ಗ್ರಾಮಾಂತರ ಪ್ರದೇಶಗಳಲ್ಲಿ ಖಾಸಗಿ ಮೈಕ್ರೋ ಫೈನಾನ್ಸ್ ಕಂಪನಿಗಳ ಟಾರ್ಚರ್ ಮೇರೆ ಮೀರಿದೆ. ಇವರ ಕಿರುಕುಳ ತಾಳಲಾರದೆ ಗ್ರಾಮಗಳಲ್ಲಿ ನೂರಾರು ಕುಟುಂಬಗಳು ಗ್ರಾಮ ತೊರೆದಿವೆ.ಹೌದು ಕೆಲವು ಮೈಕ್ರೋಫೈನಾನ್ಸ್ ಕಂಪನಿಗಳು ಬಡ ಜನರ ರಕ್ತ ಹೀರುತ್ತಿವೆ.
ರಾಜ್ಯದ ಗ್ರಾಮೀಣ, ನಗರ ಪ್ರದೇಶಗಳಲ್ಲಿ ಸಕ್ರಿಯವಾಗಿರುವ ಕೆಲ ಮೈಕ್ರೋ ಫೈನಾನ್ಸ್ ಹಾಗೂ ಸ್ವ- ಸಹಾಯ ಸಂಘಗಳು ಸಾಲ ವಸೂಲಿಗೆ ಅಳವಡಿಸಿಕೊಂಡಿರುವ ಕ್ರಮ ತಲ್ಲಣ ಸೃಷ್ಟಿಸಿದೆ. ಕೆಲ ಸಂಸ್ಥೆಗಳು ಜನರ ಕಷ್ಟವನ್ನೇ ಬಂಡವಾಳ ಮಾಡಿಕೊಂಡು ಸಾಲ ನೀಡಿ, ಸಾಲ ಮರುಪಾವತಿ ಮಾಡಿಕೊಳ್ಳುವ ಹೊತ್ತಲ್ಲಿ ನೀಡುತ್ತಿರುವ ಕಿರುಕುಳಕ್ಕೆ ಜನ ಬೇಸತ್ತಿದ್ದಾರೆ. ಇದರಿಂದ ಕೆಲವರು ಆತ್ಮಹತ್ಯೆಗೆ ಶರಣಾಗಿದ್ದರೆ, ಇನ್ನೂ ಹಲವರು ಊರು ಬಿಟ್ಟು ತೆರಳುತ್ತಿದ್ದಾರೆ ..!
ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಆರ್‌ಬಿಐ ಆ್ಯಕ್ಟ್ ಪ್ರಕಾರ ಕಾರ್ಯ ನಿರ್ವಹಿಸುತ್ತಿದ್ದರೆ, ಕರ್ನಾಟಕ ಸೊಸೈಟಿಗಳ ನೋಂದಣಿ ಕಾಯಿದೆಯಡಿ ಸ್ವ- ಸಹಾಯ ಸಂಘಗಳು ತಮ್ಮ ಆರ್ಥಿಕ ಚಟುವಟಿಕೆ ನಡೆಸುತ್ತಿವೆ. ರೈತರು, ಕೂಲಿ ಕಾರ್ಮಿಕರು ತಮ್ಮ ಮಕ್ಕಳ ವ್ಯಾಸಂಗ, ಕೃಷಿ, ಮದುವೆ ಸಲುವಾಗಿ ಖಾಸಗಿ ಫೈನಾನ್ಸ್‌ಗಳಲ್ಲಿ ಪಡೆಯುತ್ತಿದ್ದಾರೆ. ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಆಧಾರ್ ಕಾರ್ಡ್ ಕೊಟ್ಟರೆ ಸಾಕು. ಗರಿಷ್ಠ 1 ಲಕ್ಷ ರೂ. ವರೆಗೆ ಸಾಲ ದೊರೆಯುತ್ತದೆ. ಈ ನಂಬಿಕೆಯಿಂದ ಶ್ರೀಸಾಮಾನ್ಯರು ಜನರು, ದಾಖಲೆಗಳ ಕಿರಿಕಿರಿ ಇಲ್ಲ ಎಂದು ಹೆಚ್ಚಿನ ಬಡ್ಡಿ ಇದ್ದರೂ ಮನೆ, ಜಮೀನಿನ ಮೇಲೆ ಸಾಲ ಪಡೆಯುತ್ತಾರೆ.