ಬೆಂಗಳೂರು : ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾನ್ಪಾಡಿ ಆರಂಭದಲ್ಲಿ ಯಾವ ರೀತಿಯ ಹೇಳಿಕೆ ನೀಡಿದ್ದರು ಎಂದು ಕಣ್ಣೆದುರಿಗೇ ಇದೆ, ಈಗ ತಿರುಚಿ ಮಾತನಾಡುತ್ತಿರುವುದು ಸ್ಪಷ್ಟವಾಗುತ್ತಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿ.ವೈ.ವಿಜಯೇಂದ್ರ ನನಗೆ 150 ಕೋಟಿ ರೂ. ನೀಡಲು ಬಂದಿದ್ದರು ಎಂದು ಅನ್ವರ್ ಮಾನ್ಪಾಡಿ ಹೇಳಿರುವ ವಿಡಿಯೋಗಳಿವೆ. ಆ ವೇಳೆ ಅದು ದೊಡ್ಡ ಸುದ್ದಿಯಾಗಿತ್ತು. ಈಗ ಅನ್ವರ್ ಮಾನ್ಪಾಡಿ ಮಾತು ಬದಲಾಯಿಸುತ್ತಿದ್ದಾರೆ ಎಂದರು.
150 ಕೋಟಿ ರೂ. ಲಂಚದ ಆಮಿಷವೊಡ್ಡಿರುವುದು ಯಾರಿಗೂ ಗೊತ್ತಿರಲಿಲ್ಲ. ಅನ್ವರ್ ಮಾನ್ಪಾಡಿ ಹೇಳಿದ್ದಕ್ಕೆ ಮಾತ್ರ ಗೊತ್ತಾಗಿದೆ. ಈಗ ಉಲ್ಟಾ ಹೇಳಿಕೆ ನೀಡಿರುವ ಬಗ್ಗೆ ಯಾವ ರೀತಿ ಪರಿಗಣಿಸಬೇಕೆಂಬುದು ನಾಳೆ ವಿಧಾನಸಭೆಯಲ್ಲಿ ಪ್ರಸ್ತಾಪವಾದಾಗ ಚರ್ಚೆಗೆ ಬರಲಿದೆ ಎಂದು ಹೇಳಿದರು.