ತಮಿಳುನಾಡು ರಾಜಕೀಯ ಕಣ ರಂಗೇರುತ್ತಿದೆ. ಇತ್ತೀಚಿಗೆ ಬಿಜೆಪಿ ತೊರೆದಿದ್ದ ಕಾಡುಗಳ್ಳ ವೀರಪ್ಪನ್ ಪುತ್ರಿ ವಿದ್ಯಾ ರಾಣಿ ವೀರಪ್ಪನ್ ಇದೀಗ ಕೃಷ್ಣಗಿರಿ ಲೋಕಸಭಾ ಕ್ಷೇತ್ರದಲ್ಲಿ ಎನ್ಟಿಕೆ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.
ವಿಶೇಷ ಅಂದ್ರೆ, ಅಪ್ಪ ವೀರಪ್ಪನ್ ಆಶಯದಂತೆ ಜನಸೇವೆ ಮಾಡಲು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವುದಾಗಿ ವಿದ್ಯಾ ರಾಣಿ ವೀರಪ್ಪನ್ ಹೇಳಿಕೊಂಡಿದ್ದಾರೆ.
ಚೆನ್ನೈನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ನಾಮ್ ತಮಿಳರ್ ಕಚ್ಚಿ ಪಕ್ಷದ ಅಧ್ಯಕ್ಷ ಸೀಮಾನ್ ಅವರು ತಮ್ಮ ಪಕ್ಷದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದರು.ಈ ಸಂದರ್ಭದಲ್ಲಿ ವಿದ್ಯಾರಾಣಿ ವೀರಪ್ಪನ್ ಅವರನ್ನು ಕೃಷ್ಣಗಿರಿ ಅಭ್ಯರ್ಥಿ ಎಂದು ಸೀಮಾನ್ ಪರಿಚಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಾಮಾಜಿಕ ಸೇವೆಯೇ ನಮ್ಮ ಗುರಿ.. ಅಪ್ಪ ವೀರಪ್ಪನ್ ಆಶಯಗಳ ಅನುಸಾರ ಜನಸೇವೆ ಮಾಡುವುದಾಗಿ ಘೋಷಿಸಿದರು. ವಿದ್ಯಾರಾಣಿಯ ಈ ಮಾತುಗಳೀಗ ಚರ್ಚೆಗೆ ಗ್ರಾಸವಾಗಿವೆ.
ಯಾಕಂದ್ರೆ ವೀರಪ್ಪನ್ ಹೇಳಿಕೇಳಿ ಕಾಡುಗಳ್ಳ.. ಶ್ರೀಗಂಧ ಚೊರ.. ದಂತ ಚೋರ.. ಪೊಲೀಸರನ್ನು ಸಹ ಕೊಂದ ಹಿನ್ನೆಲೆ ಇದೆ.. ವರ ನಟ ರಾಜ್ಕುಮಾರ್ ಅಪಹರಿಸಿದ್ದು ಇದೇ ವೀರಪ್ಪನ್.. 2004ರಲ್ಲಿ ತಮಿಳುನಾಡು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ವೀರಪ್ಪನ ಹತ್ಯೆಯಾಗಿದ್ದ..
ವಿದ್ಯಾರಾಣಿ ವೀರಪ್ಪನ್ ಕಾನೂನು ಪದವಿಧರೆ.. ಸಾಮಾಜಿಕ ಕಾರ್ಯಕರ್ತೆಯಾಗಿ ಸಕ್ರಿಯರಾಗಿದ್ದಾರೆ. ದಲಿತರು, ಬುಡಕಟ್ಟು ಸಮುದಾಯದ ಪರ ಹೋರಾಟಗಳನ್ನು ನಡೆಸ್ತಿದ್ದಾರೆ. ಬಿಜೆಪಿಯಲ್ಲಿಯೂ ಅವರು ಗುರುತಿಸಿಕೊಂಡಿದ್ದರು.ಆದರೆ, ಇತ್ತೀಚಿಗೆ ಬಿಜೆಪಿಗೆ ರಾಜೀನಾಮೆ ನೀಡಿ ನಾಮ್ ತಮಿಳರ್ ಕಚ್ಚಿ ಪಕ್ಷವನ್ನು ಸೇರಿದ್ದರು.