Top Newsದೇಶ/ವಿದೇಶ

ಕಾಶ್ಮೀರ ವಿವಾದದಲ್ಲಿ ಮೂಗು ತೂರಿಸಲು ಅಮೆರಿಕಾ ಯತ್ನ

ಭಾರತ-ಪಾಕಿಸ್ತಾನ ನಡುವೆ ಕದನ ವಿರಾಮ ಒಪ್ಪಂದ ಜಾರಿ ಆಗುತ್ತಲೇ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಂದು ಟ್ವೀಟ್ ಮಾಡಿದ್ದಾರೆ.ಅಮೆರಿಕದ ಮಧ್ಯಸ್ಥಿಕೆ ವಹಿಸಿದ ನಂತರ ಭಾರತ ಮತ್ತು ಪಾಕಿಸ್ತಾನ ಪೂರ್ಣ ಮತ್ತು ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದಿದ್ದ ಟ್ರಂಪ್ ಇದೀಗ ಎರಡೂ ದೇಶಗಳನ್ನು ಶ್ಲಾಘಿಸಿದ್ದಾರೆ. ಉಭಯ ದೇಶಗಳೊಂದಿಗೆ ಹೆಚ್ಚಿನ ವ್ಯಾಪಾರದಲ್ಲಿ ತೊಡಗಿಸಿಕೊಳ್ಳುವುದಾಗಿ ಮತ್ತು ಕಾಶ್ಮೀರ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಅವರೊಂದಿಗೆ ಕೆಲಸ ಮಾಡುವುದಾಗಿ ಟ್ರಂಪ್ ಹೇಳಿದ್ದಾರೆ.

ಎರಡು ದೇಶಗಳ ನಡುವೆ ಇರುವ ಕಾಶ್ಮೀರದ ಸಮಸ್ಯೆಗೆ ಪರಿಹಾರ ಕಂಡಕೊಳ್ಳಬೇಕು. ಉಭಯ ದೇಶಗಳೊಂದಿಗೆ ನಾನು ಖುದ್ದು ಚರ್ಚೆ ನಡೆಸುತ್ತೇನೆ ಎಂದು ಟ್ರಂಪ್‌ ಹೇಳಿದ್ದಾರೆ. ಆದರೆ ಪಾಕಿಸ್ತಾನ ಕದನ ವಿರಾಮ ಮಾಡಿದ ಕುರಿತು ಎಲ್ಲಿಯೂ ಉಲ್ಲೇಖ ಮಾಡಿಲ್ಲ. ಟ್ರಂಪ್ ಟ್ವೀಟ್ ನಾನಾ ಚರ್ಚೆಗಳಿಗೆ ಗ್ರಾಸವಾಗಿದೆ.

ಕಾಶ್ಮೀರ ವಿವಾದ ಸಂಬಂಧ ಈವರೆಗೂ ಯಾವುದೇ ದೇಶ ಮಧ್ಯಸ್ಥಿಕೆ ವಹಿಸಿಕೊಳ್ಳಲು ಭಾರತ ಅವಕಾಶ ಮಾಡಿಕೊಟ್ಟಿಲ್ಲ. ಈ ಸಂಬಂಧ ಪಾಕಿಸ್ತಾನ ದಶಕಗಳಿಂದ ಮಾಡ್ತಿರುವ ಎಲ್ಲಾ ಪ್ರಯತ್ನಗಳಿಗೆ ಭಾರತ ತಣ್ಣೀರು ಎರಚುತ್ತಲೇ ಬಂದಿತ್ತು. ಆದರೆ, ಇದೀಗ ಟ್ರಂಪ್ ಕಾಶ್ಮೀರ ವಿವಾದ ಬಗೆಹರಿಸುವ ಮಾತಾಡುತ್ತಿದೆ. ಹೀಗಾಗಿ ಈ ವಿಚಾರದಲ್ಲಿ ಮೋದಿ ಸರ್ಕಾ್ರ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದು ಕುತೂಹಲ ಕೆರಳಿಸಿದೆ.

ಟ್ರಂಪ್ ಮಧ್ಯಸ್ಥಿಕೆ ಮಾತಿಗೆ ವಿಪಕ್ಷಗಳ ಆಕ್ರೋಶ

ಟ್ರಂಪ್ ಮಧ್ಯಸ್ಥಿಕೆ ಮಾತಿಗೆ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ಯಾವುದೇ ಕಾರಣಕ್ಕೂ ಕಾಶ್ಮೀರ ವಿಚಾರದಲ್ಲಿ ಯಾವುದೇ ದೇಶದ ಮಧ್ಯಸ್ಥಿಕೆಗೆ ಕೇಂದ್ರ ಸರ್ಕಾರ ಒಪ್ಪಬಾರದು ಎಂದು ಸಂಸದೆ ಪ್ರಿಯಾಂಕಾ ಚತುರ್ವೇದಿ ಒತ್ತಾಯ ಮಾಡಿದ್ದಾರೆ.

Comments (0)

Your email address will not be published. Required fields are marked *

Back to top button