ಡೆಹ್ರಾಡೂನ್: ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ರಾಮನಗರ ಬಳಿ ಬಸ್ ಕಮರಿಗೆ ಬಿದ್ದ ಪರಿಣಾಮ ಕನಿಷ್ಠ 22 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಬಸ್‌ನಲ್ಲಿ ನಿಗದಿ ಪ್ರಮಾಣಕ್ಕಿಂತ ಹೆಚ್ಚು ಜನ ಇದ್ದರು ಎನ್ನಲಾಗಿದೆ. ಇನ್ನು ಮೃತಪಟ್ಟವರಲ್ಲಿ ಹಲವಾರು ಮಕ್ಕಳು ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಸ್ ಗರ್ವಾಲ್‌ನಿಂದ ಕುಮಾನ್‌ಗೆ ಹೋಗುತ್ತಿದ್ದಾಗ ಅಲ್ಮೋರಾದ ಮಾರ್ಚುಲಾದಲ್ಲಿ ಅಪಘಾತ ಸಂಭವಿಸಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಲೋಕ್ ಕುಮಾರ್ ಪಾಂಡೆ ತಿಳಿಸಿದ್ದಾರೆ.
ಬಸ್ 200 ಮೀಟರ್ ಆಳದ ಕಮರಿಗೆ ಬಿದ್ದಿದ್ದು, ಅದರಲ್ಲಿ ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ತಕ್ಷಣ ರಕ್ಷಣಾ ಕಾರ್ಯಾಚರಣೆ ಕೈಗೆತ್ತಿಕೊಳ್ಳಲಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಪಾಂಡೆ ಮಾಹಿತಿ ನೀಡಿದ್ದಾರೆ.
#WATCH | Uttarakhand: A Garwal Motors Users’ bus fell into a gorge near Kupi in Ramnagar at Pauri-Almora border. Deaths and injuries feared. Search and rescue operation underway. Details awaited.
(Video: SDRF) pic.twitter.com/dzSgKw6tkF
— ANI (@ANI) November 4, 2024
ಈ ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದಾರೆ ಎಂದು ಬಸ್ ಗರ್ವಾಲ್ ಮೋಟರ್ ಓನರ್ಸ್ ಯೂನಿಯನ್ ಲಿಮಿಟೆಡ್‌ಗೆ ಸೇರಿದೆ ಎಂದು ಹೇಳಲಾಗಿದೆ. ಬಸ್ ನೈನಿಕಂಡ ಬ್ಲಾಕ್‌ನ ಕಿನಾಥ್‌ನಿಂದ ರಾಮನಗರಕ್ಕೆ ಹೋಗುತ್ತಿತ್ತು. ಕೆಲವರು ಬಸ್‌ನಿಂದ ಕೆಳಗೆ ಬಿದ್ದ ತಕ್ಷಣ ದಾರಿಯಲ್ಲಿ ಹೋಗುತ್ತಿದ್ದವರನ್ನು ಸಹಾಯಕ್ಕಾಗಿ ಕರೆದಿದ್ದಾರೆ. ಇದಾದ ನಂತರ ಪೊಲೀಸರು ಮತ್ತು ಎಸ್‌ಡಿಆರ್‌ಎಫ್ ತಂಡವೂ ಸ್ಥಳಕ್ಕೆ ತೆರಳಿದೆ. ಅಲ್ಮೋರಾ ಎಸ್ಪಿ ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ. ಬಸ್ಸಿನಲ್ಲಿ ಸಿಲುಕಿರುವ ಪ್ರಯಾಣಿಕರನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದೆ. ಇದಲ್ಲದೇ ನೈನಿತಾಲ್‌ನಿಂದ ಕೆಲವು ಪೊಲೀಸ್ ಪಡೆಗಳು ಕೂಡ ಸ್ಥಳಕ್ಕೆ ತೆರಳಿವೆ.


