ಜ್ಯೋತಿಷ್ಯ ಶಾಸ್ತ್ರದಲ್ಲಿ ಒಂದು ಗ್ರಹದಿಂದ ಇನ್ನೊಂದು ಗ್ರಹಗಳು ರಾಶಿಯಿಂದ ರಾಶಿಗೆ ಬದಲಾಗುತ್ತಲೇ ಇರುತ್ತದೆ. ಇದರಿಂದ ಆಯಾ ರಾಶಿಗಳ ಜನರ ಜೀವನದ ಮೇಲೂ ಪ್ರಭಾವ ಬೀರುತ್ತೆ. ಯಾರ ಜಾತಕದಲ್ಲಿ ಉತ್ತಮ ಯೋಗಗಳು ಇರುತ್ತವೆಯೋ ಅವರಿಗೆ ಯಶಸ್ಸು ಸಿಗುತ್ತದೆ ಮತ್ತು ಸಂಪತ್ತು ಬರುತ್ತದೆ. ಗ್ರಹಗಳ ಚಲನೆಯಿಂದ ವರಿಷ್ಠ ಯೋಗ ಹಾಗೂ ಕೇಂದ್ರ ಯೋಗದ ಜೊತೆಗೆ ಹಲವು ಶುಭ ಯೋಗಗಳು ರೂಪಗೊಳ್ಳುತ್ತಿವೆ. ರಾಮ ಭಕ್ತ ಹನುಮಂತನ ವಿಶೇಷ ಕೃಪೆಯೊಂದಿಗೆ ಈ ರಾಶಿಯವರು ಶತ್ರುಗಳು ಮತ್ತು ತೊಂದರೆಗಳಿಂದ ಮುಕ್ತಿಯನ್ನು ಪಡೆಯುತ್ತಾರೆ
ಮೇಷ ರಾಶಿಯವರಿಗೆ ಅವರ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರಕುವುದು. ಇದರಿಂದಾಗಿ ಯಶಸ್ಸನ್ನು ಗಳಿಸುವಿರಿ. ನಿಮ್ಮ ಎಲ್ಲಾ ಕೆಲಸಗಳನ್ನ ಧೈರ್ಯದಿಂದ ನಿಭಾಯಿಸುತ್ತೀರಿ ನಿಮಗೆ ಮನೆಯವರ ಸಂಪೂರ್ಣ ಬೆಂಬಲ ದೊರಕಲಿದೆ. ವಿಶೇಷವಾಗಿ ಕಿರಿಯ ಸಹೋದರ ಸಹೋದರಿಯರ ಸಹಾಯದಿಂದ ಆತ್ಮವಿಶ್ವಾಸ ಹೆಚ್ಚಳವಾಗುವುದು.
ಮಿಥುನ ರಾಶಿಯ ವಿದ್ಯಾರ್ಥಿಗಳು ಉತ್ತಮ ಅವಕಾಶಗಳನ್ನು ಪಡೆಯುವ ಸಂಭವವಿದೆ. ವ್ಯಾಪಾರಕ್ಕೆ ಸಂಬಂಧಿಸಿದಂತೆ ಮಿಥುನ ರಾಶಿಗೆ ಸೇರಿದ ಜನರು ತಾವು ಅಂದುಕೊಂಡಂತಹ ಯಶಸ್ಸನ್ನು ಗಳಿಸುವರು. ವಿಶೇಷವಾಗಿ ಆಸ್ಪತ್ರೆ ಮೆಡಿಕಲ್ ಸ್ಟೋರ್, ಲ್ಯಾಬ್, ಪೊಲೀಸ್ ಮತ್ತು ನ್ಯಾಯಾಲಯಕ್ಕೆ ಸಂಬಂಧಿಸಿದ ಕೆಲಸವನ್ನು ಮಾಡುವ ಜನರಿಗೆ ವಿಶೇಷವಾಗಿ ಯಶಸ್ಸು ದೊರಕುವುದು. ನೀವು ಗೌರವ, ಖ್ಯಾತಿಗೆ ಪಾತ್ರರಾಗುವಿರಿ. ಜೊತೆಗೆ ಸರಿಯಾಗಿ ಯೋಚಿಸಿ ನಿರ್ಧಾರವನ್ನು ತೆಗೆದುಕೊಳ್ಳಿ.
ಸಿಂಹ ರಾಶಿಯವರು ಸರ್ಕಾರಿ ಸೇವೆಯನ್ನು ಮಾಡುವ ಪ್ರಭಾವಶಾಲಿ ವ್ಯಕ್ತಿಗಳ ಭೇಟಿಯಾಗುವುದರಿಂದ ಭವಿಷ್ಯದಲ್ಲಿ ಹೆಚ್ಚಿನ ಲಾಭ ಗಳಿಸುವ ಯೋಗವಿದೆ. ಮ್ಯಾನೇಜ್ಮೆಂಟ್, ಮಾರ್ಕೆಟಿಂಗ್, ಸೇಲ್ಸ್, ಸೇನೆ, ರಕ್ಷಣಾ ಕ್ಷೇತ್ರ ಇತ್ಯಾದಿಗಳಿಗೆ ಸಂಬಂಧಿಸಿದ ಕೆಲಸವನ್ನು ಮಾಡುವವರಿಗೆ ಹೆಚ್ಚಿನ ಲಾಭವಿದೆ. ಸಾಕಷ್ಟು ಹಣವನ್ನು ಗಳಿಸುವ ಯೋಗವಿದೆ. ನಿಮಗೆ ಹಿರಿಯ ಸಹೋದರ, ಸಹೋದರಿಯರ ಸಂಪೂರ್ಣ ಬೆಂಬಲ ದೊರಕುವುದು. ಅವರ ಸಹಾಯದಿಂದ ನಿಮ್ಮ ಕೆಲಸಗಳೆಲ್ಲ ಪೂರ್ಣಗೊಳ್ಳಲಿದೆ.
ತುಲಾ ರಾಶಿಯವರು ಜೀವನದಲ್ಲಿ ಸಾಕಷ್ಟು ಉತ್ತಮ ಬದಲಾವಣೆಗಳನ್ನು ಹೊಂದುವಿರಿ. ವ್ಯಾಪಾರಕ್ಕೆ ಸಂಬಂಧಿಸಿದಂತೆ ನಿಮ್ಮ ಪ್ರಯತ್ನಗಳಿಂದ ಯಶಸ್ಸು ಗಳಿಸುವ ಯೋಗ ದೊರಕುವುದು. ಇದರಿಂದಾಗಿ ನಿಮ್ಮ ಕೆಲಸಗಳಲ್ಲಿ ಜಯ ಗಳಿಸುವಿರಿ. ಜೊತೆಗೆ ನಿಮ್ಮ ಯಶಸ್ಸನ್ನು ನೋಡಿ ಜನರು ನಿಮ್ಮ ಸಲಹೆಯನ್ನು ಕೇಳುವರು.
ಕುಂಭ ರಾಶಿಯವರಿಗೆ ವರಿಷ್ಠ ಯೋಗದಿಂದ ಉತ್ತಮ ಫಲವಿದೆ. ನಿಮ್ಮ ಕ್ರಿಯೇಟಿವಿಟಿಯಿಂದಾಗಿ ಸಾಕಷ್ಟು ಪ್ರಯೋಜನಗಳನ್ನು ಪಡೆಯುವ ಯೋಗವಿದೆ. ಜೊತೆಗೆ ವ್ಯಾಪಾರಕ್ಕೆ ಸಂಬಂಧಿಸಿದಂತೆ ನಿಮ್ಮ ಉತ್ತಮ ಆಲೋಚನೆಗಳಿಂದಾಗಿ ಯಶಸ್ಸು ಗಳಿಸುವಿರಿ. ಜೊತೆಗೆ ಈ ಮೊದಲೇ ಮಾಡಿದಂತಹ ಪ್ರಯತ್ನಗಳಿಂದಾಗಿ ಸಾಕಷ್ಟು ಲಾಭವನ್ನು ಪಡೆಯುವ ಯೋಗವಿದೆ. ನೀವು ಹೊಸ ವಾಹನವನ್ನು ಖರೀದಿಸಬೇಕೆಂಬ ಆಸೆ ಈಡೇರುತ್ತದೆ..
————–