ವಿಜಯಪುರ: ಜಿಲ್ಲೆಯಲ್ಲಿ ವಕ್ಫ್ ಆಸ್ತಿ ನೋಂದಣಿ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ಇದರ ಬೆನ್ನಲ್ಲೇ ಇಂದು ಬಿಜೆಪಿ ನಿಯೋಗ ವಿಜಯಪುರಕ್ಕೆ ಭೇಟಿ ನೀಡಿ ರೈತರ ಚರ್ಚಿಸಿದರು. ನಂತರ ಜಿಲ್ಲಾಧಿಕರಿ ಭೂಬಾಲನ್ ಅವರನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಂಡರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಭೂಬಾಲನ್, ಸಚಿವ ಜಮಿರ್ ಅಹಮ್ಮದ್ ಖಾನ್ ಅವರ ಸೂಚನೆ ಮೇರೆಗೆ ಒತ್ತುವರಿ ತೆರವು ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಡಿಸಿ ಭೇಟಿಯಾದ ಬಿಜೆಪಿ ಮುಖಂಡರ ನಿಯೋಗ

ಡಿಸಿ ಟಿ ಭೂಬಾಲನ್ ಭೇಟಿ ಮಾಡಿದ ಸಂಸದ ಗೋವಿಂದ ಕಾರಜೋಳ ವಕ್ಫ ಸಚಿವ ಜಮೀರ್ ಅಹ್ಮದ್ ಖಾನ್​ ನಡೆಸಿದ ಸಭೆಯ ಪ್ರೊಸೀಡಿಂಗ್ಸ್ ಕಾಪಿ ಕೇಳಿದ್ದಾರೆ. ನೋಟಿಸ್ ಕೊಡದೆ ಪಹಣಿಯಲ್ಲಿ ವಕ್ಫ್ ಹೆಸರು ಎಂಟ್ರಿ ಮಾಡಿದು ಏಕೆ ಎಂದು ಪ್ರಶ್ನಿಸಿದ್ದಾರೆ. ನಾವು ಇಂಡಿ, ಚಡಚಣದಲ್ಲಿ ಮಾತ್ರ 44 ರೈತರ ಜಮೀನಿನಲ್ಲಿ ಇಂದೀಕರಣ ಮಾಡಿದ್ದೇವೆ. ಕೊಟ್ಟ ನೋಟಿಸ್ ಈಗಾಗಲೇ ರದ್ದುಗೊಳಿಸಿದ್ದೇವೆ ಎಂದು ಡಿಸಿ ಟಿ ಭೂಬಾಲನ್​ ಸ್ಪಷ್ಟನೆ ನೀಡಿದ್ದಾರೆ. ಈ ವೇಳೆ ಡಿಸಿ ಜತೆ ಬಿಜೆಪಿ ನಿಯೋಗದ ವಕೀಲ ಎಂ.ಬಿ.ಜಿರಲಿ ವಾಗ್ವಾದ ಉಂಟಾಗಿದೆ.

ಅಚ್ಚರಿಯ ಮಾಹಿತಿ ಬಿಚ್ಚಿಟ್ಟ ಜಿಲ್ಲಾಧಿಕಾರಿ 

ವಕ್ಫ್​​ ಆಸ್ತಿಗಳ ಇಂದೀಕರಣ ಮೊದಲಿನಿಂದಲೂ ಮಾಡುತ್ತ ಬಂದಿದ್ದಾರೆ. ಹಿಂದಿನಂತೆಯೆ ಈಗ ನಾವು ಇಂದೀಕರಣ ಮಾಡಿದ್ದೇವೆ ಎಂದು ಬಿಜೆಪಿ ಟೀಂ ಎದುರು ಡಿಸಿ ಸ್ಪಷ್ಟನೆ ನೀಡಿದರು. 2018-19ರಲ್ಲೂ ವಕ್ಫ್ 123 ಆಸ್ತಿಗಳ ಇಂದೀಕರಣ ಆಗಿವೆ. 112 ರೈತರ ಜಮೀನುಗಳಿಗೆ ನೋಟಿಸ್ ನೀಡಲಾಗಿದೆ. ಪ್ರತಿವರ್ಷ ಇಂದೀಕರಣ, ನೋಟಿಸ್ ಪ್ರಕ್ರಿಯೆ ಆಗುತ್ತಿದೆ. 2020-21ರಲ್ಲಿ 138 ರೈತರಿಗೆ ನೋಟಿಸ್ ನೀಡದೇ ಇಂದೀಕರಣ ವಕ್ಫ್​​ ಹೆಸರು ಸೇರ್ಪಡೆಯಾಗಿದೆ ಎಂದು ಜಿಲ್ಲಾಧಿಕಾರಿ ಅಚ್ಚರಿಯ ಮಾಹಿತಿ ಬಿಚ್ಚಿಟ್ಟಿದ್ದಾರೆ.

2020-21ರಲ್ಲೂ ನೋಟಿಸ್ ನೀಡದೆ ಸಾಕಷ್ಟು ರೈತರ ಜಮೀನು ಪಹಣಿಯಲ್ಲಿ ವಕ್ಫ್​ ಹೆಸರು ಉಲ್ಲೇಖಿಸಿದ್ದು, ಇದು ಕಾನೂನು ಪ್ರಕ್ರಿಯೆ. ಇನ್ಮುಂದೆ ನೋಟಿಸ್ ಇಲ್ಲ, ಕಾಲಂ 11 ಹೆಸರು ಸೇರ್ಪಡೆ ಮಾಡಲ್ಲ. ಈಗ ಮಾಡಿರೋದನ್ನ ವಾಪಸ್ ಪಡೆಯುತ್ತೇವೆ, ಆದರೆ ಈ ಹಿಂದೆ ಆಗಿರುವ ಮ್ಯೂಟೇಷನ್ ಕುರಿತು ಸರ್ಕಾರದಿಂದ ಸಲಹೆ ಪಡೆದು ಮುಂದಿನ ಕಾರ್ಯ ಕೈಗೊಳ್ಳುತ್ತೇವೆ ಎಂದಿದ್ದಾರೆ.

ವಿಜಯಪುರ ನಗರದ ಸರ್ವೆ ನಂಬರ್ 811 ಪಿಡಬ್ಲ್ಯೂಡಿ ಆಸ್ತಿ ವಕ್ಫ್ ಪಾಲಾಗಿದೆ. ಈ ಕುರಿತು ವಕ್ಫ್ ಅಧಿಕಾರಿ, ಡಿಸಿಗೆ ಗೋವಿಂದ ಕಾರಜೋಳ ಪ್ರಶ್ನೆ ಮಾಡಿದ್ದು, ಪಿಡಬ್ಲ್ಯೂಡಿಯ ಇಷ್ಟು ದೊಡ್ಡ ಆಸ್ತಿ ಹೇಗೆ ವಕ್ಫ್​ಗೆ ಸೇರಿತ್ತು? ಇದರಲ್ಲಿ ಅಧಿಕಾರಿಗಳಿಗಿಂತ ಸಚಿವ ಜಮೀರ್ ಅಹ್ಮದ್ ಖಾನ್ ತಪ್ಪೇ ಎದ್ದು‌ ಕಾಣುತ್ತಿದೆ ಎಂದು ಬಿಜೆಪಿ ತಂಡ ಆರೋಪಿಸಿದೆ.

By Veeresh

Leave a Reply

Your email address will not be published. Required fields are marked *

Verified by MonsterInsights