ಕಮರ್ಷಿಯಲ್ ಕಟ್ಟಡಕ್ಕೆ ತೆರಿಗೆ ಮೊತ್ತದಲ್ಲಿ ಕಡಿತ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬಿಬಿಎಂಪಿ ಅಧಕಾರಿಗಳು.ರಾಜೇಂದ್ರ ಪ್ರಸಾದ್, ARO BBMP ಯಶವಂತ ಪುರ,ಪ್ರಕಾಶ್, ತೆರಿಗೆ ಮೌಲ್ಯ ಮಾಪಕರು. 4.5 ಲಕ್ಷ ಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಅಧಿಕಾರಿಗಳು.ಹಣ ಸ್ವೀಕರಿಸುವಾಗ ರೇಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಇಬ್ಬರು ಭ್ರಷ್ಠ ಅಧಿಕಾರಿಗಳು.ಹಣವನ್ನು ವಶಕ್ಕೆ ಪಡೆದು ಇಬ್ಬರನ್ನ ಬಂಧಿಸಿದ ಲೋಕಾಯುಕ್ತ ಅಧಿಕಾರಿಗಳು.ಬೆಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಭಷ್ಟ್ರಚಾರ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು.ಲೋಕಾಯುಕ್ತ ತನಿಖೆ ವೇಳೆ ಅಧಿಕಾರಿಗಳ ಕಳ್ಳಾಟ ಬಯಲು ಮಾಡಲಾಗಿದೆ.ತೆರಿಗೆ ಬಾಕಿ ಇಲ್ಲದಿದ್ರು ಹೆಚ್ಚು ತೆರಿಗೆ ಬಾಕಿ ಇದೆ ಎಂದು ಕಟ್ಟಡ ಮಾಲೀಕರಿಗೆ ನೋಟಿಸ್ ನೀಡುತ್ತಿದ್ದ ಇಬ್ಬರ ಅಧಿಕಾರಿಗಳು.ನಿಮ್ಮ ತೆರಿಗೆ 70 ಲಕ್ಷಕ್ಕೂ ಅಧಿಕ ಬಾಕಿ ಇದೆ ಎಂಟು ಲಕ್ಷ್ಮಿ ಚೆಕ್ ನಲ್ಲಿ ಪಾವತಿ ಮಾಡಿ ಬಾಕಿ ಕ್ಯಾಶ್ ರೂಪದಲ್ಲಿ ನಮಗೆ ಲಂಚ ಕೊಡಿ ಎಂದು ಹೇಳುತ್ತಿದ್ದ ಅಧಿಕಾರಿಗಳು.ಇದೇ ರೀತಿ ಅನೇಕ ತೆರಿಗೆ ಪಾವತಿದಾರರಿಗೆ ವಂಚನೆ ಮಾಡಿರುವ ಬಿಬಿಎಂಪಿ ಅಧಿಕಾರಿಗಳು.ಬಿಬಿಎಂಪಿ ವಾರ್ಡ್ ಕಚೇರಿಗೆ ಕರೆದು ಡಿಮ್ಯಾಂಡ್ ಮಾಡುತ್ತಿದ್ದ ಈ ಇಬ್ಬರು ಭ್ರಷ್ಠ ಅಧಿಕಾರಿಗಳು.ಬಿಬಿಎಂಪಿ ಅಧಿಕಾರಿಗಳ ಲಂಚದಾಟದ ಬಗ್ಗೆ ಲೋಕಾಯುಕ್ತ ಗೆ ದೂರು.ಇಂತಹ ವ್ಯವಸ್ಥಿತ ಜಾಲದ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಲೋಕಾಯುಕ್ತ ಅಧಿಕಾರಿಗಳು ಮನವಿ .ಸಾರ್ವಜನಿಕರಿಗೆ ಮನವಿ ಮಾಡುತ್ತಿರುವ ಲೋಕಾಯುಕ್ತ ಅಧಿಕಾರಿಗಳು.