Cricket : ಆಂಧ್ರಪ್ರದೇಶದ ಆರಂಭಿಕ ಬ್ಯಾಟ್ಸ್‌ಮನ್ ವಂಶಿ ಕೃಷ್ಣ ಒಂದೇ ಓವರ್‌ನಲ್ಲಿ 6 ಸಿಕ್ಸರ್ ಬಾರಿಸಿ ಇತಿಹಾಸ ನಿರ್ಮಿಸಿದ್ದಾರೆ. ವಂಶಿ ಕೃಷ್ಣ ಕರ್ನಲ್ ಸಿಕೆ ನಾಯ್ಡು ಟ್ರೋಫಿಯಲ್ಲಿ ಈ ದಾಖಲೆಯನ್ನು ಮಾಡಿದ್ದು, ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ರೈಲ್ವೇಸ್ ವಿರುದ್ಧ ಪಂದ್ಯದಲ್ಲಿ ವಂಶಿ ಕೃಷ್ಣ ಒಂದೇ ಓವರ್‌ನ 6 ಬೌಲ್ ಗಳನ್ನೂ ಸಿಕ್ಸ್ಗೆ ಅಟ್ಟಿದ್ದಾರೆ.
ಸತತ 6 ಎಸೆತಗಳನ್ನು ವಂಶಿ ಕೃಷ್ಣ ಸಿಕ್ಸ್ ಗಡಿ ದಾಟಿಸುವ ಮೂಲಕ ಅಬ್ಬರಿಸಿದರು. ಆದರೆ ದಮನ್‌ದೀಪ್ ಹೆಸರಿಗೆ ಅನಗತ್ಯ ದಾಖಲೆ ಸೇರ್ಪಡೆಯಾಯಿತು. ವಂಶಿ ಕೃಷ್ಣ 64 ಎಸೆತಗಳಲ್ಲಿ 110 ರನ್ ಗಳಿಸಿದರು.
ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಲೆಗ್ ಸ್ಪಿನ್ನರ್ ದಮನ್‌ದೀಪ್ ಸಿಂಗ್ ಅವರ ಒಂದು ಓವರ್‌ನಲ್ಲಿ ಸತತ 6 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಅದ್ಭುತ ಶತಕ ಗಳಿಸಿದರು. ಈ ಮೂಲಕ ವಂಶಿ ಕೃಷ್ಣ ಕಡಪದಲ್ಲಿ 110 ರನ್‌ಗಳ ಇನಿಂಗ್ಸ್ ಆಡಿದರು.
ಯುವರಾಜ್ ಸಿಂಗ್ ಅವರು 2007ರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಅವರ ಎಸೆತಗಳಲ್ಲಿ 6 ಸಿಕ್ಸರ್‌ಗಳನ್ನು ಬಾರಿಸಿದ್ದರು, ಆದರೆ ರವಿಶಾಸ್ತ್ರಿ 1985ರ ರಣಜಿಯಲ್ಲಿ ಬರೋಡಾದ ಎಡಗೈ ಸ್ಪಿನ್ನರ್‌ನ ಓವರ್‌ನಲ್ಲಿ 6 ಸಿಕ್ಸರ್‌ಗಳನ್ನು ಬಾರಿಸಿದ್ದರು. ಒಟ್ಟಾರೆಯಾಗಿ ವಂಶಿ ಸಹ ಈ ದಿಗ್ಗಜರ ಸಾಲಿಗೆ ಸೇರ್ಪಡೆಗೊಂಡಿದ್ದಾರೆ.
ಸಿಕೆ ನಾಯುಡು ಟ್ರೋಫಿ ಅಡಿಯಲ್ಲಿ ಆಂಧ್ರಪ್ರದೇಶ ಮತ್ತು ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ (ಆಂಧ್ರ ಪ್ರದೇಶ vs ರೈಲ್ವೇಸ್) ದಮನ್‌ದೀಪ್ ಸಿಂಗ್ ಮೊದಲ ಓವರ್‌ನ ಮೊದಲ ಎಸೆತವನ್ನು ಸ್ಟಂಪ್‌ನ ಹೊರಭಾಗದಲ್ಲಿ ಬೌಲ್ ಮಾಡಿದರು, ಅದನ್ನು ವಂಶಿ ಕೃಷ್ಣ ಅದ್ಭುತವಾಗಿ ಸಿಕ್ಸರ್ ಗೆ ಕಳುಹಿಸಿದರು. ಎರಡನೇ ಎಸೆತವನ್ನು ಕೃಷ್ಣ ಅವರು ಬೌಲರ್‌ನ ತಲೆಯ ಮೇಲೆ ಸಿಕ್ಸರ್ ಸಿಡಿಸಿದರು.
ಕೃಷ್ಣ ಬೌಂಡರಿಗಳಿಂದ 96 ರನ್ ಗಳಿಸಿದರು. ವಂಶಿ ಅವರ 110 ರನ್‌ಗಳ ಹೊರತಾಗಿಯೂ, ಅವರ ತಂಡವು378 ರನ್ ಗಳಿಸಿತು. ರೈಲ್ವೇಸ್ 9 ವಿಕೆಟ್ ಗೆ 865 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ರೈಲ್ವೇಸ್ ಪರ ಅಂಶ್ ಯಾದವ್ ಮತ್ತು ರವಿ ಸಿಂಗ್ ದ್ವಿಶತಕ ಬಾರಿಸಿ ಮಿಂಚಿದ್ದರು.