ರಾಜಕೀಯ

ಬಿಜೆಪಿ ಶಾಸಕರ ಅಮಾನತಿಗೆ ವಿಜಯೇಂದ್ರ ಗರಂ

ಕಲಬುರಗಿ: ಸ್ಪೀಕರ್ ಯು.ಟಿ.ಖಾದರ್ ಅವರು 18 ಬಿಜೆಪಿ ಶಾಸಕರನ್ನು ಅಮಾನತು ಮಾಡಿದ್ದಾರೆ, ಇನ್ನು ಈ ವಿಚಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಕಲಬುರಗಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್ ನವರು ಸಭಾಧ್ಯಕ್ಷರನ್ನು ಪೀಠದ ಸಮೇತ ಆಚೆ ಕಳುಹಿಸುವ ಕೆಲಸ ಮಾಡಿದ್ರು.ಈಗ ನಮ್ಮ 18 ಶಾಸಕರನ್ನು ಅಮಾನತ್ತು ಮಾಡಲಾಗಿದೆ. ಸಭಾಧ್ಯಕ್ಷರು ತಮ್ಮ ಅಧಿಕಾರ ಬಳಸಿ ಸೀಮಿತ ಅವಧಿಗೆ ಅಮಾನತ್ತು ಮಾಡಬಹುದಿತ್ತು. ಆದ್ರೆ, ಆರು ತಿಂಗಳು ಅಮಾನತ್ತು ಮಾಡಿದ್ದು ಕಾನೂನು ಬಾಹಿರ.

ಆರು ತಿಂಗಳ ಅಮಾನತ್ತಿನ ಜೊತೆಗೆ ಹಲವು ಕಂಡಿಷನ್ ಹಾಕಿದ್ದಾರೆ. ಇದು ಸಂವಿಧಾನ ವಿರೋಧಿ ನಡೆ ಆಗಿದೆ. ಆರು ತಿಂಗಳು ಅಮಾನತ್ತು ಆಯಾ ಶಾಸಕರ ಕ್ಷೇತ್ರದ ಮತದಾರರಿಗೆ ಅವಮಾನ ಮಾಡಿದಂತಾಗಿದೆ. ಅಮಾನತ್ತು ಆದೇಶ ಹಿಂಪಡೆಯಲು ಸಭಾಧ್ಯಕ್ಷರಿಗೆ ಮನವಿ ಮಾಡಿಕೊಂಡಿದ್ದೇವೆ. ಸಭಾಧ್ಯಕ್ಷರೇ ಶಾಸಕರು ಮನವಿ ಕೊಡಲಿ ಅಮಾನತ್ತು ಹಿಂಪಡೆಯುವೆ ಎಂದಿದ್ದಾರೆ. ನೋಡೋಣ ಏನು ಮಾಡುತ್ತಾರೆ ಅಂತ ಅಂದರು. ಇದೇ ವೇಳೆ ಮಾತನಾಡಿದ ಅವರು, ಅಲ್ಪಸಂಖ್ಯಾತ ತುಷ್ಟೀಕರಣ ವಿರುದ್ದ ಧರಣಿ ಮಾಡಿದ್ದೇವೆ ಎಂದರು.

Comments (0)

Your email address will not be published. Required fields are marked *

Back to top button