ನಾಗ್ಪುರ: ನಾಗ್ಪುರದ ಲಕ್ಷ್ಮೀನಗರ ಪ್ರದೇಶದ ಬೀದಿಗಳಲ್ಲಿ ಬೆತ್ತಲೆಯಾಗಿ ಓಡೆದಾಡುತ್ತಿರುವ ದಂಪತಿಗಳ ವಿಡಿಯೋ ವೈರಲ್ ಆಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಜನನಿಬಿಡ ಪ್ರದೇಶವಾದ ಲಕ್ಷ್ಮೀನಗರ ಚೌಕದ ಬಳಿ ಈ ಘಟನೆ ನಡೆದಿದ್ದು, ಬೈಕ್​ನಲ್ಲಿ ಬಂದ ಸ್ಥಳೀಯ ಯುವಕರು ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.

ಶನಿವಾರ ರಾತ್ರಿ 2 ಗಂಟೆಯ ಸುಮಾರಿಗೆ ಚಿತ್ರೀಕರಿಸಲಾದ ಈ ವಿಡಿಯೋದಲ್ಲಿ ಯುವಕನೊಬ್ಬ ಸಂಪೂರ್ಣ ಬೆತ್ತಲೆಯಾಗಿ ಜಗಳವಾಡುತ್ತಿರುವುದನ್ನು ತೋರಿಸುತ್ತದೆ. ನಂತರ ಆ ವ್ಯಕ್ತಿ ಪಾದಚಾರಿ ಮಾರ್ಗದ ಬಳಿ ಇರುವ ಪಾಳುಬಿದ್ದ ಮನೆಯ ಕಡೆಗೆ ಹೋಗುತ್ತಾನೆ. ಅದೇ ವೇಳೆ ಇನ್ನೋರ್ವ ಯುವತಿ ಕೂಡ ನಗ್ನಳಾಗಿ ನಡೆಯುತ್ತಿರುವುದು ರೆಕಾರ್ಡ್ ಆಗಿದೆ. ಆ ಸಮಯದಲ್ಲಿ, ಬೀದಿಗಳಲ್ಲಿ ಹೆಚ್ಚಿನ ಜನಸಂಚಾರವಿರಲಿಲ್ಲ. ಇಬ್ಬರು ಬೈಕರ್​ಗಳು ಈ ದೃಶ್ಯವನ್ನು ರೆಕಾರ್ಡ್ ಮಾಡಿದ್ದಾರೆ.

ಈ ವಿಡಿಯೋ ತ್ವರಿತವಾಗಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ಈ ಘಟನೆಯು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ. ಈ ಪ್ರದೇಶದಲ್ಲಿ ಗಣ್ಯ ವ್ಯಕ್ತಿಗಳೇ ಹೆಚ್ಚಾಗಿ ವಾಸವಾಗಿದ್ದಾರೆ. ಈ ಜೋಡಿಯ ವರ್ತನೆಗೆ ಹಲವು ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಗ್ಪುರದಲ್ಲಿ ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಇದೇ ರೀತಿಯ ಘಟನೆಗಳು ಧರಂಪೆತ್‌ನಲ್ಲಿ ಸಂಭವಿಸಿವೆ. ನಂತರ ಸದರ್ ಮತ್ತು ಬಜಾಜ್ ನಗರದಲ್ಲಿ ಕೂಡ ಇದೇ ರೀತಿಯ ಘಟನೆ ನಡೆದಿದೆ. ಈ ಘಟನೆಯು ಗಂಭೀರ ಕಾಳಜಿ ಮತ್ತು ಚರ್ಚೆಯನ್ನು ಹುಟ್ಟುಹಾಕಿದೆ.

ಈ ದಂಪತಿಗಳ ನಡುವೆ ವಾಗ್ವಾದದ ನಂತರ, ಮೊದಲು ಆ ವ್ಯಕ್ತಿ ಕಾರಿನಿಂದ ಹೊರಬಂದು ರಸ್ತೆಯಲ್ಲಿ ಬೆತ್ತಲೆಯಾಗಿ ನಡೆಯಲು ಪ್ರಾರಂಭಿಸಿದನು. ನಂತರ ಯುವತಿ ಕೂಡ ಅವನ ಹಿಂದೆ ನಗ್ನ ಸ್ಥಿತಿಯಲ್ಲಿ ರಸ್ತೆಯಲ್ಲಿ ನಡೆಯುತ್ತಿರುವುದು ಕಂಡುಬಂದಿದೆ. ಅವಳು ಅವನಲ್ಲಿ ಕ್ಷಮೆಯಾಚಿಸಿ ಅವನನ್ನು ಕಾರಿನಲ್ಲಿ ಕುಳಿತುಕೊಳ್ಳಲು ಹೇಳುತ್ತಿದ್ದಳು. ಆದರೆ, ಆ ಯುವಕ ಕಾರಿನಲ್ಲಿ ಕುಳಿತುಕೊಳ್ಳಲು ಸಿದ್ಧನಿರಲಿಲ್ಲ. ಹೀಗಾಗಿ ಯುವತಿ ಪದೇ ಪದೇ ಆತನ ಹಿಂದೆ ಹೋಗಿ ನಗ್ನಳಾಗಿಯೇ ರಸ್ತೆಯಲ್ಲಿ ನಡೆಯುತ್ತಾ ಕಾರಿನೊಳಗೆ ಬಂದು ಕೂರಲು ಮನವಿ ಮಾಡಿದ್ದಾಳೆ. ಅವರಿಬ್ಬರೂ ಬೀದಿಯಲ್ಲಿಯೇ ನಗ್ನರಾಗಿ ಜಗಳವಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಜೋಡಿಯ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಅವರು ಮಾನಸಿಕವಾಗಿ ಅಸ್ವಸ್ಥರಾಗಿರುವಂತೆ ತೋರುತ್ತಿದ್ದರಿಂದ ಅವರ ವಿರುದ್ಧ ಕ್ರಮವನ್ನು ತೆಗೆದುಕೊಳ್ಳಲಿಲ್ಲ. “ನಾವು ಆ ದಂಪತಿ ಮತ್ತು ಅವರ ಕುಟುಂಬ ಸದಸ್ಯರನ್ನು ಕರೆಸಿದ್ದೇವೆ. ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಅಸಂಬದ್ಧ ನಡವಳಿಕೆ ತೋರದಂತೆ ಸೂಚಿಸಲಾಗಿದೆ.” ಎಂದಿರುವ ಪೊಲೀಸರು ದಂಪತಿಗೆ ಮಾನಸಿಕ ಆರೋಗ್ಯ ಸಮಸ್ಯೆಗಳಿರುವುದರಿಂದ ಕ್ರಮ ಕೈಗೊಳ್ಳಲಿಲ್ಲ ಎಂದು ಅವರು ವರದಿಯಲ್ಲಿ ತಿಳಿಸಿದ್ದಾರೆ.

By Veeresh

Leave a Reply

Your email address will not be published. Required fields are marked *

Verified by MonsterInsights