Wednesday, January 28, 2026
23.8 C
Bengaluru
Google search engine
LIVE
ಮನೆ#Exclusive NewsTop NewsUber Fare Not fair: 40 ಕಿಲೋಮೀಟರ್​ಗೆ 2 ಸಾವಿರನಾ? ಪ್ರಯಾಣಿಕ ಶಾಕ್

Uber Fare Not fair: 40 ಕಿಲೋಮೀಟರ್​ಗೆ 2 ಸಾವಿರನಾ? ಪ್ರಯಾಣಿಕ ಶಾಕ್

ಉಬೇರ್ ಫೇರ್ ನಾಟ್ ಫೇರ್(Uber Fare Not fair) ಹೀಗೋಂದು ಮಾತು ಕೇಳಿಬರುತ್ತಿದೆ. ರಾಜೇಶ್ ಭಟ್ಟಡ್ (Rajesh Bhattad) ಎಂಬ ವ್ಯಕ್ತಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(Bengaluru Airport)ದಿಂದ ಹೆಚ್​ಎಸ್ಆರ್ ಲೇಔಟ್(HSR Layout)​ಗೆ ತೆರಳಲು ಬಯಸಿದ್ದರು.. ಈ ಸಮಯದಲ್ಲಿ ಉಬೇರ್ (Uber)ಆಪ್ ಓಪನ್ ಮಾಡಿ ಪ್ರಯತ್ನಿಸಿದ್ರೆ ಅದು 2000 ರೂಪಾಯಿ ದರ ತೋರಿಸಿದೆ. ಇದನ್ನು ನೋಡಿದ ಆ ವ್ಯಕ್ತಿ ಶಾಕ್ ಆಗಿದ್ದಾರೆ. ಅಲ್ಲದೇ ತಮಗೆ ಆದ ಅನುಭವವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

40 ಕಿಲೋಮೀಟರ್ ದೂರಕ್ಕೆ ಎರಡೆರಡು ಸಾವಿರ ಕೊಟ್ಟು ಪಯಣ ಮಾಡಿದರೆ ಉದ್ಧಾರ ಆದಂತೆಯೇ ಎಂದು ಭಾವಿಸಿದ ರಾಜೇಶ್ ಭಟ್ಟಡ್​ ಕೊನೆಗೆ ಕೇವಲ 265 ರೂಪಾಯಿ ವೆಚ್ಚದಲ್ಲಿ ಹೆಚ್​ಎಸ್​ಆರ್ ಲೇಔಟ್ ಸೇರಿದ್ದಾರೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ತಮ್ಮ ಗಮ್ಯ ಸೇರಲು ಕಾರಣವಾದ ಬಿಎಂಟಿಸಿಗೆ ಧನ್ಯವಾದ ಹೇಳಿದ್ದಾರೆ.

https://twitter.com/theRevOpsGuy/status/1762898214103969947

40 ಕಿಲೋಮೀಟರ್ ದೂರಕ್ಕೆ 2000 ಬಿಲ್ ನೋಡಿ ತುಂಬಾ ಮಂದಿ ಆಶ್ಚರ್ಯಚಕಿತರಾಗಿದ್ದಾರೆ. ಈ ಬಗ್ಗೆ ಹಲವು ನೆಟ್ಟಿಗರು ಸ್ಪಂದಿಸಿದ್ದಾರೆ.. ಕೆಲವರು ಇದು ಹಗಲು ದರೋಡೆ.. ದಾರುಣ ಅಂದ್ರೆ, ಇನ್ನೂ ಕೆಲವರು ಅದು ಏರ್​ಪೋರ್ಟ್ ಅಲ್ವಾ? ಅದಕ್ಕೆ ಅಲ್ಲಿ ಬಾಡಿಗೆ ಜಾಸ್ತಿ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ. ನೀವು ಕ್ಯಾಬಲ್ಲಿ ಹೋಗ್ಬೇಡಿ.. ಬಸ್ಸಲ್ಲೇ ಹೋಗಿ ಎಂದು ಇನ್ನೂ ಕೆಲವರು ಕಾಮೆಂಟಿಸಿದ್ದಾರೆ.

ಈ ಮಧ್ಯೆ ರಾಜೇಶ್ ಭಟ್ಟಡ್ ಉಬೇರ್ ಇಂಡಿಯಾದ ವಿರುದ್ಧ ಸಮರ ಮುಂದುವರೆಸಿದ್ದಾರೆ. ಸರಣಿ ಟ್ವೀಟ್ ಮೂಲಕ ಉಬೇರ್ ಇಂಡಿಯಾಗೆ ಮುಜುಗರ ಉಂಟು ಮಾಡ್ತಿದ್ದಾರೆ.

 

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments