Thursday, August 21, 2025
23 C
Bengaluru
Google search engine
LIVE
ಮನೆ#Exclusive NewsTop Newsಜನ್ಮಸಿದ್ಧ ಪೌರತ್ವಕ್ಕೆ ಅಂತ್ಯ ಹಾಡಿದ ಟ್ರಂಪ್: ಆತಂಕದಲ್ಲಿ ಲಕ್ಷಾಂತರ ಭಾರತೀಯರು

ಜನ್ಮಸಿದ್ಧ ಪೌರತ್ವಕ್ಕೆ ಅಂತ್ಯ ಹಾಡಿದ ಟ್ರಂಪ್: ಆತಂಕದಲ್ಲಿ ಲಕ್ಷಾಂತರ ಭಾರತೀಯರು

ಅಮೆರಿಕದ 47ನೇ ಅಧ್ಯಕ್ಷರಾಗಿ ಸೋಮವಾರ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಅವರು ಸಹಿ ಹಾಕಿರುವ ಹಲವು ಮಹತ್ವದ ಕಾರ್ಯಕಾರಿ ಆದೇಶಗಳಲ್ಲಿ ‘ಜನ್ಮಸಿದ್ಧ ಪೌರತ್ವ’ ಹಕ್ಕು ಕೊನೆಗೊಳಿಸುವ ಆದೇಶವೂ ಒಂದು.

ಟ್ರಂಪ್ ಈ ಆದೇಶಕ್ಕೆ ಸಹಿ ಹಾಕುತ್ತಿದ್ದಂತೆ ಅಮೆರಿಕದಲ್ಲಿ ಹೆಚ್‌ 1ಬಿ ವೀಸಾದಡಿ ಉದ್ಯೋಗ ಮಾಡುತ್ತಿರುವ ಭಾರತೀಯರು ಸೇರಿದಂತೆ ಲಕ್ಷಾಂತರ ವಿದೇಶಿಗರು ಆತಂಕಕ್ಕೆ ಒಳಗಾಗಿದ್ದಾರೆ.

ಈ ಹಿಂದೆ ಹೆಚ್‌ 1ಬಿ ಉದ್ಯೋಗ ವೀಸಾದಲ್ಲಿ ಅಮೆರಿಕಕ್ಕೆ ತೆರಳಿದ ವಿದೇಶಿಗರಿಗೆ ಅಲ್ಲಿಯೇ ಮಗು ಜನಿಸಿದರೆ, ಆ ಮಗು ‘ಜನ್ಮಸಿದ್ಧ ಪೌರತ್ವ’ ಪಡೆಯುತ್ತಿತ್ತು. ಆದರೆ, ಟ್ರಂಪ್ ಆದೇಶದಿಂದ ಮಗು ಪೌರತ್ವ ಪಡೆಯಬೇಕಾದರೆ ತಂದೆ ಅಥವಾ ತಾಯಿಯಲ್ಲಿ ಒಬ್ಬರಾದರೂ ಅಮೆರಿಕದ ಪ್ರಜೆಯಾಗಿರುವುದು ಅಥವಾ ಗ್ರೀನ್ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿದೆ. ಇನ್ನುಮುಂದೆ ಅಮೆರಿಕದಲ್ಲಿ ಹುಟ್ಟಿದ ಕಾರಣಕ್ಕೆ ವಿದೇಶಿಗರ ಮಕ್ಕಳಿಗೆ ಪೌರತ್ವ ಸಿಗುವುದಿಲ್ಲ.

ಟ್ರಂಪ್ ಆದೇಶದಿಂದ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ತಮ್ಮ ಕುಟುಂಬವನ್ನು ಅಲ್ಲಿಗೆ ಸ್ಥಳಾಂತರಿಸಲು ಪ್ರಯತ್ನಿಸುತ್ತಿದ್ದವರಿಗೆ ಮತ್ತು ಮಕ್ಕಳು ಅಮೆರಿಕದಲ್ಲಿ ಹುಟ್ಟಿದ ಕಾರಣಕ್ಕೆ ಪೌರತ್ವ ಪಡೆಯುತ್ತಿದ್ದವರಿಗೆ ಹಿನ್ನಡೆಯಾಗಿದೆ.

ಜನ್ಮಹಕ್ಕು ಪೌರತ್ವದ ಪ್ರಕಾರ, ಪೋಷಕರು ಅಥವಾ ವಲಸೆ ಸ್ಥಿತಿಯನ್ನು ಲೆಕ್ಕಿಸದೆ ಅಮೆರಿಕದ ನೆಲದಲ್ಲಿ ಜನಿಸಿದ ತಕ್ಷಣ ಸ್ವಯಂಚಾಲಿತವಾಗಿ ಯುಎಸ್ ಪೌರತ್ವ ನೀಡುವುದಾಗಿ. ಈ ಕಾನೂನನ್ನು 1868ರಲ್ಲಿ ಜಾರಿಗೆ ತರಲಾಗಿತ್ತು. ಅಮೆರಿದಲ್ಲಿ ಜನಿಸಿದ ಎಲ್ಲಾ ವ್ಯಕ್ತಿಗಳಿಗೆ ಪೌರತ್ವ ನೀಡಲು ಈ ಕಾಯಿದೆ ಬಂದಿತ್ತು.

ಸೋಮವಾರ ಡೊನಾಲ್ಡ್ ಟ್ರಂಪ್ ಸಹಿ ಮಾಡಿದ ಆದೇಶದಿಂದ, ಯುಎಸ್‌ ನಾಗರಿಕ ಅಥವಾ ಕಾನೂನುಬದ್ಧ ಶಾಶ್ವತ ನಿವಾಸಿಯಾಗಿರುವ ಕನಿಷ್ಠ ಒಬ್ಬ ಪೋಷಕರಿಲ್ಲದೆ ಅಮೆರಿಕದಲ್ಲಿ ಜನಿಸಿದ ಮಕ್ಕಳು ಇನ್ನು ಮುಂದೆ ಸ್ವಯಂಚಾಲಿತ ಅಮೆರಿಕ ಪೌರತ್ವವನ್ನು ಪಡೆಯಲು ಸಾಧ್ಯವಿಲ್ಲ. ಫೆಡರಲ್ ಏಜೆನ್ಸಿಗಳು ಅಂತಹ ಮಕ್ಕಳಿಗೆ ಅಮೆರಿಕದ ಪೌರತ್ವವನ್ನು ಸಾಬೀತುಪಡಿಸುವ ಸಂಬಂಧಿತ ದಾಖಲೆಗಳನ್ನು ನೀಡುವುದನ್ನು ಅಥವಾ ಗುರುತಿಸುವುದನ್ನು ತಡೆಯುತ್ತದೆ. ಈ ಆದೇಶವು ಅನಧಿಕೃತ ವಲಸಿಗರಿಗೆ ಮತ್ತು ತಾತ್ಕಾಲಿಕ ವೀಸಾಗಳಲ್ಲಿ ಅಮೆರಿಕದಲ್ಲಿ ಕಾನೂನುಬದ್ಧವಾಗಿ ಇರುವ ಜನರಿಗೆ ಜನಿಸಿದ ಮಕ್ಕಳನ್ನು ಗುರಿಯಾಗಿರಿಸಿಕೊಂಡಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments