Top Newsರಾಜ್ಯಸಿನಿಮಾಸುದ್ದಿ

ಗೌರಿ-ಗಣೇಶ ಹಬ್ಬದ ಪ್ರಯುಕ್ತ ದರ್ಶನ್‌ ಜೊತೆಗಿನ ಫೋಟೋ ಹಂಚಿಕೊಂಡ ವಿಜಯಲಕ್ಷ್ಮಿ

ಆಗಸ್ಟ್‌ 14 ರಂದು ಸುಪ್ರೀಂ ಕೋರ್ಟ್‌ ರೇಣುಕಾಸ್ವಾಮಿ ಕೊಲೆ ಆರೋಪಿಗಳ ಜಾಮೀನು ಕ್ಯಾನ್ಸಲ್ ಮಾಡಿ ತೀರ್ಪು ಕೊಟ್ಟ ನಂತರ ನಟ ದರ್ಶನ್‌, ಪವಿತ್ರಾ ಗೌಡ ಸೇರಿದಂತೆ 7 ಜನರು ಪರಪ್ಪನ ಅಗ್ರಹಾರ ಜೈಲಿನಲ್ಲೇ ಇದಾರೆ. ಇದೀಗ ವಿಜಯಲಕ್ಷ್ಮಿ‌, ಪತಿ ದರ್ಶನ್‌ ಜೊತೆಗಿನ ಫೋಟೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು ಶುಭಾಶಯ ಕೋರಿದ್ದಾರೆ.

ಎಲ್ಲವೂ ಸರಿಯಾಗಿದಿದ್ದಿದ್ರೆ ನಟ ದರ್ಶನ್ ಇಂದು ಗೌರಿ ಗಣೇಶ ಹಬ್ಬವನ್ನು ಮನೆಯಲ್ಲಿ ಆಚರಿಸುತ್ತಿದ್ರು. ಆದರೆ ಇದೀಗ ಜೈಲಲ್ಲಿ ಆಚರಿಸಿಬೇಕಾಗಿದೆ. ಸಾಮಾನ್ಯವಾಗಿ ನಟ ದರ್ಶನ್ ಹಬ್ಬಗಳಲ್ಲಿ ಶುಭಾಶಯ ಕೋರಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಪದ್ಧತಿ ಪಾಲಿಸಿಕೊಂಡು ಬಂದಿದ್ದರು. ಕಳೆದ ವರ್ಷವೂ ದರ್ಶನ್ ಪಾಲಿನ ಗೌರಿ ಗಣೇಶ ಹಬ್ಬ ಜೈಲಲ್ಲೇ ನಡೀತು, ಈ ವರ್ಷವೂ ಜೈಲೇ ಕಂಟಿನ್ಯೂ ಆಗಿದೆ. ಇಂಥಹ ವಿಪರ್ಯಾಸದಲ್ಲೂ ವಿಜಯಲಕ್ಷ್ಮಿ ಪತಿ ಜೊತೆ ಫೋಟೋ ಪೋಸ್ಟ್ ಮಾಡಿ ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯ ಕೋರಿದ್ದಾರೆ.

ಫಾರ್ಮ್ಹೌಸ್‌ನಲ್ಲಿ ಪೂಜಾ ಸಮಯವೊಂದರಲ್ಲಿ ತೆಗೆದಿರುವ ಫೋಟೋವನ್ನ ದರ್ಶನ್ ಪತ್ನಿ ವಿಜಯಲಕ್ಷ್ಮಿ ಪೋಸ್ಟ್ ಮಾಡಿದ್ದಾರೆ. ಬಹುಶಃ ದರ್ಶನ್ ಹೊರಗಡೆ ಇದ್ದಿದ್ರೆ ಸಂಭ್ರಮದಿಂದ ಈ ಬಾರಿಯಾದರೂ ಗೌರಿ ಗಣೇಶ ಹಬ್ಬವನ್ನ ಆಚರಿಸುತ್ತಿದ್ದರೋ ಏನೋ, ಆದರೆ ಈ ಬಾರಿಯೂ ಪರಪ್ಪನ ಅಗ್ರಹಾರದಲ್ಲೇ ಗಣೇಶ ಪ್ರಸಾದ ಸವಿಯಬೇಕಾದ ಪರಿಸ್ಥಿತಿ ಬಂದಿದೆ.

ದರ್ಶನ್‌ ಅವರ ಬಹುನಿರೀಕ್ಷಿತ ʻದಿ ಡೆವಿಲ್‌ʼ ಸಿನಿಮಾದ ಶೂಟಿಂಗ್‌ ಕೆಲಸಗಳು ಈಗಾಗಲೇ ಪೂರ್ಣಗೊಂಡಿವೆ. ಆದರೆ, ಜಾಮೀನು ರದ್ದಾದ ಕಾರಣ ದರ್ಶನ್‌ ಜೈಲು ಸೇರಿರುವುದರಿಂದ ಚಿತ್ರದ ಪ್ರಚಾರ ಕಾರ್ಯಗಳು ತಡವಾಗುವ ಸಾಧ್ಯತೆ ಇತ್ತು. ಈ ಸಂದರ್ಭದಲ್ಲಿ ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮಿ ʻದಿ ಡೆವಿಲ್‌ʼ ಚಿತ್ರದ ಪ್ರಚಾರದ ಜವಾಬ್ದಾರಿಯನ್ನು ತಾವೇ ವಹಿಸಿಕೊಂಡಿದ್ದಾರೆ.

Comments (0)

Your email address will not be published. Required fields are marked *

Back to top button