ರಾಜಕೀಯ

ವಿನಯ್​ ಸೂಸೈಡ್​ ಕೇಸ್​; ಕುಶಾಲನಗರದಲ್ಲಿ ಬಿಜೆಪಿ ಪ್ರೊಟೆಸ್ಟ್

ಕೊಡಗು: ಬಿಜೆಪಿ ಕಾರ್ಯಕರ್ತ ವಿನಯ್​ ಸೋಮಯ್ಯ ಅವರ ಆತ್ಮಹತ್ಯೆ ಕೇಸ್​ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದೆ.  ಕುಶಾಲನಗರದಲ್ಲಿ ಈ ಪ್ರಕರಣದಿಂದ ಉದ್ವಿಗ್ನತೆ ಉಂಟಾಗಿದೆ. ಈ ಹಿನ್ನೆಲೆ, ಬಿಜೆಪಿ ಕಾರ್ಯಕರ್ತರು ವಿನಯ್ ಅವರ ಪಾರ್ಥಿವ ಶರೀರವನ್ನು ಡಿವೈಎಸ್ಪಿ ಕಚೇರಿ ಎದುರು ಇಟ್ಟು ಪ್ರತಿಭಟನೆಗೆ ಮುಂದಾಗಿದ್ದಾರೆ. ಪೊಲೀಸರ ಬಿಗಿ ಬಂದೋಬಸ್ತ್‌ ಹೊಂದಿದ್ದು, 500ಕ್ಕೂ ಹೆಚ್ಚು ಪೊಲೀಸರು ಸ್ಥಳದಲ್ಲಿ ನಿಯೋಜಿಸಲ್ಪಟ್ಟಿದ್ದಾರೆ.

ಈ ಬಗ್ಗೆ ಮಾದ್ಯಮಗಳ ಜೊತೆ ಮಾತನಾಡಿದ ಕುಶಾಲನಗರದ ಬಿಜೆಪಿ ಮಂಡಲ ಅಧ್ಯಕ್ಷ ಗೌತಮ್ ಅವರು, “ವಿನಯ್ ಅವರ ಡೆತ್ ನೋಟ್‌ನಲ್ಲಿ ಉಲ್ಲೇಖಿಸಿರುವ ಎಲ್ಲರ ವಿರುದ್ಧ ಎಫ್‌ಐಆರ್ ದಾಖಲಾಗುವವರೆಗೆ ನಾವು ಪ್ರತಿಭಟನೆ ಮುಂದುವರಿಸುತ್ತೇವೆ. ಅವರ ಮೃತದೇಹವನ್ನು ಡಿವೈಎಸ್ಪಿ ಕಚೇರಿ ಎದುರು ಇಟ್ಟು ಪ್ರತಿಭಟನೆ ಮಾಡ್ತೇವೆ ಎಂದು ಹೇಳಿದ್ದಾರೆ.

ಇನ್ನುಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ,ವಿಜಯೇಂದ್ರ, ಸಂಸದ ಯದುವೀರ್ ಒಡೇಯರ್, ಶಾಸಕ ಶ್ರೀವತ್ಸ್​, ಮಾಜಿ ಸ್ಪೀಕರ್ ಬೋಪಯ್ಯ ಸೇರಿದಂತೆ ಸಾವಿರಾರು ಬಿಜೆಪಿ ಕಾರ್ಯಕರ್ತು ಡಿವೈಎಸ್​ಪಿ ಕಚೇರಿ ಮುಂದು ಜಮಾವಣೆಗೊಂಡಿದ್ದಾರೆ.

Comments (0)

Your email address will not be published. Required fields are marked *

Back to top button