ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್​ ಗಾಗಿ ಪತ್ನಿ ವಿಜಯಲಕ್ಷ್ಮಿ ಶಕ್ತಿ ದೇವತೆ ಮೊರೆ ಹೊರಟಿದ್ದಾರೆ. ದರ್ಶನ್​ ಬಿಡುಗಡೆಗೆ ಯಾವುದೇ ಅಡೆತಡೆಗಳು ಉಂಟಾಗದಂತೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ನಗರದ ಬಂಡೆ ಮಹಾಕಾಳಿ ದೇವಿಯ ದೇವಾಲಯಕ್ಕೆ ಬೆಳಗ್ಗೆ ಆಗಮಿಸಿ ದೇವರ ದರ್ಶನ ಪಡೆದಿದ್ದಾರೆ. ಬಳಿಕ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರೋ ನಟ ದರ್ಶನ್ ಆದಷ್ಟು ಬೇಗ ಆರೋಪ ಮುಕ್ತರಾಗಲಿ ಎಂದು ಮಹಾಕಾಳಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಇನ್ನು ಬಂಧನಕ್ಕೊಳಗಾಗುವ ಎರಡು ದಿನಗಳ ಮುಂಚೆ ಇದೇ ದೇವಾಲಯದಲ್ಲಿ ನಟ ದರ್ಶನ್​ ದೃಷ್ಟಿ ತೆಗೆಸಿ ತಡೆ ಒಡೆಸಿದ್ದರು. ಇದೀಗ ಪತ್ನಿ ವಿಜಯಲಕ್ಷ್ಮಿ ಮಹಾಕಾಳಿ ದೇವತೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಸದ್ಯ ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್​, ಜೈಲಿನಲ್ಲಿ ಟಿವಿಗಳಿದ್ದರೂ, ಅದನ್ನು ಬಳಸದೆ ತಮ್ಮ ಸಹಚರರಿಗೂ ಟಿವಿ ಬಳಸದಂತೆ ಸೂಚನೆ ನೀಡಿದ್ದಾರೆ. ಇನ್ನು, ದಿನಗಳೆಯಲು ಪುಸ್ತಕಗಳ ಮೊರೆ ಹೋಗಿದ್ದಾರೆ.

 

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

By admin

Leave a Reply

Your email address will not be published. Required fields are marked *

Verified by MonsterInsights