ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ದರ್ಶನ್ ಆಪ್ತ, ನಟ ಧನ್ವೀರ್ ನನ್ನು ಕರೆಸಿ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ..
ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ ಕೈದಿಗಳಿಗೆ ಮೊಬೈಲ್, ಮದ್ಯ, ಸಿಗರೇಟ್ನಂತಹ ವಸ್ತುಗಳನ್ನು ಕೊಡ್ತಿರುವ ವಿಡಿಯೋಗಳು ವೈರಲ್ ಆಗಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ದರ್ಶನ್ ಆಪ್ತ, ನಟ ಧನ್ವೀರ್ನನ್ನು ಕರೆಸಿ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಸದ್ಯ ಜೈಲಿನ ವಿಡಿಯೋನ ದರ್ಶನ್ ಆಪ್ತ ಧನ್ವೀರ್ ರಿಲೀಸ್ ಮಾಡಿರೋ ಅನುಮಾನ ಇದೆ. ಈ ಕಾರಣದಿಂದಲೇ ಧನ್ವೀರ್ ವಿಚಾರಣೆ ನಡೆಸಲಾಗಿದೆ. ಆದರೆ ಅವರ ಬಳಿ ಆ ರೀತಿಯ ಯಾವುದೇ ವಿಡಿಯೋ ಪತ್ತೆ ಆಗಿಲ್ಲ. ಹಾಗಾಗಿ ವಿಚಾರಣೆ ನಡೆಸಿ ಅವರನ್ನು ಸಿಸಿಬಿ ಪೊಲೀಸರು ಕಳುಹಿಸಿದ್ದಾರೆ. ಅನುಮಾನದ ಮೇರೆಗೆ ಧನ್ವೀರ್ ಅವರನ್ನು ಸಿಸಿಬಿ ಡ್ರಿಲ್ ಮಾಡುತ್ತಿದ್ದು ಸೋಮವಾರ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.
ಇನ್ನು ಕೊಲೆ ಕೇಸ್ನಲ್ಲಿ ಜೈಲು ಸೇರಿರುವ ನಟ ದರ್ಶನ್ ಕೇವಲ ಹಾಸಿಗೆ, ದಿಂಬಿಗೆ ಕೋರ್ಟ್ ಮೊರೆ ಹೋಗಿರುವಾಗ, ಇತರೆ ಕೈದಿಗಳಿಗೆ ನಾನಾ ಸೌಕರ್ಯ ಸಿಗ್ತಿರೋದಾದ್ರೂ ಹೇಗೆ ಎನ್ನುವ ಪ್ರಶ್ನೆ ಮೂಡಿದೆ. ದಿಂಬು, ಹಾಸಿಗೆ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ದರ್ಶನ್ ಪರ ವಕೀಲರು ಬೇರೆ ಕೈದಿಗಳಿಗೆ ಜೈಲಿನಲ್ಲಿ ವಿಶೇಷ ಸವಲತ್ತುಗಳನ್ನು ಪಡೆಯುತ್ತಿದ್ದಾರೆ. ಆದರೆ ದರ್ಶನ್ ಅವರಿಗೆ ಸವಲತ್ತುಗಳು ಸಿಗುತ್ತಿಲ್ಲ ಎಂದು ವಾದಿಸಿದ್ದರು.
ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ವಿಚಾರ ಇದೇ ಮೊದಲೇನು ಅಲ್ಲ. ರೌಡಿಗಳ ಬರ್ತ್ ಡೇ ಪಾರ್ಟಿ, ದರ್ಶನ್ ರಾಜಾತಿಥ್ಯದ ಫೋಟೊಗಳು ರಿಲೀಸ್ ಆಗಿತ್ತು. ಇದೀಗ ಪದೇ ಪದೇ ಹೊರ ಬರ್ತಿರೋ ವಿಡಿಯೋ ಮತ್ತು ಫೋಟೋ ರಿಲೀಸ್ ಹಿಂದೆ ದೊಡ್ಡ ಷಡ್ಯಂತ್ರವಿದೆ ಎನ್ನಲಾಗ್ತಿದೆ.


