ಕೊಲ್ಲೂರು ಮೂಕಾಂಬಿಕೆ ಭೇಟಿ ಕೊಟ್ಟ ಬೆನ್ನಲ್ಲೇ ದರ್ಶನ್ (Darshan) ನೋಡಲು ಪತ್ನಿ ವಿಜಯಲಕ್ಷ್ಮಿ (Vijayalakshmi) ಜೈಲಿಗೆ ಭೇಟಿ ನೀಡಿದ್ದಾರೆ. ಅತ್ತಿಗೆ ಜೊತೆ ದಿನಕರ್ ತೂಗುದೀಪ್ (Dinakar Thoogudeepa) ಕೂಡ ಪರಪ್ಪನ ಅಗ್ರಹಾರಕ್ಕೆ ಭೇಟಿ ಕೊಟ್ಟಿದ್ದಾರೆ. ದರ್ಶನ್ ಬಿಡುಗಡೆಗಾಗಿ ಪತ್ನಿ ವಿಜಯಲಕ್ಷ್ಮಿ ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ಚಂಡಿಕಾ ಯಾಗ ಮಾಡಿಸಿದ್ದರು. ಇದೀಗ ಪೂಜೆಯ ಪ್ರಸಾದ ಸಮೇತ ದರ್ಶನ್‌ಗೆ ನೀಡಲು ವಿಜಯಲಕ್ಷ್ಮಿ ಕುಟುಂಬ ಜೈಲಿಗೆ ಭೇಟಿ ಕೊಟ್ಟಿದ್ದಾರೆ. ಅಂದಹಾಗೆ, ಕೊಲೆ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್‌ರನ್ನು ನೋಡಲು ಪತ್ನಿ ವಿಜಯಲಕ್ಷ್ಮಿ 6ನೇ ಬಾರಿ ಜೈಲಿಗೆ ಭೇಟಿ ನೀಡಿದ್ದಾರೆ. ವಾರದಲ್ಲಿ 2 ಬಾರಿ ಮಾತ್ರ ವಿಸಿಟ್‌ಗೆ ಅವಕಾಶವಿರುತ್ತದೆ.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com