ರಾಜ್ಯಸುದ್ದಿ

ಈಜಲು ಹೋಗಿದ್ದ ಇಬ್ಬರು ಯುವಕರು ಮೃತ

ಬೀದರ್: ತೋಟದ ಭಾವಿಯಲ್ಲಿ ಗೆಳೆಯರೊಟ್ಟಿಗೆ ಈಜಲು ಹೋದ ಯುವಕರಿಬ್ಬರು ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಚಿಟಗುಪ್ಪ ತಾಲೂಕಿನ ವಿಠಲಪುರ ಗ್ರಾಮದಲ್ಲಿ ಶನಿವಾರ ನಡೆದಿದೆ.

ವಿಠಲಪುರ ಗ್ರಾಮದ ಪ್ರಶಾಂತ (22) ಹಾಗು ಬಸವಕಲ್ಯಾಣ ತಾಲೂಕಿನ ದಾಸರವಾಡಿ ಗ್ರಾಮದ ಶಿವಾಜಿ(22) ಎಂಬ ಯುವಕರು ಮೃತಪಟ್ಟಿದ್ದಾರೆ.

ನಾಲ್ವರು ಗೆಳೆಯರು ಜೊತೆಗೂಡಿ ತೋಟಕ್ಕೆ ತೆರಳಿದಾಗ ಒಬ್ಬ ಇಜಾಡಲು ನೀರಿಗೆ ಇಳಿಯುವಾಗ ಕಾಲು ಜಾರಿ ಬಿದ್ದಿದ್ದ, ಅವನನ್ನು ಉಳಿಸಲು ಮತ್ತೊಬ್ಬ ಸ್ನೇಹಿತ ನೀರುಗಳಿದಾಗ ಇಬ್ಬರೂ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಸದ್ಯ ಈ ಕುರಿತು ಭಮಳಖೇಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments (0)

Your email address will not be published. Required fields are marked *

Back to top button