‘ಸಿಎಂ ಸಿದ್ದರಾಮಯ್ಯಗೆ ಕೊಲೆ ಬೆದರಿಕೆ – ಫ್ರೀಡಂ ಟಿವಿಗೆ ಇ-ಮೇಲ್

ಮುಖ್ಯಮಂತ್ರಿ ಸಿದ್ದರಾಮಯ್ಯಗೆ ದುಷ್ಕರ್ಮಿಗಳು ಕೊಲೆ ಬೆದರಿಕೆ ಹಾಕಿದ್ದಾರೆ.ಸಿದ್ದರಾಮಯ್ಯರನ್ನು ಕೊಲೆ ಮಾಡ್ತೀವಿ ಎಂದು ಇಮೇಲ್ ಮೂಲಕ ಬೆದರಿಕೆ ಹಾಕಿದ್ದಾರೆ.. ಬೆದರಿಕೆ ಸಂದೇಶವನ್ನು ಫ್ರೀಡಂ ಟಿವಿ ಇಮೇಲ್ ಗೆ ಟ್ಯಾಗ್ ಮಾಡಿದ್ದಾರೆ
ರಜಪೂತ್ ಸಿಂಧಾರ್ ಹೆಸರಿನ ವ್ಯಕ್ತಿ ವೈಯಕ್ತಿಕ ಕಾರಣಗಳನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭಯಾನಕವಾಗಿ ಕೊಲ್ಲುವುದಾಗಿ ಧಮ್ಕಿ ಹಾಕಿದ್ದಾನೆ. sindaarrajput@gmail.com ಖಾತೆಯಿಂದ ಮೆಸೇಜ್ ಫ್ರೀಡಂ ಟಿವಿ ಇ-ಮೇಲ್ಗೆ ಟ್ಯಾಗ್ ಮಾಡಿ ಬೆದರಿಕೆ ಹಾಕಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕೊಲೆ ಬೆದರಿಕೆ ಹಾಕಿರುವ ಪ್ರಕರಣದ ಹಿಂದೆ 1 ಕೋಟಿ ರೂಪಾಯಿ ಸಾಲದ ವಿಷಯ ಅಡಕವಾಗಿದೆ. ಬೆಂಗಳೂರಿನ ರಾಮಪುರದ ಪ್ರಭಾಕರ್ ಎಂಬಾತನಿಗೆ 1 ಕೋಟಿ ರೂ. ಸಾಲವನ್ನು ತಾನು ಕೊಟ್ಟಿದ್ದೆ.. ಆದ್ರೆ, 1 ಕೋಟಿ ರೂ. ಸಾಲ ವಾಪಸ್ ಮಾಡಿಲ್ಲ ಎಂದು ರಜಪೂರ್ ಸಿಂದಾರ್ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ..

ಆ ಪ್ರಭಾಕರನಿಗೆ ಆದಷ್ಟು ಬೇಗ ಸಾಲ ವಾಪಸ್ ಕೊಡಲು ಹೇಳಿ.. ಪ್ರಭಾಕರ ತನ್ನ ನಾದಿನಿಯ ಪೋಷಕರ ಮನೆಯಲ್ಲಿ ದುಡ್ಡು ಅಡಗಿಸಿಟ್ಟಿದ್ದಾನೆ. ಪ್ರಭಾಕರನ ಬಳಿ 3 ಸೆಲ್ಯೂಲರ್ ಫೋನ್ಗಳಿವೆ.. ಪ್ರಭಾಕರನಿಗೆ ಇಬ್ಬರು ಮಕ್ಕಳಿವೆ. ಪ್ರಭಾಕರನ ಮಗನಿಗೆ ಈಗಷ್ಟೇ ಮದುವೆ ಆಗಿದೆ. 1 ಕೋಟಿ ವಾಪಸ್ ಕೊಡಲು ಈಗ ಅವನ ಬಳಿ ಆದಾಯ ಇಲ್ಲ.. ಅವನು ದುಡ್ಡು ಕೊಡದಿದ್ರೆ ಹೀಗಾಗಿ ಪ್ರಭಾಕರನನ್ನೂ ಕೊಲೆ ಮಾಡ್ತೀನಿ.. ಸಿಎಂ ಸಿದ್ದರಾಮಯ್ಯನನ್ನೂ ಕೊಲೆ ಮಾಡ್ತೀವಿ.. ಉಪಮುಖ್ಯಮಂತ್ರಿಗಳನ್ನು ಕೊಲ್ತೀವಿ ಎಂದು ರಜಪೂತ್ ಸಿಂಧಾರ್ ಬೆದರಿಕೆ ಸಂದೇಶ ಕಳುಹಿಸಿದ್ದಾನೆ..

ಈ ವಿಚಾರ ಫ್ರೀಡಂ ಟಿವಿ ಗಮನಕ್ಕೆ ಬರುತ್ತಲೇ ಬೆಂಗಳೂರು ಸೆಂಟ್ರಲ್ ವಿಭಾಗದ ಡಿಸಿಪಿ ಶೇಖರ್ ತ್ಯಾಗಣ್ಣನವರ್ ಗಮನಕ್ಕೆ ಮತ್ತು ವೈಯ್ಯಾಲಿಕಾವಲ್ ಠಾಣೆಗೆ ಮಾಹಿತಿ ನೀಡಲಾಗಿದೆ. ಪೊಲೀಸರು ಕ್ರಮ ವಹಿಸುವುದಾಗಿ ತಿಳಿಸಿದ್ದಾರೆ.




