Monday, June 23, 2025
25.9 C
Bengaluru
Google search engine
LIVE
ಮನೆ#Exclusive Newsಬಾಕ್ಸ್​ ಆಫೀಸ್​ನಲ್ಲಿ ಧೂಳ್​ ಎಬ್ಬಿಸುತ್ತಿರುವ ‘ಯುಐ’

ಬಾಕ್ಸ್​ ಆಫೀಸ್​ನಲ್ಲಿ ಧೂಳ್​ ಎಬ್ಬಿಸುತ್ತಿರುವ ‘ಯುಐ’

ಉಪೇಂದ್ರ ಸಿನಿಮಾಗಳಲ್ಲಿ ಭಿನ್ನತೆ ಇರುತ್ತದೆ. ಅವರ ನಿರ್ದೇಶನ ಡಿಫರೆಂಟ್ ಆಗಿರುತ್ತದೆ. ಅದೇ ರೀತಿ ಸ್ಕ್ರೀನ್​ಪ್ಲೇ ಕೂಡ ಟ್ವಿಸ್ಟ್ ಆ್ಯಂಡ್ ಟರ್ನ್​ಗಳಿಂದ ಕೂಡಿರುತ್ತದೆ. ಈಗ ‘ಯುಐ’ ಚಿತ್ರವನ್ನು ಜನರು ಒಪ್ಪಿದ್ದಾರೆ. ಇದು ಬಾಕ್ಸ್ ಆಫೀಸ್​ ಗಳಿಕೆಗೆ ಸಹಕಾರಿ ಆಗಿದೆ.

ಉಪೇಂದ್ರ ನಟನೆಯ ‘ಯುಐ’ ಸಿನಿಮಾ ಅಭಿಮಾನಿಗಳಿಗೆ ಇಷ್ಟ ಆಗಿದೆ. ಈ ಚಿತ್ರವನ್ನು ಒಬ್ಬರು ಒಂದೊಂದು ರೀತಿಯಲ್ಲಿ ವಿಮರ್ಶಿಸುತ್ತಿದ್ದಾರೆ. ದೃಶ್ಯಗಳನ್ನು ಡಿಕೋಡ್ ಮಾಡುವಂತೆ ಉಪೇಂದ್ರ ಅವರು ಕೋರಿದ್ದರು. ಈ ಕೋರಿಕೆಯನ್ನು ಸ್ವೀಕರಿಸಿದ ಅನೇಕರು ಮತ್ತೆ ಮತ್ತೆ ತೆರಳಿ ಸಿನಿಮಾ ವೀಕ್ಷಣೆ ಮಾಡುತ್ತಿದ್ದಾರೆ ಮತ್ತು ತಮ್ಮ ವಿಮರ್ಶೆ ತಿಳಿಸುತ್ತಿದದ್ದಾರೆ. ಕೆಲವರು ಈ ಚಿತ್ರಕ್ಕೆ ನೆಗೆಟಿವ್ ವಿಮರ್ಶೆ ಕೊಟ್ಟಿದ್ದೂ ಇದೆ. ಇವುಗಳ ಮಧ್ಯೆ ಸಿನಿಮಾ ಗೆದ್ದು ಬೀಗಿದೆ. ಈ ಚಿತ್ರಕ್ಕೆ ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಗಳಿಕೆ ಆಗಿದೆ.

ಕನ್ನಡದ ಚಿತ್ರ ಒಂದು ಮೂರು ದಿನಕ್ಕೆ ಸುಮಾರು 20 ಕೋಟಿ ರೂಪಾಯಿ ಬಾಚಿಕೊಳ್ಳುತ್ತದೆ ಎಂದರೆ ಅದು ನಿಜಕ್ಕೂ ಗ್ರೇಟ್. ಈ ವಾರ ‘ಮ್ಯಾಕ್ಸ್’ ಚಿತ್ರ ಬಿಡುಗಡೆ ಕಾಣುತ್ತಿದೆ. ಡಿಸೆಂಬರ್ 25ರಂದು ಸಿನಿಮಾ ತೆರೆಗೆ ಬರುತ್ತಿದೆ. ಅದಕ್ಕೂ ಮೊದಲೇ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಿಕೊಂಡಿದೆ. ಮುಂದಿನ ದಿನಗಳಲ್ಲಿ ‘ಮ್ಯಾಕ್ಸ್’ ಜೊತೆ ಥಿಯೇಟರ್​ಗಳನ್ನು ಹಂಚಿಕೊಳ್ಳಬೇಕಾದ ಪರಿಸ್ಥಿತಿ ‘ಯುಐ’ ಚಿತ್ರಕ್ಕೆ ಬರಲಿದೆ. ‘ಬುಕ್ ಮೈ ಶೋ’ನಲ್ಲೂ ‘ಯುಐ’ ಚಿತ್ರಕ್ಕೆ ಭರ್ಜರಿ ರೇಟಿಂಗ್ ಇದೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments