನಾಲ್ಕನೇ ಮಹಡಿಗೆ ತಲುಪಿದ ಜೀಪ್ ಐಸಿಯು ಒಳಗೆ ಬಂದು ನಿಂತಿದೆ.
ಇನ್ನು ಪೊಲೀಸರ ಈ ಕ್ರಮಕ್ಕೆ ಹಲವರಿಂದ ಖಂಡನೆ ವ್ಯಕ್ತವಾಗಿದೆ. ಆಸ್ಪತ್ರೆಯಂತಹ ಸೂಕ್ಷ್ಮ ಸ್ಥಳಗಳಲ್ಲಿ ಇಂತಹ ವಾತಾವರಣ ಸೃಷ್ಟಿಸುವುದು ಸರಿಯಲ್ಲ. ಮುಂದೆ ಇಂತಹ ಘಟನೆ ನಡೆಯದಂತೆ ಎಚ್ಚರ ವಹಿಸಬೇಕೆಂದು ಜನ ಆಗ್ರಹಿಸಿದ್ದಾರೆ. ಅಲ್ಲದೇ ಅಲ್ಲಿದ್ದ ರೋಗಿಗಳು ಹಾಗೂ ಅವರ ಕುಟುಂಬಸ್ಥರೂ ಪೊಲೀಸರ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಉತ್ತರಾಖಂಡ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಘಟನೆಯ ಬಗ್ಗೆ ಗಮನ ಹರಿಸಿದ್ದು,. ಕಿರುಕುಳಕ್ಕೊಳಗಾದ ಮಹಿಳಾ ವೈದ್ಯರನ್ನು ಭೇಟಿ ಮಾಡಲು ಮತ್ತು ಪರಿಸ್ಥಿತಿಯನ್ನು ನೇರವಾಗಿ ನಿರ್ಣಯಿಸಲು AIIMS ಗೆ ಭೇಟಿ ನೀಡಿದರು.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com


