ಮಂಡ್ಯ: ಕರ್ನಾಟಕ ಕಾಂಗ್ರೆಸ್​ ಸರ್ಕಾರದಲ್ಲಿ ಮತ್ತೆ ಸಚಿವ ಸ್ಥಾನಕ್ಕಾಗಿ ಕೂಗು ಜೋರಾಗಿದೆಯೇ? ಮಂಡ್ಯದಲ್ಲಿ ಮಳವಳ್ಳಿ ಕಾಂಗ್ರೆಸ್ ಶಾಸಕ ನರೇಂದ್ರ ಸ್ವಾಮಿ ನೀಡಿರುವ ಹೇಳಿಕೆ ಇಂಥದ್ದೊಂದು ಅನುಮಾನಕ್ಕೆ ಕಾರಣವಾಗಿದೆ. ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ​ಸಚಿವ ಸ್ಥಾನಕ್ಕೆ ಬೇಡಿಕೆ ಇಡುವುದಲ್ಲ, ನನ್ನ ಹಕ್ಕು ಅದು ಎಂದರು.

ಸಚಿವ ಸ್ಥಾನ ನೀಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಅವರಿಗೂ ಹೈಕಮಾಂಡ್​ನಿಂದ ಅನುಮತಿ ಸಿಗಬೇಕು. ಮಂಡ್ಯದಲ್ಲಿ ನಾನೇ ಹಿರಿಯ ಶಾಸಕನಿದ್ದೇನೆ. ಕಾಂಗ್ರೆಸ್​ನಲ್ಲಿ ಇಲ್ಲಿ ಯಾರು ಸೀನಿಯರ್ ಹೇಳಿ? ಪಕ್ಷ ಕಟ್ಟಿದವರು ಯಾರು ಹೇಳಿ. ನಾನೇ ಅಲ್ವಾ… ಸಚಿವ ಸ್ಥಾನ ನನ್ನ ಹಕ್ಕು ಅದು ಎಂದು ಅವರು ಪ್ರತಿಪಾದಿಸಿದರು.ನನಗೆ ಯೋಗ್ಯತೆ ಇಲ್ಲವಾ, ಅರ್ಹತೆ ಇಲ್ಲವಾ, ಸೀನಿಯಾರಿಟಿ ಇಲ್ಲವಾ? ವಿದ್ಯಾರ್ಥಿ ದೆಸೆಯಿಂದ ಕಾಂಗ್ರೆಸ್ ಪಕ್ಷ ಕಟ್ಟಿದವನು ನಾನು. ನನ್ನ ಅರ್ಹತೆ ಬಗ್ಗೆ ಪ್ರಶ್ನೆ ಮಾಡಲು ಇವತ್ತಿನ ಮಟ್ಟಿಗೆ ಕರ್ನಾಟಕ ಕಾಂಗ್ರೆಸ್​​​ನಲ್ಲಿ ಯಾರಿಗೂ ಅರ್ಹತೆ ಇಲ್ಲ ಎಂದರು.

Leave a Reply

Your email address will not be published. Required fields are marked *

Verified by MonsterInsights