interesting factsಸುದ್ದಿ

ಕಲ್ಲಂಗಡಿ ಬಳಸಿದ್ರೆ ನಿಮ್ಮ ತ್ವಚೆ ಚಂದ್ರನಂತೆ ಹೊಳೆಯುತ್ತೆ!

ನಿಮ್ಮ ದೇಹವನ್ನು ತಂಪಾಗಿಡುವುದಲ್ಲದೇ, ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುವಲ್ಲಿ ಪರಿಣಾಮಕಾರಿಯಾಗಿದೆ. ನೀರಿನ ಜೊತೆಗೆ ಇದು ವಿಟಮಿನ್ ಎ, ವಿಟಮಿನ್ ಸಿ ಮತ್ತು ಹಲವು ರೀತಿಯ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಆದ್ದರಿಂದ ಇದು ದೇಹವನ್ನು ಹೈಡ್ರೀಕರಿಸುವುದರ  ಜೊತೆಗೆ ತಾಜಾವಾಗಿರಿಸುತ್ತದೆ. ಜೊತೆಗೆ ತ್ವಚೆಯ ಫ್ರೆಶ್​ನೆಸ್​ ಹೆಚ್ಚಿಸಲು ಸಹ ಕಲ್ಲಂಗಡಿಯನ್ನು ಬಳಸಬಹುದು. ಪಾರ್ಲರ್​ಗೆ ಹೋಗದೇ ನೀವು ಕಾಂತಿಯುತವಾದ ತ್ವಚೆ ಪಡೆಯಲು ಬಯಸುವುದಾದರೆ ಕಲ್ಲಂಗಡಿಯಿಂದ ತಯಾರಿಸಿದ ಫೇಶಿಯಲ್ ಬಳಸಿ. ಅಲ್ಲದೆ ಈ ಫೇಶಿಯಲ್ ಅನ್ನು ನೀವು ತುಂಬಾ ಸುಲಭವಾಗಿ ಮನೆಯಲ್ಲಿಯೇ ಸರಳವಾಗಿ ತಯಾರಿಸಬಹುದಾಗಿದೆ. ಅದೇಗಪ್ಪ ಅಂತೀರಾ ಈ ಮುಂದೆ ಓದಿ.

ಫೇಶಿಯಲ್ ಮಾಡಲು ನಿಮ್ಮ ಮುಖವನ್ನು ಸ್ವಚ್ಛಗೊಳಿಸುವುದು ಅತ್ಯಗತ್ಯ. ಇದಕ್ಕಾಗಿ ನೀವು ಕಲ್ಲಂಗಡಿ ರಸವನ್ನು ಹತ್ತಿ ಉಂಡೆಯಿಂದ ನಿಮ್ಮ ಮುಖಕ್ಕೆ ಹಚ್ಚಿ. ಇದು ಚರ್ಮದಿಂದ ಕೊಳಕು ಮತ್ತು ಎಣ್ಣೆಯನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಸ್ಕ್ರಬ್ ಮಾಡಲು ಕಲ್ಲಂಗಡಿ ಜ್ಯೂಸ್​ ಮತ್ತು ಸ್ವಲ್ಪ ಅಕ್ಕಿ ಹಿಟ್ಟನ್ನು ಮಿಶ್ರಣ ಮಾಡಿ. ಇದನ್ನು ನಿಮ್ಮ ಮುಖಕ್ಕೆ ಹಚ್ಚಿ ಸ್ಕ್ರಬ್ ಮಾಡಿ. ಇದು ಸತ್ತ ಚರ್ಮದ ಕೋಶಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಚರ್ಮವನ್ನು ಮೃದುವಾಗಿಡಲು ಸಹ ಪರಿಣಾಮಕಾರಿಯಾಗಿದೆ. ಸ್ಕ್ರಬ್ ಮಾಡಿದ ನಂತರ ಮುಖಕ್ಕೆ ಮಸಾಜ್ ಮಾಡುವುದು ಅತ್ಯಗತ್ಯ. ಕಲ್ಲಂಗಡಿ ತಿರುಳನ್ನು ಮುಖಕ್ಕೆ ಹಚ್ಚಿ 5–10 ನಿಮಿಷಗಳ ಕಾಲ ಮೃದುವಾಗಿ ಮಸಾಜ್ ಮಾಡಿ. ಮಸಾಜ್ ಮಾಡುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ನಿಮ್ಮ ಮುಖಕ್ಕೆ ನೈಸರ್ಗಿಕ ಹೊಳಪು ಬರುತ್ತದೆ.


ಕಲ್ಲಂಗಡಿ ರಸವನ್ನು ಮೊಸರು ಅಥವಾ ಜೇನುತುಪ್ಪದೊಂದಿಗೆ ಬೆರೆಸಿ ಫೇಸ್ ಪ್ಯಾಕ್ ತಯಾರಿಸಿ. ಈ ಪ್ಯಾಕ್ ಅನ್ನು ನಿಮ್ಮ ಮುಖಕ್ಕೆ 10 ರಿಂದ 15 ನಿಮಿಷಗಳ ಕಾಲ ಹಚ್ಚಿ. ನಂತರ ನಿಮ್ಮ ಮುಖವನ್ನು ತಣ್ಣೀರಿನಿಂದ ತೊಳೆಯಿರಿ. ಇದು ನಿಮ್ಮ ಚರ್ಮದ ಬಣ್ಣದಲ್ಲಿ ಗಂಭೀರ ವ್ಯತ್ಯಾಸವನ್ನು ತೋರಿಸುತ್ತದೆ ಮತ್ತು ತಾಜಾವಾಗಿ ಕಾಣುವಂತೆ ಮಾಡುತ್ತದೆ.

ಕಲ್ಲಂಗಡಿ ರಸದಿಂದ ತಯಾರಿಸಿದ ಐಸ್ ಅನ್ನು ಟೋನ್ ಆಗಿ ಬಳಸಿ. ಫೇಶಿಯಲ್ ಮಾಡಿದ ನಂತರ ನಿಮ್ಮ ಮುಖವನ್ನು ಟೋನ್ ಮಾಡಲು ಬಯಸಿದರೆ, ತಣ್ಣಗಾದ ಕಲ್ಲಂಗಡಿ ಜ್ಯೂಸ್​ ಅನ್ನು ನಿಮ್ಮ ಮುಖಕ್ಕೆ ಹಚ್ಚಿ. ಇಲ್ಲದಿದ್ದರೆ ಕಲ್ಲಂಗಡಿ ರಸದಿಂದ ತಯಾರಿಸಿದ ಐಸ್ ಕ್ಯೂಬ್‌ಗಳಿಂದ ನಿಮ್ಮ ಮುಖವನ್ನು ಮಸಾಜ್ ಮಾಡಬಹುದು. ಇದು ಚರ್ಮದ ರಂಧ್ರಗಳನ್ನು ಬಿಗಿಗೊಳಿಸುತ್ತದೆ ಮತ್ತು ನಿಮ್ಮ ಚರ್ಮವನ್ನು ತಾಜಾತನದಿಂದ ಕೂಡಿರುವಂತೆ ಮಾಡುತ್ತದೆ. ಕಲ್ಲಂಗಡಿ ಸೇವನೆ ಅಥವಾ ಫೇಸ್ ಮಾಸ್ಕ್ ಬಳಸುವುದರಿಂದ ಚರ್ಮ ಆರೋಗ್ಯವಾಗಿರುತ್ತದೆ. ಆದರೆ ಅದೊಂದರಿಂದಲೇ ರಾತ್ರೋರಾತ್ರಿ ಚಂದ್ರನಂತಹ ಹೊಳಪು ಸಿಗುವುದಿಲ್ಲ; ಇದರೊಂದಿಗೆ ಸಮತೋಲಿತ ಆಹಾರ ಮತ್ತು ಸರಿಯಾದ ನಿದ್ದೆಯೂ ಮುಖ್ಯ!

Comments (0)

Your email address will not be published. Required fields are marked *

Back to top button