ದೆಹಲಿ: ಟೆಲಿಕಾಂ ನಿಯಂತ್ರಕ TRAI ಭಾರತದ ದೊಡ್ಡ ಸಮಸ್ಯೆಯಾಗಿರುವ ಸ್ಪ್ಯಾಮ್ ಕರೆಗಳು (Spam Calls) ಮತ್ತು ಸಂದೇಶಗಳನ್ನು (Messages) ನಿಗ್ರಹಿಸಲು ಹೊಸ ನಿಯಮಗಳನ್ನು (New Rules) ಜಾರಿಗೆ ತರಲಿದೆ. ಆದರೆ ಈ ಹೊಸ ನಿಯಮಗಳು ಹೊಸ ಸಮಸ್ಯೆಗಳನ್ನು ತರುವಂತಿವೆ. TRAI ನ ಹೊಸ ನಿಯಮಗಳು ಇಂದಿನಿಂದ ಅಂದರೆ ಅಕ್ಟೋಬರ್ 1, 2024 ರಿಂದ ಜಾರಿಗೆ ಬರಲಿದ್ದು ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು ಮತ್ತು ಇ-ಕಾಮರ್ಸ್ ಕಂಪನಿಗಳಿಂದ ಮೊಬೈಲ್ OTP ಗಳನ್ನು ಸ್ವೀಕರಿಸಲಾಗುವುದಿಲ್ಲ. ಇದರಿಂದ ಸಾಕಷ್ಟು ಕೆಲಸಗಳು ಸ್ಥಗಿತಗೊಳ್ಳಲಿವೆ ಎಂದು ಜನರು ಆತಂಕ ವ್ಯಕ್ತಪಡಿಸಿದ್ದಾರೆ.
ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಸೆಪ್ಟೆಂಬರ್‌ನಿಂದ ಹೊಸ ನಿಯಮಗಳನ್ನು ಜಾರಿಗೆ ತಂದಿತ್ತು. ಆದರೆ, ಕಂಪನಿಗಳು ಈ ಬದಲಾವಣೆಗೆ ಸಿದ್ಧರಾಗದ ಕಾರಣ, ದಿನಾಂಕವನ್ನು ಅಕ್ಟೋಬರ್‌ಗೆ ಮುಂದೂಡಲಾಗಿತ್ತು. ಸಾಮಾನ್ಯವಾಗಿ ಬ್ಯಾಂಕ್ ಕಾರ್ಯಾಚರಣೆಗಳನ್ನು ಮಾಡಲು OTP ಅಗತ್ಯವಿದೆ. OTP ಬರದಿದ್ದರೆ ಕೆಲಸಗಳು ನಿಲ್ಲುತ್ತವೆ. ಆನ್‌ಲೈನ್‌ನಲ್ಲಿ ಏನನ್ನಾದರೂ ಖರೀದಿಸುವಾಗ ಸಹ ಇದರ ಅಗತ್ಯವಿದೆ. ಹೀಗಾಗಿ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ಇಂದಿನಿಂದ ಈ ಸಂದೇಶಗಳಿಗೆ ನಿರ್ಬಂಧ
ವೆಬ್‌ಸೈಟ್ ಲಿಂಕ್‌ಗಳು, OTP ಲಿಂಕ್‌ಗಳು, APK ಗಳನ್ನು ಹೊಂದಿದ್ದರೆ ವೈಟ್‌ಲಿಸ್ಟ್ ಮಾಡದ ಕಂಪನಿಗಳಿಂದ SMS ಸಂದೇಶಗಳನ್ನು ನಿರ್ಬಂಧಿಸಲು ಟೆಲಿಕಾಂ ಪ್ರಾಧಿಕಾರವು ಟೆಲಿಕಾಂ ಕಂಪನಿಗಳನ್ನು ಕೇಳಿದೆ. ಈ ಹೊಸ ನಿಯಮ ಅಕ್ಟೋಬರ್ 1 ರಿಂದ ಪ್ರಾರಂಭವಾಗಲಿದೆ. ಅಂದಿನಿಂದ, ಗುರುತನ್ನು ಪರಿಶೀಲಿಸದ ಕಂಪನಿಗಳು ಕಳುಹಿಸಿದ ವೆಬ್‌ಸೈಟ್, APK, OTT ಲಿಂಕ್‌ಗಳೊಂದಿಗೆ ಸಂದೇಶಗಳನ್ನು ಸ್ವೀಕರಿಸಲಾಗುವುದಿಲ್ಲ. ನೀವು ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಿದರೆ, ನಿಮ್ಮ ಫೋನ್‌ನಲ್ಲಿ ವೈರಸ್‌ಗಳು ಬರುವ ಸಾಧ್ಯತೆಯಿದೆ. ಈ ಹೊಸ ನಿಯಮವು ಅಂತಹ ಅಪಾಯವನ್ನು ಕಡಿಮೆ ಮಾಡುತ್ತದೆ.