ಬಾಲಕಿಯ ಹಿಂಭಾಗ ಮುಟ್ಟಿದ ಮುಸ್ಲಿಂ ಯುವಕ; ಆಮೇಲೆ ನಡೆದಿದ್ದೇ ಬೇರೆ!

ಉತ್ತರಪ್ರದೇಶ: ಕೊಲೆ, ಅತ್ಯಾಚಾರ, ಲೈಂಗಿಕ ಕಿರುಕುಳಗಳಂತಹ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಹಾಡಹಗಲೇ ಜನನಿಬಿಡ ಪ್ರದೇಶದಲ್ಲೇ ಹೆಣ್ಣುಮಕ್ಕಳ ಮೇಲೆ ಲೈಂಗಿಕ ಕಿರುಕುಳಗಳೂ ನಡೆಯುತ್ತಿರುತ್ತವೆ. ಅಂತಹದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿದ್ದು, ಹಾಡುಹಗಲೇ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಕಿಡಿಗೇಡಿಯೋರ್ವ ಲೈಂಗಿಕ ಕಿರುಕುಳ ನೀಡಿದ್ದಾನೆ. ಯೋಗಿನಾಡು ಉತ್ತರಪ್ರದೇಶ ಮುಜಾಫರ್‌ನಗರದಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ವಿಡಿಯೋ ವೈರಲ್ ಆಗುತ್ತಿದ್ದಂತೆ ಕಿಡಿಯ ಹಡೆಮುರಿ ಕಟ್ಟಿರುವ ಪೊಲೀಸರು ತಕ್ಕ ಪಾಠ ಕಲಿಸಿದ್ದಾರೆ.
ಮುಜಾಫರ್‌ನಗರದಲ್ಲಿ ಈ ಘಟನೆ ನಡೆದಿದ್ದು, ಸಲ್ಮಾನ್ ಎಂಬ ಯುವಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಕಾಮುಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿ ಹೇಯ ಕೃತ್ಯ ಎಸಗಿದ್ದಾನೆ. ಬೈಕ್‌ನಲ್ಲಿ ಬಂದ ಸಲ್ಮಾನ್, ರಸ್ತೆಯಲ್ಲಿ ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗುತ್ತಿದ್ದ ಬಾಲಕಿಯ ಹಿಂಭಾಗವನ್ನು ಮುಟ್ಟಿ ಕಿರುಕುಳ ನೀಡಿ ಎಸ್ಕೇಪ್ ಆಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.ಇದೇ ವೇಳೆ ಸಂತ್ರಸ್ತ ಬಾಲಕಿ ತನ್ನ ಮನೆಯವರಿಗೆ ಘಟನೆಯ ಬಗ್ಗೆ ತಿಳಿಸಿದ್ದಾಳೆ. ಆ ಬಳಿಕ ಮನೆಯವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ. ಈ ದೃಶ್ಯ ಅಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನೆಟ್ಟಿಗರೊಬ್ಬರು ಎಕ್ಸ್‌ನಲ್ಲಿ ಶೇರ್ ಮಾಡಿ, ಉತ್ತರಪ್ರದೇಶ ಪೊಲೀಸರಿಗೆ ಟ್ಯಾಗ್ ಮಾಡಿದ್ದರು.
हैलो @muzafarnagarpol
इस लफंगे को देखिए। ये कैसे एक लड़की के हिप्स पर हाथ मारकर जा रहा है। स्थानीय लोग बताते हैं कि ये अपने पास तेजाब की बोतल रखता है और उसको दिखाकर लड़कियों को डराता है। पिछले 3 महीने से ये छेड़खानी कर रहा है। ऐसे लफंगों की तबियत से तुड़ाई जरूरी है। pic.twitter.com/Z30C07RDX9
— Sachin Gupta (@SachinGuptaUP) June 7, 2024
ಆರೋಪಿ ಕಾಲಿಗೆ ಗುಂಡೇಟು
ಘಟನೆಯ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಆರೋಪಿ ಸಲ್ಮಾನ್‌ನನ್ನು ಅರೆಸ್ಟ್ ಮಾಡಿದ್ದಾರೆ. ಈ ವೇಳೆ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಪೊಲೀಸರು ಎನ್‌ಕೌಂಟರ್‌ನಲ್ಲಿ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇನ್ನು ಆರೋಪಿಯ ಹೇಯ ಕೃತ್ಯಕ್ಕೆ ಇದು ತಕ್ಕ ಪಾಠ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಇನ್ನು ಈ ವಿಡಿಯೋಗೆ ಐದು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ನೆಟ್ಟಿಗರು ಈ ವ್ಯಕ್ತಿಯ ವಿರುದ್ಧ ಗರಂ ಆಗಿದ್ದಾರೆ.
सपा की 37 सीटें आ गई तो मुजफ्फरनगर में नीच सलमान सड़क पर लड़कियां छेड़ने निकल पड़ा लेकिन भूल गया अभी बाबा भी जिंदा है और बुलडोजर भी.. pic.twitter.com/qRQmlMpMqt
— 𝙼𝚛 𝚃𝚢𝚊𝚐𝚒 (@mktyaggi) June 8, 2024
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com




