ಅಂಡರ್ 17 ಸ್ಯಾಫ್ ಕಪ್ ಪುಟ್ಬಾಲ್ ಟೂರ್ನಿಯಲ್ಲಿ ನೆರೆಯ ಬಾಂಗ್ಲಾದೇಶವನ್ನು ಮಣಿಸಿದ ಭಾರತ ಯುವ ಫುಟ್ಬಾಲ್ ತಂಡ ಮತ್ತೊಮ್ಮೆ ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಂಡಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ಥಿಂಪು(ಭೂತಾನ್): ಅಂಡರ್-17 ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಶನ್(ಸ್ಯಾಫ್) ಕಪ್‌ನಲ್ಲಿ ಭಾರತ ಸತತ 2ನೇ ಬಾರಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಒಟ್ಟಾರೆ ಕಿರಿಯರ ಸ್ಯಾಫ್(ಅಂಡರ್-15, ಅಂಡರ್-16, ಅಂಡರ್-17 ಸೇರಿ) ಕಪ್‌ನಲ್ಲಿ ಭಾರತ 6ನೇ ಬಾರಿ ಚಾಂಪಿಯನ್ ಎನಿಸಿಕೊಂಡಿದೆ. ಈ ಮೊದಲು ಅಂ-15 ವಿಭಾಗದಲ್ಲಿ 2017, 2019, ಅಂ-16 ವಿಭಾಗದಲ್ಲಿ 2013, 2023, ಅಂ-17 ವಿಭಾಗದಲ್ಲಿ 2022ರಲ್ಲಿ ಪ್ರಶಸ್ತಿ ಗೆದ್ದಿತ್ತು.