Sunday, March 1, 2026
27.4 C
Bengaluru
Google search engine
LIVE
ಮನೆಸಿನಿಮಾವಿಜಯ್ - ಸಂಗೀತಾ ಡಿವೋರ್ಸ್ ಫಿಕ್ಸ್; ಮಗನಿಂದಲೇ ದಳಪತಿಗೆ ಶಾಕ್..!

ವಿಜಯ್ – ಸಂಗೀತಾ ಡಿವೋರ್ಸ್ ಫಿಕ್ಸ್; ಮಗನಿಂದಲೇ ದಳಪತಿಗೆ ಶಾಕ್..!

ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ದಳಪತಿ ವಿಜಯ್ ಅವರ ವೈಯಕ್ತಿಕ ಜೀವನ ಈಗ ಬೀದಿಗೆ ಬಂದಿದ್ದು, ಅವರ ಸಂಸಾರದಲ್ಲಿ ಬಿರುಕು ಮೂಡಿರುವುದು ಈಗ ಜಗಜ್ಜಾಹೀರಾಗಿದೆ. ವಿಜಯ್ ಪತ್ನಿ ಸಂಗೀತಾ ಅವರು ವಿಚ್ಛೇದನ ಕೋರಿ ಚಂಗಲ್‌ಪಟ್ಟು ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದು, ಈ ಸುದ್ದಿ ಕಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದೆ. ದಶಕಗಳ ಕಾಲ ಸುದೀರ್ಘ ದಾಂಪತ್ಯ ನಡೆಸಿದ್ದ ಈ ಜೋಡಿ ಈಗ ಕಾನೂನಾತ್ಮಕವಾಗಿ ಬೇರ್ಪಡಲು ಮುಂದಾಗಿರುವುದು ಅವರ ಅಭಿಮಾನಿಗಳಿಗೆ ಭಾರಿ ಆಘಾತ ನೀಡಿದೆ.

ಈ ವಿಚ್ಛೇದನ ಸುದ್ದಿಯ ಬೆನ್ನಲ್ಲೇ ವಿಜಯ್ ಅವರಿಗೆ ಮತ್ತೊಂದು ಆಘಾತ ಎದುರಾಗಿದ್ದು, ಸ್ವಂತ ಮಗ ಜೇಸನ್ ಸಂಜಯ್ ಅವರೇ ತಂದೆಗೆ ಕಿಂಚಿತ್ತೂ ಗೌರವ ನೀಡದೆ ದೂರ ಸರಿದಿದ್ದಾರೆ ಎನ್ನಲಾಗುತ್ತಿದೆ. ತಂದೆ-ತಾಯಿಯ ನಡುವಿನ ಕಲಹದಿಂದ ಬೇಸತ್ತಿರುವ ಜೇಸನ್ ಸಂಜಯ್, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಂದೆ ವಿಜಯ್ ಅವರನ್ನು ಅನ್‌ಫಾಲೋ ಮಾಡುವ ಮೂಲಕ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಮಗನ ಈ ನಡೆ ವಿಜಯ್ ಅವರಿಗೆ ಕೇವಲ ಪತ್ನಿ ಮಾತ್ರವಲ್ಲದೆ, ಮಕ್ಕಳೂ ದೂರವಾಗುತ್ತಿದ್ದಾರೆಯೇ ಎಂಬ ಚರ್ಚೆಗೆ ನಾಂದಿ ಹಾಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಮಗನ ಈ ನಿರ್ಧಾರ ವಿಜಯ್ ಅಭಿಮಾನಿಗಳಲ್ಲಿ ತೀವ್ರ ಗೊಂದಲ ಮತ್ತು ಆತಂಕ ಮೂಡಿಸಿದೆ. ರಾಜಕೀಯ ಪ್ರವೇಶದ ಹೊಸ್ತಿಲಲ್ಲಿರುವ ವಿಜಯ್ ಅವರಿಗೆ ಈ ಕೌಟುಂಬಿಕ ಕಲಹ ಮತ್ತು ಮಗನ ಬಹಿರಂಗ ಅಸಮಾಧಾನವು ದೊಡ್ಡ ಹಿನ್ನಡೆಯಾಗಿ ಪರಿಣಮಿಸುವ ಸಾಧ್ಯತೆಯಿದೆ. ತಂದೆಯ ಬಗ್ಗೆ ಮಗನಿಗಿರುವ ಈ ತೀವ್ರ ಮುನಿಸು ಈಗ ಸಿನಿವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments