ಶ್ರೀಹರಿಕೋಟಾ: ಇಸ್ರೋ ಮತ್ತು ನಾಸಾ ನಡುವಿನ ಸಹಯೋಗದ ಪ್ರಯತ್ನವಾದ ನಿಷಾರ್ ಮಿಷನ್, ಜಾಗತಿಕ ಮಟ್ಟದಲ್ಲಿ ಭೂಮಿಯ ವೀಕ್ಷಣೆಗಾಗಿ ಭಾರತೀಯ ಬಾಹ್ಯಾಕಾಶ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ದೊಡ್ಡ ಸಾಮರ್ಥ್ಯ ಪ್ರದರ್ಶಿಸಲಿದೆ ಎಂದು ಇಸ್ರೋದ ಮಾಜಿ ವಿಜ್ಞಾನಿ ರಾಧಾಕೃಷ್ಣ ಕವುಲೂರು ಹೇಳಿದ್ದಾರೆ.
ನಿಸಾರ್ ಒಂದು ಜಾಗತಿಕ ಧ್ಯೇಯವಾಗಿದ್ದು, ಅದರ ಡೇಟಾವನ್ನು ವಿಶ್ವಾದ್ಯಂತ ಬಳಕೆದಾರರು ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ನಿಸಾರ್ನ ಮಾಜಿ ಗ್ರೌಂಡ್ ಸೆಗ್ಮೆಂಟ್ ಎಂಜಿನಿಯರ್ ಮತ್ತು ಮಾಜಿ ಯೋಜನಾ ವ್ಯವಸ್ಥಾಪಕ ರಾಧಾ ಕೃಷ್ಣ ಕವುಲೂರು ಹೇಳಿದ್ದಾರೆ.
ಜುಲೈ 30 ಸಂಜೆ 5:40ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ GSLV-Mk II ರಾಕೆಟ್ ಮೂಲಕ ನಿಸಾರ್ ಉಪಗ್ರಹವನ್ನು ಇಸ್ರೋ ಉಡಾವಣೆ ಮಾಡಲಿದೆ. GSLV -F16 ಭಾರತದ ಜಿಯೋಸಿಂಕ್ರೋನಸ್ ಉಪಗ್ರಹ ಉಡಾವಣಾ ವಾಹನದ 18 ನೇ ಹಾರಾಟ ಮತ್ತು ಸ್ಥಳೀಯ ಕ್ರಯೋಜೆನಿಕ್ ಹಂತದ 9 ನೇ ಕಾರ್ಯಾಚರಣಾ ಹಾರಾಟವಾಗಿದೆ.
ಈ ಮಿಷನ್ ಸೂರ್ಯ-ಸಿಂಕ್ರೋನಸ್ ಧ್ರುವ ಕಕ್ಷೆಯನ್ನು ಸಾಧಿಸಿದ ಮೊದಲ GSLV ಉಡಾವಣೆಯಾಗಿದೆ. 51.7 ಮೀಟರ್ ಎತ್ತರದ, ಮೂರು ಹಂತದ ರಾಕೆಟ್ ಚೆನ್ನೈನಿಂದ ಸುಮಾರು 135 ಕಿಮೀ ಪೂರ್ವಕ್ಕೆ ಎರಡನೇ ಉಡಾವಣಾ ಪ್ಯಾಡ್‌ನಿಂದ ಉಡಾವಣೆಯಾಗಲಿದೆ. ಉಡಾವಣೆಯ ಸುಮಾರು 19 ನಿಮಿಷಗಳ ನಂತರ, ಉಪಗ್ರಹವನ್ನು ಅದರ ಗೊತ್ತುಪಡಿಸಿದ ಕಕ್ಷೆಗೆ ಸೇರಿಸುವ ನಿರೀಕ್ಷೆಯಿದೆ.


