ಸುದ್ದಿ

 ಈ ಮಹಿಳೆಗೆ ವಿಶ್ವವೇ ಬಹುಪರಾಕ್.. ​

ಎಷ್ಟೋ ಮಂದಿ ತಾಯಂದರು ತಮ್ಮ ಗ್ಲಾಮರ್​ ಹಾಳಾಗುತ್ತೆ ಅಂತಾ ತಮ್ಮ ಮಕ್ಕಳಿಗೆ ಎದೆ ಹಾಲನ್ನ ನೀಡೋದಕ್ಕೆ ಹಿಂಜರಿಯುತ್ತಾರೆ.. ಆದ್ರೆ ಅಮೆರಿಕದ ಟೆಕ್ಸಾಸ್​ ನಿವಾಸಿಯಾಗಿರುವ ಅಲಿಸಾ ಒಗ್ಲೆಟ್ರೀ ಸುಮಾರು 2,645 ಲೀಟರ್​​ ಎದೆಹಾಲನ್ನ ದಾನ ನೀಡಿ ಮಾನವೀಯತೆ ಮೆರೆದಿದ್ದಾರೆ..ಇದೇ ವೇಳೆ ಈಕೆಯ ಸಾಧನೆಗೆ ಗಿನ್ನಿಸ್​ ಅವಾರ್ಡ್​ ಕೂಡ ಬಂದಿದೆ.. 2014ರಲ್ಲಿ ಅಲಿಸಾ ಒಗ್ಲೆಟ್ರೀ 1,569.79 ಲೀಟರ್ ಎದೆಹಾಲು ದಾನ ಮಾಡಿ ವಿಶ್ವ ದಾಖಲೆ ಬರೆದಿದ್ದರು. ಇದೀಗ ತಮ್ಮದೇ ಹಳೆಯ ದಾಖಲೆಯನ್ನು ಮುರಿದಿದ್ದಾರೆ. ಒಂದು ಲೀಟರ್ ಎದೆಹಾಲು ಹುಟ್ಟಿದ ಮಕ್ಕಳ ಬದುಕಿಗೆ ದಾನ ಮಾಡಿದ್ದಾರೆ. ಇದೇ ದಾನದಿಂದಾಗಿ ಸುಮಾರು 3,50,000 ಮಕ್ಕಳಿಗೆ ಅನುಕೂಲವಾಗಿದೆ. ಇನ್ನೂ ಅಲಿಸಾ ಒಗ್ಲೆಟ್ರೀ ಅವರಿಗೆ ಈಗಾಗಲೇ ನಾಲ್ವರು ಮಕ್ಕಳಿದ್ದಾರೆ. ತಮ್ಮ ಮಕ್ಕಳು ಎದೆಹಾಲು ಕುಡಿಯುವುದನ್ನು ನಿಲ್ಲಿಸಿದ ಬಳಿಕ ಅವರು ಎದೆಹಾಲು ದಾನ ಮಾಡುವುದನ್ನು ಮುಂದುವರೆಸಿದ್ದಾರಂತೆ. ಈ ಬಗ್ಗೆ ಖಾಸಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ ಅವ್ರು ಪ್ರತಿ 3 ಗಂಟೆಗೊಮ್ಮೆ ಎದೆಹಾಲು ಪಂಪ್ ಮಾಡುತ್ತಾರಂತೆ.  ಹೀಗೆ ಪಂಪ್​ ಮಾಡಿದ ಹಾಲನ್ನ ಫ್ರಿಜ್​ನಲ್ಲಿ ಸಂಗ್ರಹಿಸುತ್ತಾರಂತೆ.. ನಂತರ ಅದನ್ನು ಮಿಲ್ಕ್ ಬ್ಯಾಂಕ್‌ಗೆ ಹಸ್ತಾಂತರ ಮಾಡ್ತಾರಂತೆ.

Comments (0)

Your email address will not be published. Required fields are marked *

Back to top button