Monday, June 23, 2025
26.3 C
Bengaluru
Google search engine
LIVE
ಮನೆ#Exclusive NewsTop Newsಹೈ ಹೀಲ್ಸ್‌ ಚಪ್ಪಲಿ ಕೊಡಿಸದಿದ್ದಕ್ಕೆ ಪತಿಗೆ ಡಿವೋರ್ಸ್‌ ಕೊಟ್ಟ ಪತ್ನಿ?

ಹೈ ಹೀಲ್ಸ್‌ ಚಪ್ಪಲಿ ಕೊಡಿಸದಿದ್ದಕ್ಕೆ ಪತಿಗೆ ಡಿವೋರ್ಸ್‌ ಕೊಟ್ಟ ಪತ್ನಿ?

ಗಂಡ ಹೈ ಹೀಲ್ಸ್‌ ಚಪ್ಪಲಿ ಕೊಡಿಸಿಲ್ಲವೆಂದು ಮಹಿಳೆಯೊಬ್ಬಳು ತನ್ನ ಪತಿಯ ವಿರುದ್ಧವೇ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಹೌದು ಹೈ ಹೀಲ್ಸ್‌ ವಿಚಾರವಾಗಿ ನಡೆದ ಜಗಳ ವಿಚ್ಛೇದನ ಹಂತಕ್ಕೆ ಬಂದು ತಲುಪಿದ್ದು, ನಂತರ ಕೌನ್ಸೆಲಿಂಗ್‌ ಸೆಂಟರ್‌ನಲ್ಲಿ ಪತಿ ಪತ್ನಿಯರ ಮಧ್ಯೆ ಸಂಧಾನ ನಡೆಸಿ ಮನೆಗೆ ಕಳುಹಿಸಲಾಗಿದೆ. ಈ ಕುರಿತ ಸುದ್ದಿ ಈಗ ಸಖತ್‌ ವೈರಲ್‌ ಆಗುತ್ತಿದೆ.

ಈ ವಿಚಿತ್ರ ಪ್ರಕರಣ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದ್ದು, ಗಂಡ ಹೈ ಹೀಲ್ಸ್‌ ಚಪ್ಪಲಿ ಕೊಡಿಸಿಲ್ಲವೆಂದು ಹೆಂಡತಿ ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದಾಳೆ. 2024 ರಲ್ಲಿ ಅಂದರೆ ಒಂದು ವರ್ಷದ ಹಿಂದೆ ಮದುವೆಯಾಗಿದ್ದ ಈ ಜೋಡಿಯ ನಡುವೆ ಹೈ ಹೀಲ್ಸ್‌ ಚಪ್ಪಲಿಗೆ ಸಂಬಂಧಪಟ್ಟಂತೆ ಮನಸ್ತಾಪ ಏರ್ಪಟ್ಟಿದೆ. ಆ ಮಹಿಳೆಗೆ ಚಿಕ್ಕಂದಿನಿಂದಲೂ ಹೈ ಹೀಲ್ಸ್‌ ಚಪ್ಪಲಿ ಧರಿಸುವುದೆಂದರೆ ಬಲು ಇಷ್ಟವಂತೆ. ಅದಕ್ಕಾಗಿ ಆಕೆ ಪತಿಯ ಬಳಿ ಹೈ ಹೀಲ್ಸ್‌ ಕೊಡಿಸುವಂತೆ ಕೇಳಿದ್ದಾಳೆ. ಆಕೆಯ ಬೇಡಿಕೆಗೆ ಪತಿ ಒಪ್ಪದಿದ್ದಾಗ, ಇಬ್ಬರ ನಡುವೆ ಜಗಳ ಏರ್ಪಟ್ಟಿದೆ. ಇದೇ ಕೋಪದಲ್ಲಿ ಆಕೆ ತವರು ಮನೆಗೆ ಹೋಗಿದ್ದು ಮಾತ್ರವಲ್ಲದೆ, ಗಂಡ ಹೈ ಹೀಲ್ಸ್‌ ಕೊಡಿಸಿಲ್ಲವೆಂದು ಪೊಲೀಸ್‌ ದೂರನ್ನು ಕೂಡಾ ದಾಖಲಿಸಿದ್ದಾಳೆ. ಅಷ್ಟೇ ಅಲ್ಲದೆ ನನಗೆ ಡಿವೋರ್ಸ್‌ ಬೇಕೆಂದು ಕೇಳಿದ್ದಾಳೆ. ಆಕೆ ಒಮ್ಮೆ ಹೈ ಹೀಲ್ಸ್‌ ಧರಿಸಿ ಜಾರಿ ಬಿದ್ದಿದ್ದಳು, ಅಲ್ಲದೆ ಆಕೆಯ ಕಾಲಿಗೂ ಗಾಯಗಳಾಗಿತ್ತು. ಅದೇ ಕಾರಣಕ್ಕೆ ಹೈ ಹೀಲ್ಸ್‌ ಕೊಡಿಸಲು ನಿರಾಕರಿಸಿದ್ದು ಎಂದು ಪತಿರಾಯ ಹೇಳಿಕೊಂಡಿದ್ದಾನೆ.

ಅಲ್ಲಿ ಕೌನ್ಸೆಲಿಂಗ್‌ ನಡೆಸಿ ಇಬ್ಬರ ನಡುವಿನ ಜಗಳವನ್ನು ಬಗೆಹರಿಸಿ, ಸಂಧಾನ ನಡೆಸಿ ಮನೆಗೆ ಕಳುಹಿಸಲಾಗಿದೆ ಈ ವಿಚಿತ್ರ ಪ್ರಕರಣದ ಸುದ್ದಿ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದ್ದು, ಚಪ್ಪಲಿ ವಿಚಾರ ಕೂಡಾ ವಿಚ್ಛೇದನಕ್ಕೆ ಕಾರಣವಾಗುತ್ತಾ ಎಂದು ನೆಟ್ಟಿಗರು ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments