Cricket : ರವೀಂದ್ರ ಜಡೇಜಾ ಬಾಳಲ್ಲಿ ಇದೆಂಥಾ ಬಿರುಗಾಳಿ ಅಂತ ಕ್ರಿಕೆಟ್ ಮಾಂತ್ರಿಕನ ಅಭಿಮಾನಿಗಳು ಭಾವುಕರಾಗಿದ್ದಾರೆ. ಒಂದು ಕಡೆ ವಿರಾಟ್ ಕೊಹ್ಲಿ ಪರ್ಸ್ನಲ್ ಲೈಫಲ್ಲಿ ಏನಾಗ್ತಿದೆ ಕೊಹ್ಲಿ ಕ್ರಿಕೆಟ್ ನಿಂದ ದೂರ ಉಳಿಯುತ್ತಿರೋದ್ಯಾಕೆ ಅನ್ನೋ ಚರ್ಚೆಯ ಹೊತ್ತಲ್ಲೇ ರವೀಂದ್ರ ಜಡೇಜಾ ಕುಟುಂಬ ಕಲಹ ಬೀದಿಗೆ ಬಿದ್ದಿದೆ,ಹೆಂಡತಿ ಮಾತನ್ನ ಕೇಳಿ ತಂದೆಯನ್ನೇ ದೂರ ಇಟ್ರಾ ಜಡೇಜಾ? ಯಸ್ ಈ ಪ್ರಶ್ನೆ ಇದೀಗ ಸಂಚಲನ ಮೂಡಿಸಿದೆ ,ಅಷ್ಟಕ್ಕೂ ಏನಾಗಿದೆ ಜಡೇಜಾ ಕುಟುಂಬದಲ್ಲಿ? ಅದನ್ನ ತಿಳಿಯುವ ಮೊದಲು ಜಡೇಜಾರ ಕ್ರಿಕೆಟ್ ಜಗತ್ತಿನ ಬಗ್ಗೆ ಹೇಳಿ ಬಿಡ್ತೀನಿ ಕೇಳಿ.
ಕ್ರಿಕೆಟ್ ಮಾಂತ್ರಿಕ ಜಡೇಜಾ,,!
ಸದ್ಯ ವಿಶ್ವಕ್ರಿಕೆಟ್‌ನ ಒನ್ ಆಫ್ ದಿ ಬೆಸ್ಟ್ ಆಲ್ರೌಂಡರ್. ಮಾತ್ರವಲ್ಲ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಅಬ್ಬರಿಸೋ ಆಟಗಾರ . ತನ್ನ ತಂಡದ ಉಳಿದವರ ಆಸಕ್ತಿಯನ್ನ ಹೆಚ್ಚಿಸೋ ಛಲದಂಕ ಮಲ್ಲ ತಂಡದ ಗೆಲುವಿಗಾಗಿ ಕೊನೆಯವರೆಗೂ ಹೋರಾಡೋ ಫೈಟರ್.ಕ್ಷಣಾರ್ಧದಲ್ಲಿ ಓವರ್ ಕಂಪ್ಲೀಟ್ ಮಾಡೋ ಕ್ವಿಕ್ ಸ್ಪಿನ್ನರ್. ಹಲವು ಪಂದ್ಯಗಳಲ್ಲಿ ಭಾರತಕ್ಕೆ ಗೆಲುವು ತಂದುಕೊಟ್ಟ ಮ್ಯಾಚ್ ವಿನ್ನರ್. ಇಂತಹ ಅದ್ಭುತ ಆಟಗಾರ ಅಂತಾ ರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟು ಇಂದಿಗೆ 15 ವರ್ಷಗಳಾಗಿವೆ.
ಇಂತಹ ಪ್ರತಿಭಾವಂತ ಆಟಗಾರನ ಬಾಳಲ್ಲಿ ಈಗ ಬೆಂಕಿ ಬಿರುಗಾಳಿ ಎದ್ದಿದೆ,ಯೆಸ್ ಜಡೇಜಾ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟು 15 ವರ್ಷಗಳಾಗಿವೆ. ಆದ್ರೆ, ಈ ಸಂಭ್ರಮದಲ್ಲಿರೋವಾಗ್ಲೇ, ಜಡೇಜಾನ ವೈಯುಕ್ತಿಗ ಬದುಕು ಬೀದಿ ರಂಪಾಟವಾಗಿದೆ ಪರ್ಸ್ನಲ್ ಲೈಫು ಧಗ ಧಗ ಹೊತ್ತಿ ಉರಿಯುತ್ತಿದೆ , ಜಡೇಜಾರ ತಂದೆ ಅನಿರುದ್ಧ್ ಸಿಂಗ್, ಮಗ ಜಡೇಜಾರ ವಿರುದ್ಧ ತಿರುಗಿ ಬಿದ್ದಿದ್ದಾರೆ ಜಡೇಜಾರ ಪತ್ನಿ ರಿವಾಬಾ ವಿರುದ್ಧವು ಸಿಡಿದೆದಿದ್ದಾರೆ, ಸೊಸೆಯಿಂದ ನಮ್ಮ ಬದುಕು ಹಾಳಾಗಿದೆ ಎಂದು ಅಬ್ಬರಿಸುತ್ತಿದ್ದಾರೆ.
ಜಡೇಜಾ ತಂದೆಯ ಆರೋಪವೇನು?
ನಮ್ಮೊಂದಿಗೆ ಚನ್ನಾಗಿಯೇ ಇದ್ದ ಜಡೇಜಾಗೆ ಹೆಂಡತಿಯೇ ಮುಖ್ಯವಾಗಿದ್ದಾಳೆ ,ಮದುವೆಯ ಬಳಿಕ ಜಡೇಜಾ ಬದಲಾಗಿದ್ದಾನೆ ,ಹೆಂಡತಿಗೆ ಬಂಗಲೆ ಮಾಡಿಕೊಟ್ಟು ಅವಳೊಟ್ಟಿಗೆ ಸುಖವಾಗಿ ಇದ್ದಾನೆ, ಸದ್ಯ ನಮಗೂ ಮತ್ತು ಜಡೇಜಾಗೂ ಯಾವುದೇ ಮಾತುಕತೆ ಇಲ್ಲ. ನಾವು ಅವರಿಗೆ ಫೋನ್ ಮಾಡಲ್ಲ. ಅವ್ರು ನಮಗೆ ಪೋನ್ ಮಾಡಲ್ಲ. ಜಡೇಜಾ ಪತ್ನಿ ಜೊತೆ ಜಾಮ್‌ನಗರದಲ್ಲಿರೋ ಬಂಗಲೆಯಲ್ಲಿ ವಾಸವಿದ್ದಾರೆ. ನಾವು ಬೇರೆ ಕಡೆ ಇದ್ದೇವೆ. ಜಡೇಜಾ ಮದುವೆಯಾದ ಎರಡ್ಮೂರು ತಿಂಗಳಿಗೇನೆ ನಮ್ಮ ಕುಟುಂಬದಲ್ಲಿ ಬಿರುಕು ಮೂಡಿತ್ತು. ರಿವಾಬಾ ಎಲ್ಲಾ ಆಸ್ತಿಯನ್ನ ತನ್ನ ಹೆಸರಿಗೆ ಮಾಡಬೇಕು ಅಂತ ಜಡೇಜಾಗೆ ಹೇಳಿದ್ಳು. ರಿವಾಬಾ, ಜಡೇಜಾಗೆ ಅದೇನು ಮ್ಯಾಜಿಕ್ ಮಾಡಿದ್ದಾಳೋ ಗೊತ್ತಿಲ್ಲ. ಜಡೇಜಾ ಕ್ರಿಕೆಟರ್ ಆಗದೇ ಇದ್ರೆ ಚೆನ್ನಾಗಿರ್ತಿತ್ತು, ನಮಗೆ ಈ ಪರಿಸ್ಥಿತಿ ಬರ್ತಿರಲಿಲ್ಲ ಅಂತ ಅನಿರುದ್ಧ್ ಸಿಂಗ್ ಅಂದ್ರೆ ಜಡೇಜಾರ ತಂದೆ ಗದ್ಗಧಿತರಾಗಿ ಜಡೇಜಾ ವಿರುದ್ಧ ಗುಡುಗಿದ್ದಾರೆ .
ಜಡೇಜಾ ಪ್ರತಿಕ್ರಿಯೆ ಏನು?
ನನ್ನ ತಂದೆಯ ಆರೋಪ ಶುದ್ಧ ಸುಳ್ಳು ಅವರ ಇಂಟರ್‌ವ್ಯೂವ್ ಕೂಡ ಸ್ಕ್ರಿಪ್ಟೆಡ್ ಅಂತ ಟ್ವಿಟರ್ನಲ್ಲಿ ಪೋಸ್ಟ್ ಮಾಡಿರೋ ಜಡೇಜಾ, ಇಂಟರ್ವ್ಯೂವ್ನಲ್ಲಿ ಹೇಳಿರೋದೆಲ್ಲಾ ಶುದ್ಧ ನಕಲಿ , ಆ ಮಾತುಗಳಿಗೆ ಯಾವುದೇ ಅರ್ಥ ಇಲ್ಲ. ನನ್ನ ಪತ್ನಿಯ ಘನತೆಯನ್ನ ಹಾಳು ಮಾಡೋ ಹುನ್ನಾರ ಇದರ ಹಿಂದೆ ಅಡಗಿದೆ. ಇದು ಒಳ್ಳಯೆದಲ್ಲ, ನಾನು ಅದನ್ನ ತೀವ್ರವಾಗಿ ಖಂಡಿಸುತ್ತೇನೆ. ನಾನು ಹಲವು ವಿಷಯಗಳನ್ನ ಹೇಳಬಹುದು. ಆದ್ರೆ, ಹೇಳದೇ ಇದ್ರೇನೆ ಒಳ್ಳೆಯದು ಅಂತ ಸುಮ್ಮನಿದ್ದೇನೆ ಅಂತ ಜಡೇಜಾ ಟ್ವೀಟ್ ಮಾಡಿದ್ದಾರೆ. ಒಟ್ಟಾರೆ ಕ್ರಿಕೆಟ್ ಮಾಂತ್ರಿಕನ ಬಾಳಲ್ಲಿ ಮಾತ್ರ ಬೆಂಕಿ ಬಿರುಗಾಳಿ ಎದ್ದಿದೆ ,ಜಡೇಜಾ ಅಭಿಮಾನಿಗಳು ಮಾತ್ರ ಜಡೇಜಾರ ನೆಮ್ಮದಿಗಾಗಿ ಪ್ರಾರ್ಥಿಸುತ್ತಿರುವುದು ಸುಳ್ಳಲ್ಲ.