Top Newsರಾಜ್ಯಸುದ್ದಿ

SITಯಿಂದ ಸತ್ಯ ಹೊರಬರುತ್ತಿದೆ ಸರ್ಕಾರಕ್ಕೆ ಕೃತಜ್ಞತೆ- ವೀರೇಂದ್ರ ಹೆಗ್ಗಡೆ

ಮಂಗಳೂರು: ನನ್ನ ವಿರುದ್ಧ ಯಾಕಿಷ್ಟು ಹಗೆತನ? ಯಾಕಿಷ್ಟು ದಬ್ಬಾಳಿಕೆ? ಅನ್ನೋದು ಗೊತ್ತಿಲ್ಲ, ನಾವು ಸತ್ಯದಿಂದ ಇದ್ದೇವೆ, ಮುಂದೇಯೂ ಹಾಗೇ ಇರ್ತೀವಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಹೇಳಿದ್ದಾರೆ.. ಧರ್ಮಸ್ಥಳ ಬುರುಡೆ ಪ್ರಕರಣದ ಬಗ್ಗೆ ಮಾತನಾಡಿದ ಅವರು, SITಯಿಂದ ಸತ್ಯ ಹೊರಬರುತ್ತಿದೆ ಸರ್ಕಾರಕ್ಕೆ ಕೃತಜ್ಞತೆ ಎಂದು ಹೇಳಿದ್ದಾರೆ.

SIT ವರದಿಯ ಅರ್ಧ ಭಾಗ ಬಂದ ಕಾರಣ ಧೈರ್ಯವಾಗಿ ಮಾತಾಡುತ್ತಿದ್ದೇನೆ. ನಮ್ಮ ಹೊಳಪು ಹಾಗೆ ಉಳಿದಿದೆ ಎಂದು ಧರ್ಮಸ್ಥಳದ ಧಾರ್ಮಿಕ ಮತ್ತು ಸಾಮಾಜಿಕ ಕೊಡುಗೆಯನ್ನು ಸ್ಮರಿಸಿದರು. ಶ್ರೀ ಮಂಜುನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿ ಎಲ್ಲವನ್ನೂ ನೋಡಿಕೊಳ್ತಾರೆ ಎಂದು ದೈವ ನಂಬಿಕೆಯನ್ನು ವ್ಯಕ್ತಪಡಿಸಿದರು. ಸತ್ಯದಿಂದ ಇದ್ದೇವೆ, ಮುಂದೆಯೂ ಇರ್ತೀವಿ ಎಂದು ಪುನಃ ಹೇಳಿದ ಅವರು, ಧರ್ಮಸ್ಥಳ ಕ್ಷೇತ್ರ ಬೇರೆಯಲ್ಲ, ಧರ್ಮಸ್ಥ ಊರಿನವರು ಬೇರೆಯಲ್ಲ ಎಂದು ಸ್ಪಷ್ಟಪಡಿಸಿದರು. ನಾವು ಯಾರನ್ನೂ ದ್ವೇಷಿಸಿಲ್ಲ, ಯಾರನ್ನೂ ಹೀಯಾಳಿಸಿಲ್ಲ ಎಂದು ಹೇಳಿ, ಈ ಶತ್ರುತ್ವ, ದ್ವೇಷ ಯಾಕೆಂದು ನನಗೂ ಗೊತ್ತಾಗಬೇಕು ಎಂದು ನೋವಿನಿಂದ ಹೆಗ್ಗಡೆ ಅವರು ಕೇಳಿದರು.

Comments (0)

Your email address will not be published. Required fields are marked *

Back to top button