ಕ್ರೈಂ ಸ್ಟೋರಿ

ವಿನಯ್​ ಅಂತ್ಯಕ್ರಿಯೆ; ಹಿರಿಯ ಸೋದರನಿಂದ ಅಗ್ನಿಸ್ಪರ್ಶ

ಕೊಡಗು: ಕಾಂಗ್ರೆಸ್ ಮುಖಂಡ ಹಾಗೂ ಇಬ್ಬರು ಕಾಂಗ್ರೆಸ್‌ನ ಇಬ್ಬರು ಶಾಸಕರನ್ನು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ ಕೊಡಗಿನ ಬಿಜೆಪಿ ಮುಖಂಡ ವಿನಯ್ ಸೋಮಯ್ಯ ಅವರನ್ನು ಮನೆ ಪಕ್ಕದ ತೋಟದಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.

ಗೌಡ ಪದ್ಧತಿಯಂತೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ. ಅಂತ್ಯ ಸಂಸ್ಕಾರದಲ್ಲಿ ಕುಟುಂಬಸ್ಥರು, ಸಂಬಂಧಿಕರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು. ವಿನಯ್ ಚಿತೆಗೆ ಹಿರಿಯ ಸಹೋದರ ಜೀವನ್ ಅಗ್ನಿಸ್ಪರ್ಶ ಮಾಡಿದ್ದು, ಅಂತ್ಯಕ್ರಿಯೆಯ ವೇಳೆ ರಾಜಕೀಯ ನಾಯಕರು ಕಾಣಿಸಿಲ್ಲ.

ಸಂಸದ ಯದುವೀರ್, ಶಾಸಕರಾದ ಶ್ರೀವತ್ಸ, ಮಾಜಿ ಶಾಸಕ ಕೆ.ಜಿ ಬೋಪಯ್ಯ ಸೇರಿದಂತೆ ಸ್ಥಳೀಯ ನಾಯಕರು ವಿನಯ್ ಮನೆ ಬಳಿ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ.

Comments (0)

Your email address will not be published. Required fields are marked *

Back to top button