ಜಿಎಸ್‌ಟಿ ವಿಚಾರಕ್ಕೆ ಸಂಬಂದಪಟ್ಟಂತೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆಗಾಗ್ಗೆ ಟ್ರೋಲ್‌ಗೆ ಗುರಿಯಾಗುತ್ತಿರುತ್ತಾರೆ. ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚಿಗೆ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಪಾಪ್‌ಕಾರ್ನ್‌ಗೂ ಕೂಡಾ ಮೂರು ರೀತಿಯಲ್ಲಿ ತೆರಿಗೆ ವಿಧಿಸಲು ಶಿಫಾರಸ್ಸು ಮಾಡಲಾಗಿದ್ದು, ಈ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ವಿತ್ತ ಸಚಿವೆ ಮತ್ತೊಮ್ಮೆ ಯರ್ರಾಬಿರ್ರಿ ಟ್ರೋಲ್ ಆಗ್ತಿದ್ದಾರೆ. ಇನ್ಫುಯೆನ್ಸರ್ ಒಬ್ರು ಕೂಡಾ ಅಂಗಾಂಗ ದಾನಕ್ಕೂ ಜಿಎಸ್‌ಟಿ, ಕಿಡ್ನಿ ಫೈಲ್ಯೂರ್ ಬಳಿಕ ಕಿಡ್ನಿ ಕಸಿ ಮಾಡಿದ್ರೆ ಆ ಜೀವಿತಾವಧಿಯೂ ಜಿಎಸ್‌ಟಿ ಅಡಿಯಲ್ಲಿ ಬರುತ್ತೆ ಎಂದು ತಮಾಷೆಯಾಗಿ ಹೇಳುವ ಮೂಲಕ ನಿರ್ಮಲಾ ಸೀತಾರಾಮನ್ ಅವರನ್ನು ಸಖತ್ ಆಗಿ ಟ್ರೋಲ್ ಮಾಡಿದ್ದಾರೆ. ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ.
ಜಿಎಸ್‌ಟಿ ಹೆಚ್ಚಳದ ಕುರಿತು ಇನ್ಸ್ಟಾಗ್ರಾಮ್ನಲ್ಲಿ ಟ್ರೋಲ್…!
ಮುಂಬೈ ಮೂಲದ ಕಂಟೆಂಟ್ ಕ್ರಿಯೆಟರ್ ರಾಧ ಎಂಬವರು ನಿರ್ಮಲಾ ಸೀತಾರಾಮನ್ ಅವರನ್ನು ಹಾಗೂ ಭಾರತೀಯ ತೆರಿಗೆ ವ್ಯವಸ್ಥೆಯನ್ನು ವ್ಯಂಗ್ಯವಾಗಿ ಲೇವಡಿ ಮಾಡಿದ್ದಾರೆ. ಹೌದು ಆಕೆ ವಿತ್ತ ಸಚಿವೆಯಂತೆ ಮಾತನಾಡುತ್ತಾ “ಜಿಎಸ್‌ಟಿ ಕೌನ್ಸಿಲ್ ಅಂಗಾಂಗ ದಾನವನ್ನೂ ಜಿಎಸ್‌ಟಿ ವ್ಯಾಪ್ತಿಯಲ್ಲಿ ಸೇರಿಸಲು ನಿರ್ಧರಿಸಿದೆ. ಇನ್ನು ಮುಂದೆ ಯಾರಾದರೂ ಅಂಗಾಂಗ ದಾನ ಮಾಡಿದರೆ ಅಥವಾ ಸ್ವೀಕರಿಸಿದೆ ಆ ಶಸ್ತ್ರಚಿಕಿತ್ಸೆಗೆ 18% ಜಿಎಸ್‌ಟಿ ತೆರಿಗೆ ವಿಧಿಸಲಾಗುವುದು. ಒಂದು ವೇಳೆ ಮೂತ್ರಪಿಂಡದ ವೈಫಲ್ಯವಾಗಿ ಕಿಡ್ನಿ ಕಸಿ ಮಾಡಿಸಿಕೊಂಡರೆ ಆ ಜೀವಿತಾವಧಿ ವಿಸ್ತರಿಸಿದ ಲೆಕ್ಕದಲ್ಲಿ ನಿಮ್ಮ ಜೀವಿತಾವಧಿಯೂ ಜಿಎಸ್‌ಟಿ ಅಡಿಯಲ್ಲಿ ಬರುತ್ತದೆ. ಇನ್ನೂ ಕಾರ್ನಿಯಾ ದಾನ, ರಕ್ತದಾನಕ್ಕೂ ಜಿಎಸ್‌ಟಿ ಅನ್ವಯವಾಗಲಿದೆ” ಎಂದು ಹೇಳುತ್ತಾ ತೆರಿಗೆ ವಿಚಾರಕ್ಕೆ ಸಂಬಂಧಿಸಿದಂತೆ ವಿತ್ತ ಸಚಿವೆಯನ್ನು ಟ್ರೋಲ್ ಮಾಡಿದ್ದಾರೆ.
RELATED ARTICLES