ಕಲಬುರಗಿ: ಜಿಲ್ಲೆಯ ಕಾಳಗಿ ಪಟ್ಟಣದಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣದ ಮಾಸ್ಟರ್ ಮೈಂಡ್ ಸಿಕ್ಕಿಬಿದ್ದಿದ್ದಾನೆ.
ಮನೆ ಮಾಲೀಕರಾದ ಸಿದ್ದಮ್ಮ ಅವರ ಸಹೋದರನ ಮಗನೇ ಕಳ್ಳತನ ಮಾಡಿದ್ದು ಬಯಲಾಗಿದೆ. 38 ವರ್ಷದ ಮೀನಪ್ಪ ಬೆನ್ನೂರ ಎಂಬಾತನನ್ನ ಬಂಧಿಸಲಾಗಿದ್ದು, 9.30 ಲಕ್ಷ ಹಣವನ್ನು ಜಪ್ತಿ ಮಾಡಲಾಗಿದೆ. ಸಿದ್ದಮ್ಮರ ಮನೆಯಲ್ಲಿ ಹಲವು ವರ್ಷಗಳಿಂದ, ಸಹೋದರನ ಕುಟುಂಬ ವಾಸವಿತ್ತು. ಸಿದ್ದಮ್ಮ ಜಮೀನಿಗೆ ಹೋದಾಗ 11 ಲಕ್ಷ ರೂ. ಹಣ ಕದ್ದಿದ್ದ ಮೀನಪ್ಪ, ತನ್ನ ಸಹೋದರನಿಗೆ ವಿಷಯ ಬಾಯಿ ಬಿಡದಂತೆ 1.70 ಲಕ್ಷ ರೂ. ಪಾಲನ್ನೂ ಕೊಟ್ಟಿದ್ದ. ಘಟನೆ ಸಂಬಂಧ, ಕಾಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


